ಕೋಲ್ಕತ್ತಾ, ನ.18 : ಭಾರತದಲ್ಲಿ ನಡೆಯಲಿರುವ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದ್ದು, ಸಕಲ ರೀತಿಯ ಸಿದ್ಧತೆಗಳು ಭರದಿಂದ ಸಾಗಿವೆ. ನವಂಬರ್ 22 ನಡೆಯಲಿರುವ ಟೆಸ್ಟ್ ಗೆ ಅಭಿಮಾನಿಗಳು ಹಾಗೂ ಆಟಗಾರರು ಸಹ ಕಾತುರರದಿಂದ ಕಾಯುತ್ತಿದ್ದಾರೆ. ಅಲ್ಲದೆ ಇದು ಭಾರತದ ಪಾಲಿಗೆ 540ನೇ ಟೆಸ್ಟ್. ಬಾಂಗ್ಲಾದೇಶದ ವಿರುದ್ಧ ಮೈದಾನಕ್ಕಿಳಿಯಲಿರುವ ಟೀಮ್ ಇಂಡಿಯಾ, ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಭರದ ಸಿದ್ಧತೆ ನಡೆಸಿವೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಸೇರಿದಂತೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಈಡನ್ ಗಾರ್ಡನ್ ಗೋಡೆಗಳನ್ನು ಶೃಂಗರಿಸಲಾಗಿದ್ದು, ಗೋಡೆಗಳು ಕ್ರಿಕೆಟ್ ಕಥೆಗಳನ್ನು ಹೇಳಲಿವೆ. ಗೋಡೆಗಳಲ್ಲಿ ಗಲ್ಲಿ ಕ್ರಿಕೆಟ್ ನಿಂದ ಆರಂಭಿಸಿದ ಆಟಗಾರ ಹೇಗೆ ದೊಡ್ಡ ಸಾಧನೆ ಮಾಡಿದ ಎಂಬುದನ್ನು ಚಿತ್ರದ ಮೂಲಕ ತಿಳಿಸಲಾಗಿದೆ. ಈ ಕಾರ್ಯಕ್ಕಾಗಿ 20ಕ್ಕೂ ಹೆಚ್ಚು ಚಿತ್ರಕಲಾವಿದರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಸಯಾನ್ ಮುಖಜರ್ಿ ತಿಳಿಸಿದ್ದಾರೆ.