ಲೋಕದರ್ಶನವರದಿ
ತಾಳಿಕೋಟೆ೦೯: ಹೊರರಾಜ್ಯಗಳಿಗೆ ದುಡಿಯಲು ಹೋಗಿರುವ ತಾಲೂಕಿನ ಜನರು ಮರಳಿ ಆಗಮಿಸುತ್ತಿದ್ದು ಅವರುಗಳಿಗೆ ಹೋಂ ಕ್ವಾರೆಂಟೆನ್ ಮಾಡಲು ವಸತಿಗಾಗಿ ತಾಲೂಕಾಡಳಿತದಿಂದ ಸಿದ್ದತೆ ಕೈಗೊಳ್ಳಲಾಗುತ್ತಿದ್ದು ಶನಿವಾರರಂದು ತಾಲೂಕಾಡಳಿತದ ಅಧಿಕಾರಿಗಳು ಪಟ್ಟಣದಲ್ಲಿಯ ಹಾಸ್ಟೇಲ್ ಮತ್ತು ವಸತಿ ಶಾಲೆಗಳಿಗೆ ಬೆಟ್ಟಿ ನೀಡಿ ಅಲ್ಲಿಯ ಮೂಲಬೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.
ಪಟ್ಟಣದ ಇಂದಿರಾಗಾಂದಿ ವಸತಿ ಶಾಲೆ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ, ಎಸ್.ಕೆ.ಹೈಸ್ಕೂಲ್, ಸಕರ್ಾರಿ ಪ್ರೌಢ ಶಾಲೆಯ ಕಟ್ಟಡಗಳನ್ನು ಪರಿಶೀಲಿಸಿದ ತಹಶಿಲ್ದಾರ ಅನೀಲಕುಮಾರ ಢವಳಗಿ ಅವರು ಆಯಾ ಸ್ಥಳಗಳನ್ನು ನಿಗಧಿಪಡಿಸಿದರು.
ಈ ಸಮಯದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ತಹಶಿಲ್ದಾರ ಅನೀಲಕುಮಾರ ಢವಳಗಿ ಅವರು ಮಹಾರಾಷ್ಟ್ರ, ಗುಜರಾತ, ತಮಿಳನಾಡು, ರಾಜಸ್ಥಾನ, ದೇಹಲಿ, ರಾಜ್ಯಗಳಿಗೆ ದುಡಿಯಲು ಹೋಗಿರುವವರನ್ನು ಮರಳಿ ಆಗಮಿಸುತ್ತಿದ್ದ ಅವರುಗಳಿಗೆ ಹೋಂ ಕ್ವಾರೆಂಟೆನ್ ಮಾಡಿಸಲು ಅವರವರ ಗ್ರಾಮಗಳಿಗೆ ಕಳುಹಿಸುವ ಬದಲು ಮುಂಜಾಗೃತವಾಗಿ ಪಟ್ಟಣದಲ್ಲಿಯ ಕೆಲವು ಶಾಲೆಗಳನ್ನು ವಸತಿ ನಿಲಯಗಳನ್ನು ಪಡೆದುಕೊಳ್ಳಲಾಗಿದ್ದು ಅವರುಗಳಿಗೆ 14 ದಿನಗಳ ಕಾಲ ಕ್ವಾರೆಂಟೆನ್ಗಾಗಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ ಸದ್ಯ 13 ಜನ ಹೊರ ರಾಜ್ಯದಿಂದ ಆಗಮಿಸಿದ್ದು 12 ಜನರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಿ ಇಂದಿರಾಗಾಂದಿ ವಸತಿ ಶಾಲೆಯಲ್ಲಿ ಕ್ವಾರೆಂಟೆನ್ಗೆ ವ್ಯವಸ್ಥೆ ಮಾಡಲಾಗಿದೆ ಇನ್ನೂ ಒಬ್ಬರಿಗೆ ತುಂಬಗಿ ಗ್ರಾಮದ ಬಿಸಿಎಂ ಹಾಸ್ಟೇಲ್ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದು ಅಲ್ಲದೇ ಕಲಕೇರಿ ಪಟ್ಟಣದಲ್ಲಿಯ ಸಿದ್ದಾರ್ಥ ಪ್ರೌಢ ಶಾಲೆ ಮತ್ತು ಬಿ.ಸಿ.ಎಂ.ಹಾಸ್ಟೇಲ್ನ್ನೂ ಕೂಡಾ ಪಡೆದುಕೊಳ್ಳಲಾಗಿದ್ದು ಈ ಪಟ್ಟಣದ ಸುತ್ತಮುತ್ತಲಿನ ಗ್ರಾಮದವರು ಹೊರರಾಜ್ಯದಿಂದ ಆಗಮಿಸಿದರೆ ಅವರುಗಳಿಗೆ ಕ್ವಾರೆಂಟೆನ್ಗಾಗಿ ವ್ಯವಸ್ಥೆ ಮಾಡಲಾಗಿದೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಎಲ್ಲ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಒಳಗೊಂಡಂತೆ ಅಗತ್ಯವಿರುವ ಎಲ್ಲಮೂಲಬೂತ ಸೌರ್ಕಗಳನ್ನು ಕಲ್ಪಿಸಲಾಗಿದೆ ಹೊರರಾಜ್ಯದಿಂದ ಬಂದ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಲು ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಪ್ರಕಾಶ ಹುಕ್ಕೇರಿ ಅವರಿಗೆ ಸೂಚಿಸಿದ್ದೇನೆ ಆಗಮಿಸಿದವರುಗಳಿಗೆ ಶಾಲೆಗಳನ್ನು ಪ್ರವೇಶಿಸಲು ಮತ್ತು ಕುಟುಂಭಗಳಿಗೆ ಪ್ರತ್ಯೇಕ ಕೊಟ್ಟಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಈ ಸ್ಥಳಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಿ ಎರಡುದಿನಗಳಿಗೊಮ್ಮೆ ತಪಾಸಣೆ ನಡೆಸಲಿದ್ದಾರೆಂದು ತಹಶಿಲ್ದಾರ ಅನೀಲಕುಮಾರ ಢವಳಗಿ ಅವರು ಪತ್ರಿಕೆಗೆ ತಿಳಿಸಿದರು.
ಈ ಸಮಯದಲ್ಲಿ ತಾಪಂ ಇಓ ಶಿವಪೂರೆ, ಪುರಸಭೆ ಮುಖ್ಯಾಧಿಕಾರಿ ಸಿ.ವ್ಹಿ.ಕುಲಕಣರ್ಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಂಡಿಗೇರಿ, ತಹಶಿಲ್ದಾರ ಕಚೇರಿ ಸಿಬ್ಬಂದಿ ಮುನ್ನಾ ಅತ್ತಾರ, ವಸತಿ ನಿಲಯಗಳ ವಾರ್ಡನ್ಗಳು ಉಪಸ್ಥಿತರಿದ್ದರು.