ವಿವಿಧ ಜೀವನೋಪಾಯ ಚಟುವಟಿಕೆಗಳ ಯಶೋಗಾಥೆ ಸಿದ್ದಪಡಿಸಿ: ಜಿ.ಪಂ ಅಧ್ಯಕ್ಷ ಪಾಟೀಲ್

ಗದಗ 07: ಸಂಜೀವಿನಿ ಯೋಜನೆಯಡಿ ಮಹಿಳೆಯರು ತೊಡಗಿರುವ ವಿವಿಧ ಜೀವನೋಪಾಯ ಚಟುವಟಿಕೆಗಳ ಹಾಗೂ ವಾರದ ಸಂತೆಗಳ ಕುರಿತು ಯಶೋಗಾಥೆಗಳನ್ನು ಸಿದ್ದಪಡಿಸಲು ಜಿ.ಪಂ ಅಧ್ಯಕ್ಷರಾದ ಕು. ಸಿದ್ಧಲಿಂಗೇಶ್ವರ. ಎಚ್. ಪಾಟೀಲ್ ಸೂಚಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ದಿ. 2ರಂದು ಜರುಗಿದ ಸಂಜೀವಿನಿ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗದಗ ಮತ್ತು ನರಗುಂದ ತಾಲೂಕಿನಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸುವ ಮೂಲಕ ಕೆ.ಎಂ.ಎಫ್ ಸಹಯೋಗದಲ್ಲಿ ಮಹಿಳಾ ಹಾಲು ಒಕ್ಕೂಟಗಳನ್ನು ಸ್ಥಾಪಿಸಲು ಅಧ್ಯಕ್ಷರು ತಿಳಿಸಿದರು. ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಸ್ವ ಸಹಾಯ ಗುಂಪುಗಳ ಉತ್ಪನ್ನಗಳ ತಯಾರಿಕೆ ಹಾಗೂ ಒಕ್ಕೂಟಗಳ ಕಾರ್ಯನಿರ್ವಹಣೆಗೆ ನಿಮರ್ಿಸಲಾಗುತ್ತಿರುವ ಕಾಮನ್ ವಕರ್್ಶೆಡ್ಗಳ ಕಾಮಗಾರಿಗಳ ಹಾಗೂ ಸಮಸ್ಯೆಗಳ ಸಮಗ್ರ ವರದಿ ಸಲ್ಲಿಸಬೇಕು. ಸ್ವ- ಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿಗೆ ಅವಶ್ಯಕವಿರುವ ಹೆಚ್ಚುವರಿ ಅನುದಾನಕ್ಕೆ ಅಗತ್ಯದ ಪ್ರಸ್ತಾವಣೆ ಸಲ್ಲಿಸಬೇಕು. ಪಕ್ಕದ ರಾಜ್ಯಗಳಲ್ಲಿ ಸ್ವ ಸಹಾಯ ಗುಂಪು ಹಾಗೂ ಒಕ್ಕೂಟಗಳಿಂದ ಅನುಕೂಲಗಳನ್ನು ಪಡೆದು ಅಭಿವೃದ್ಧಿ ಹೊಂದಿರುವಂತೆ ಜಿಲ್ಲೆಯ ಒಕ್ಕೂಟಗಳ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಕ್ಷೇತ್ರ ಭೇಟಿ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷ ಕು. ಸಿದ್ಧಲಿಂಗೇಶ್ವರ. ಎಚ್. ಪಾಟೀಲ್ ಸೂಚನೆ ನೀಡಿದರು. ಜಿ.ಪಂ. ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ, ಜಿಲ್ಲಾ ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಯಲಿಗಾರ, ತಾಲೂಕುಗಳ ಕಾರ್ಯಕ್ರಮ ವ್ಯವಸ್ಥಾಪಕರು, ಸಮೂಹ ಮೇಲ್ವಿಚಾರಕರು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ