ಹೂವಿನಹಡಗಲಿ 27 : ತಾಲೂಕಿನ ಕುರುವತ್ತಿಯಲ್ಲಿಂದು ಜರುಗುವ ನಾಡಿನಭಕ್ತರ ಆರಾಧ್ಯದೈವ ಹೂವಿನಹಡಗಲಿ ತಾಲ್ಲೂಕಿನ ಕುರುವತ್ತಿ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಗುರುವಾರ ಸಂಜೆ ನಡೆಯಲಿದೆ. ಬುಧವಾರ ಶಿವರಾತ್ರಿಯಂದು ದೇವಸ್ಥಾನದ ಆಡಳಿತ ಸಿಬ್ಬಂದಿ ಅರ್ಚಕ ಸೋಮು ಪೂಜಾರ ಹಾಗೂ ಬಾಬುದಾರರ ಸಮ್ಮುಖದಲ್ಲಿ ರಥೋತ್ಸವಕ್ಕೆಕಳಸಾರೋಹಣ ಜರುಗಿತು.
ಎರಡು ದಿನಗಳ ಕಾಲ ನಡೆಯುವ ಜಾತ್ರಗೆ ನಾಡಿನ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಭರದ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಕಾರ್ಯೊನ್ಮುಖರಾಗಿದ್ದಾರೆ.ಕಳೆದ ಮೂರು ದಿನದಿಂದ ಗ್ರಾ ಪಂ ಪಿ.ಡಿ.ಒ, ಗುತ್ತೆಪ್ಪ ತಳವಾರ ಅಧ್ಯಕ್ಷ ಭರಮಪ್ಪ ಕುಂಚೂರು, ಹಿರೇಹಡಗಲಿ ಪಿಎಸ್‌ಐ ಭರತ್ ಪ್ರಕಾಶ, ಎ.ಎಸ್.ಐ ಮಲ್ಲಿಕಾರ್ಜುನ ನಾಯ್ಕ, ಸೇರಿದಂತೆ ಗ್ರಾ.ಪಂ ಸಿಬ್ಬಂಧಿಯವರು ರಸ್ತೆ ಬದಿಯ ತಿಪ್ಪೆಗುಂಡಿಗಳನ್ನು ತೆರವು ಮಾಡುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ನದೀ ತೀರದಲ್ಲಿ ಮಹಿಳೆಯರಿಗೆ ಉಡುಪು ಬದಲಾಯಿಸಲು ಪತ್ಯೇಕ ತಾತ್ಕಾಲಿಕ ನಿರ್ಮಿಸಲಾಗಿದೆ. ಕೊಠಡಿಗಳನ್ನುಜಾತ್ರಾ ಸ್ಥಳದಲ್ಲಿ ಧೂಳು ಆಗದಂತೆ ರಸ್ತೆಗಳಿಗೆ ಟ್ಯಾಂಕರ್ ಮೂಲಕ ನೀರು ಸಿಂಪಡಿಸಲಾಗುತ್ತದೆ. ಇನ್ನು ನದಿಯಿಂದ ಜಾತ್ರಾ ಪ್ರದೇಶಕ್ಕೆ ಹೋಗುವ 100 ಫೀಟ್ ಅಡಿಯ ತಾತ್ಕಾಲಿಕ ಮುಖ್ಯ ರಸ್ತೆ ಕೂಡಾ ಸಂಪೂರ್ಣ ಮುಗಿದಿದೆ.
ಮೈಲಾರ ಜಾತ್ರೆಯಲ್ಲಿ ವಿಶೇಷ ಶೌಚಾಲಯ ಮಾಡಿದಂತೆ ಕುರುವತ್ತಿಯಲ್ಲಿಯೂ ನೂರಾರು ಶೌಚಾಲಯ ನಿರ್ಮಿಸುತ್ತಿದ್ದು ವಿಶೇಷವಾಗಿದೆ ಎಂದು ಪಿಡಿಒ ಗುತ್ತಪ್ಪ ತಿಳಿಸಿದರು.