ಲೋಕದರ್ಶನವರದಿ
ಹುನಗುಂದ; 2020ರ ಮಾಚರ್್ ಮತ್ತು ಎಪ್ರೀಲ್ದಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ವಾಷರ್ಿಕ ಪರೀಕ್ಷೆಯಲ್ಲಿ ಈ ಬಾರಿಯು ನಮ್ಮ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆಯುವ ಸಲುವಾಗಿ ಅನೇಕ ವಿಶಿಷ್ಠ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗುರುರಾಜ ದಾಶ್ಯಾಳ ಹೇಳಿದರು.
ಶನಿವಾರ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ 2019-20 ನೆಯ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ಕಾರ್ಯಕ್ರಮಗಳನ್ನು ತಿಳಿಸಲು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹುನಗುಂದ ತಾಲೂಕು ಸತತ ಮೂರು ವರ್ಷಗಳಿಂದ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದು ಆ ಸ್ಥಾನವನ್ನು ಉಳಿಸಿಕೊಳ್ಳಲು ಈ ಬಾರಿಯು ನಾವು ಅನೇಕ ವಿನೂತ ಕಾರ್ಯಕ್ರಮಗಳನ್ನು ಶಾಲಾ ಪ್ರಾರಂಭದ ಹಂತದಿಂದ ಮಾಡುತ್ತಾ ಬಂದಿದ್ದು.ಎಸ್.ಎಸ್.ಎಲ್.ಸಿ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ನಾಲ್ಕು ರೂಪನಾತ್ಮಕ ಪರೀಕ್ಷೆ ಮತ್ತು ಆರು ತಿಂಗಳಿಗೊಮ್ಮೆ ಎರಡು ಸಂಕಲನಾತ್ಮಕ ಪರೀಕ್ಷೆಗಳನ್ನು ತಗೆದುಕೊಂಡು ಅದರಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಬೋಧನೆಯನ್ನು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.ಪ್ರತಿಯೊಂದು ಶಾಲೆಯಲ್ಲಿ ಪ್ರತಿ ಹದನೈದು ದಿನಕ್ಕೆ ಮತ್ತು ತಿಂಗಳಿಗೊಮ್ಮೆ ಆ ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರೊಂದಿಗೆ ಪಠ್ಯ ವಿಚಾರಕ್ಕೆ ಸಂಬಂಧಿಸಿದ ಸಭೆ ಕರೆದು ಚಚರ್ಿಸಿ ಮಕ್ಕಳ ಕಲಿಕೆಯ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ.ಕಳೆದ ಅಗಷ್ಟ ತಿಂಗಳದಲ್ಲಿ ಪ್ರತಿ ಬ್ಲಾಕ್ ಹಂತದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಪ್ರತಿಯೊಂದು ವಿಷಯಕ್ಕೆ 6 ಜನ ಸಂಪನ್ಮೂಲ ಶಿಕ್ಷಕರಿಂದ ಪರೀಕ್ಷೆಯ ಪಾಸಿಂಗ್ ಪ್ಯಾಕೇಜ್ ತಯಾರಿಸಿ ಅದನ್ನು ವಿದ್ಯಾಥರ್ಿಗಳಿಗೆ ಕಲಿಸಲಾಗುತ್ತಿದೆ.ಇನ್ನು ಪ್ರತಿ ತಿಂಗಳು ತಾಯಂದಿರ ಮತ್ತು ಪೋಷಕರ ಸಭೆಯನ್ನು ನಡೆಸಿ ಪ್ರತಿ ವಿದ್ಯಾಥರ್ಿಗಳ ಪ್ರಗತಿಯನ್ನು ವಿಶ್ಲೇಸಿಸುವ ವ್ಯವಸ್ಥೆಯು ಕೂಡ ಪ್ರತಿ ಶಾಲೆಯಲ್ಲಿ ಮಾಡಲಾಗುತ್ತಿದೆ.ಅಷ್ಟೆಯಲ್ಲ ಪಿಕ್ನಿಕ್ ಪಝಲ್ ಕಾರ್ಯಕ್ರಮ ಮಾಡುವ ಮೂಲಕ ಶಾಲೆಯ 10 ನೆಯ ತರಗತಿಯ ಮಕ್ಕಳನ್ನು ಬೇರೆ ಸ್ಥಳಕ್ಕೆ ಕರೆದ್ಯೋದು ಅವರಿಗೆ ಅಲ್ಲಿ ಎಲ್ಲ ವಿಷಯಗಳ ಬಗ್ಗೆ ವಿಶೇಷ ಚಚರ್ೆ ಮಾಡಿಸಿ ಮನದಟ್ಟು ಮಾಡಲಾಗುವುದು. ಜನವರಿಯಿಂದ ನಾಲ್ಕು ಸರಣಿ ಪರೀಕ್ಷೆಯನ್ನು ತಗೆದುಕೊಳಲಾಗುತ್ತಿದೆ.ಈ ಬಾರಿ ವಿಶೇಷವಾಗಿ ನಾಲ್ಕನೆಯ ಸರಣೆ ಪರೀಕ್ಷೆಯನ್ನು ರಾಜ್ಯ ಮಟ್ಟದ ವಾಷರ್ಿಕ ಪರೀಕ್ಷೆಯ ಮಾದರಿಯಲ್ಲಿ ನಾಲ್ಕೈದು ಶಾಲೆಗೆ ಒಂದು ಪರೀಕ್ಷೆ ಕೇಂದ್ರವನ್ನು ಮಾಡಿ ಫೆ-17 ರಿಂದ 24ರವರಗೆ ವಿಶೇಷ ಪರೀಕ್ಷೆಯನ್ನು ನಡೆಸುವ ತಯಾರಿಯನ್ನು ಮಾಡಲಾಗುತ್ತಿದೆ ಮತ್ತು ರಾಜ್ಯ ಮಟ್ಟದ ಮೌಲ್ಯಮಾಪನದ ಮಾದರಿಯಂತೆ ಮೌಲ್ಯಮಾಪನ ಮಾಡಲಾಗುವುದು. ಅದಕ್ಕೆ ಶಾಲೆಯ ಎಲ್ಲ ಶಿಕ್ಷಕರು ಮತ್ತು ಸಮುದಾಯ ವಿಶೇಷ ಸಹಕಾರ ಅತ್ಯಗತ್ಯವಾಗಿದೆ.ವಾಷರ್ಿಕ ಪರಿಕ್ಷೆಗೆ ಮುಂಚೆ ಈ ರೀತಿ ಪರೀಕ್ಷೆ ನಡೆಸುವುದರಿಂದ ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಬಹುದು ಮತ್ತು ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎನ್ನುವುದು ವಿದ್ಯಾಥರ್ಿಗಳಲ್ಲಿ ಮನದಟ್ಟಾಗುತ್ತದೆ.ಅಷ್ಟೆಯಲ್ಲ ಶಾಲೆಯ ಮುಗಿದ ಮೇಲೆ ಒಬ್ಬ ಜವಾಬ್ದಾರಿ ಶಿಕ್ಷಕರ ಮುಖಾಂತರ ಮಕ್ಕಳ ಓದಿಗೆ ಅವಕಾಶ ನೀಡುವ ಕೀಲಿಯಾಕದ ಶಾಲೆಯೆನ್ನುವ ವಿಶೇಷ ಕಾರ್ಯಕ್ರಮ, ವಿಜ್ಞಾನ ಪ್ರಯೋಗ ಪ್ರಾತೀಕ್ಷಿಕೆ,ಹಳೆಯ ವಿದ್ಯಾಥರ್ಿಗಳಿಂದ ವಿಶೇಷ ಕಲಿಕೆ ಸಿದ್ಧತೆ ಕುರಿತು ಪ್ರೇರಣೆ ನೀಡಿಸುವುದು,ಪ್ರಶ್ನೆ ಪತ್ರಿಕೆಯ ಸಮಾಲೋಚನೆ ಕಾರ್ಯಕ್ರಮ,ಮಕ್ಕಳ ಏಕಾಗ್ರತೆಗೆ ಯೋಗ ತರಬೇತಿ ಮತ್ತು ಫೆಬ್ರವರಿಯಲ್ಲಿ ಮಕ್ಕಳ ಪರೀಕ್ಷೆ ಸಿದ್ಧತೆ ಮತ್ತು ಸಮಸ್ಯೆಯ ಕುರಿತು ಪೋನ್ ಇನ್ ನೇರ ಕಾರ್ಯಕ್ರಮ ನಡೆಸಲಾಗುವುದು ಎಂದರು.ಶಿಕ್ಷಕ ಎಸ್.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಿ.ಬಿ.ಹಿರೇಗುದ್ದಿ, ಎಸ್.ಬಿ,ಸಜ್ಜನ,ಎಸ್.ಎಚ್.ಮೇಟಿ, ಬಿ.ಜಿ.ವಡವಡಗಿ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.