ಮಡಿವಾಳ ಮಾಚಿದೇವ, ಸಂತ ಸೇವಾಲಾಲ, ಸವಿತಾ ಮಹಷರ್ಿ, ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಜಯಂತಿಗಳ ಪೂರ್ವಭಾವಿ ಸಭೆ

ಬೆಳಗಾವಿ: 23 :ಜಿಲ್ಲಾಡಳಿತದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಮಡಿವಾಳ ಮಾಚಿದೇವ, ಸಂತ ಸೇವಾಲಾಲ, ಸವಿತಾ ಮಹಷರ್ಿ, ಛತ್ರಪತಿ ಶಿವಾಜಿ, ಸಂತ ಕವಿ ಸರ್ವಜ್ಞ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳದ ಅಶೋಕ ದುಡಗುಂಟಿ ಅವರು ತಿಳಿಸಿದರು.     

  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ (ಜ.23) ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಫೆಬ್ರುವರಿ 1 ರಂದು ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹಷರ್ಿ ಜಯಂತಿ; ಫೆಬ್ರುವರಿ 15 ರಂದು ಸಂತ ಸೇವಾಲಾಲ ಜಯಂತಿ; ಫೆಬ್ರುವರಿ 19 ರಂದು ಛತ್ರಪತಿ ಶಿವಾಜಿ ಜಯಂತಿ; ಫೆಬ್ರುವರಿ 20 ರಂದು ಸಂತ ಕವಿ ಸರ್ವಜ್ಞ ಜಯಂತಿ ಹಾಗೂ 21 ರಂದು ಕಾಯಕ ಶರಣರ ಜಯಂತಿಗಳನ್ನು ಆಚರಿಸಲು ನಿರ್ಧರಿಸಲಾಯಿತು.

ಅಂದು ಬೆಳಿಗ್ಗೆ ಎಲ್ಲ ಸರಕಾರಿ ಕಚೇರಿಗಳಲ್ಲಿ ಭಾವಚಿತ್ರಗಳನ್ನು ಇಟ್ಟು ಆಚರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ ಅವರು ತಿಳಿಸಿದರು. 

ಫೆಬ್ರುವರಿ 1 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕೋಟೆ ಕೆರೆಯಿಂದ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹಷರ್ಿ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಗಿ ಕುಮಾರ ಗಂಧರ್ವ ಕಲಾ ರಂಗಮಂದಿರ ತಲಪುವುದು.

ಫೆಬ್ರುವರಿ 15 ರಂದು ಸಂತ ಸೇವಾಲಾಲ  ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ  ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾ ಮಂದಿರದ ಆವರಣದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಜರಗುವುದು.

ಫೆಬ್ರುವರಿ 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಗುವುದು. ಅಂದು ಬೆಳಗ್ಗೆ 9.30ಕ್ಕೆ ನಗರದ ಶಿವಾಜಿ ಉದ್ಯಾವನದಿಂದ ಫುಲಭಾಗ ಗಲ್ಲಿ ಮಾರ್ಗವಾಗಿ ನಾಥಪೈ ವೃತ್ತದವರೆಗೆ ಮೆರವಣಿಗೆ ಮತ್ತು ಸಂಜೆ 5.30ಕ್ಕೆ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿರುತ್ತದೆ. 

ಫೆಬ್ರುವರಿ 20 ರಂದು ಸಂತಕವಿ ಸರ್ವಜ್ಞರ ಜಯಂತಿನ್ನು ಬೆಳಗ್ಗೆ 9.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮೇರವಣಿಗೆ ಹಾಗೂ 11.30ಕ್ಕೆ ಕುಮಾರ ಗಂಧರ್ವ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸುವ ಮೂಲಕ ಆಚರಿಸಲಾಗುವುದು ಎಂದು ಅವರು ಹೇಳಿದರು. 

ಫೆಬ್ರುವರಿ 21 ರಂದು ಕಾಯಕ ಶರಣರ ಜಯಂತಿಯನ್ನು ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಹೇಳಿದರು.

ಈ ಎಲ್ಲಾ ಜಯಂತಿಯ ಅಂಗವಾಗಿ ರಸ್ತೆಗಳ ಸ್ವಚ್ಚತೆ, ವಿವಿಧ ವೃತ್ತಗಳ ಸ್ವಚ್ಚತೆ, ವೇದಿಕೆ ದೀಪಾಲಂಕಾರ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ  ವಿದ್ಯಾವತಿ ಭಜಂತ್ರಿ ಹಾಗೂ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.