ಲೋಕದರ್ಶನ ವರದಿ
ರಾಯಬಾಗ 08: ನ.15 ರಂದು ನಡೆಯಲಿರುವ ವಿಶ್ವಚೇತನ ಸಂತಶ್ರೀ ಕನಕದಾಸರ 532ನೇ ಜಯಂತಿ ಉತ್ಸವವನ್ನು ತಾಲೂಕಾ ಆಡಳಿತ ಹಾಗೂ ಸಮಾಜದ ಸಂಘಟನೆಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಲು ತಹಶೀಲ್ದಾರ ಡಿ.ಎಚ್.ಕೋಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಇತ್ತಿಚೆಗೆ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರರವರು, ನ.15 ರಂದು ಬೆಳೆಗ್ಗೆ 9 ಗಂಟೆಗೆ ವಿವಿಧ ಕಲಾತಂಡಗಳೊಂದಿಗೆ ಕನಕದಾಸರ ಭಾವಚಿತ್ರ ಭವ್ಯಮೆರವಣೆಗೆ ನಡೆಯಲಿದೆ. 10 ಗಂಟೆಗೆ ವೇದಿಕೆಯ ಕಾರ್ಯಕ್ರಮ ಜರುಗಲಿದೆ ಮತ್ತು ಕನಕದಾಸರ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಕೂಡಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕುರುಬ ಸಮಾಜದ ಮುಖಂಡ ಹಾಲಪ್ಪ ಘಾಳಿ, ಅಣ್ಣಪ್ಪ ಘಂಟಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಶಿವಪುತ್ರ ಹಾಡಕರ, ಕಾರ್ಯದರ್ಶಿ ಲಖನ ಕಟ್ಟಿಕಾರ, ಮಹಾದೇವ ಶಿರಗೂರೆ, ಏಕನಾಥ ಮಾಚಕನೂರ, ಸಿದ್ದು ಪೂಜಾರಿ, ಗೋಪಾಲ ಕೊಚೇರಿ, ಕಲ್ಲಪ್ಪ ಹಾರೂಗೇರಿ, ಲಕ್ಷ್ಮಣ ನಾಯಿಕ, ಪಿ.ಎಸ್.ಪತ್ತಾರ, ಆರ್.ಎಸ್.ಪಾಟೀಲ, ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.