ಧಾರವಾಡ08: ಕಾರಾಗೃಹಗಳಿಗೆ ಅಗತ್ಯವಿರುವ ಆಧುನಿಕ ತಾಂತ್ರಿಕ ಉಪಕರಣ ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿದರ್ೇಶಕ ಹಾಗೂ ಕನರ್ಾಟಕ ಕಾರಾಗೃಹಗಳ ಮಾಹಾನಿರೀಕ್ಷಕರಾದ ಎನ್.ಎಸ್.ಮೇಘರಿಖ್ ಅವರು ಹೇಳಿದರು.
ಧಾರವಾಡ ಡಿ.ಎ.ಆರ್. ಕವಾಯತ ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಹಾಗೂ ಕನರ್ಾಟಕ ಕಾರಾಗೃಹ ಇಲಾಖೆ ಆಯೋಜಿಸಿದ್ದ 21ನೇ ತಂಡದ ಹಾಗೂ ಒಂದನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾಥರ್ಿಗಳ ನಿರ್ಗಮನ ಪಥ ಸಂಚಲನದಲ್ಲಿ ಪ್ರಶಿಕ್ಷಣಾಥರ್ಿಗಳಿಂದ ಗೌರವ ವಂದನೆ ಸ್ವೀಕರಿಸಿ, ಮಾತನಾಡಿದರು.
ಕಾರಾಗೃಹ ಇಲಾಖೆಯಲ್ಲಿ ನೇಮಕಾತಿ ಹೊಂದುವ ಅಭ್ಯಥರ್ಿಗಳು ಸಂದರ್ಭವನ್ನು ನಿಭಾಯಿಸುವ ಮತ್ತು ಜೈಲು ನಿರ್ವಹಣೆ ಆಡಳಿತ ಕಲೆಯನ್ನು ತಿಳಿದಿರಬೇಕು. ರಾಜ್ಯದಲ್ಲಿರುವ ಜೈಲುಗಳ ಸುಧಾರಣೆಗೆ ಮೊದಲ ಹೆಜ್ಜೆಯಾಗಿ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಇಲಾಖೆಗೆ ಶಿಸ್ತು ಮುಖ್ಯ ಪ್ರತಿ ಸಿಬ್ಬಂದಿ ಮತ್ತು ಜೈಲು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಮತ್ತು ಬುನಾದಿ ತರಬೇತಿಯಲ್ಲಿ ನೀಡಿದ ವಿವಿಧ ವಿಷಯಗಳ ಜ್ಞಾನವನ್ನು ಅಳವಡಿಸಿಕೊಂಡು ಶಿಸ್ತು ರೂಢಿಸಿಕೊಳ್ಳಬೇಕೆಂದರು.
ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರೀಕ್ಷಕರಾದ ಎಚ್.ಎಸ್.ರೇವಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರಾಗೃಹ ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಾತಿ ಸೇರಿದಂತೆ ಎಲ್ಲ ಕಾರ್ಯಗಳಲ್ಲು ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ.
1.30 ಲಕ್ಷ ವೆಚ್ಚದಲ್ಲಿ ಬಂಧಿಖಾನೆಗಳಿಗೆ ಸುರಕ್ಷತಾ ತಾಂತ್ರಿಕತೆ ಅಳವಡಿಸಲಾಗಿದೆ. ಬೆಂಗಳೂರು ಕೇಂದ್ರ ಕಾರಾಗೃಹ ಆವರಣದಲ್ಲಿ ಇನ್ನೂ ಎರಡು ಪ್ರತ್ಯೇಕ ಬಂಧಿಖಾನೆಗಳನ್ನು ಕಟ್ಟಲಾಗುತ್ತಿದೆ.
ರಾಜ್ಯ ಸರಕಾರ ಪ್ರಸಕ್ತ ಸಾಲಿಗೆ ಮತ್ತು 5 ಹೊಸ ಬಂಧಿಖಾನೆಗಳನ್ನು ನಿಮರ್ಿಸಲು ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಬಂಧಿಖಾನೆಗಳಲ್ಲಿರುವ ಖೈದಿಗಳ ಮಾನಸಿಕ ವಿಕಸನಕ್ಕೆ ಆಧ್ಯತೆ ನೀಡಿ ಸುಧಾರಣಾಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ.ಜಿ ಅವರು ಸ್ವಾಗತಿಸಿ, ಶಾಲೆಯ ವರದಿ ವಾಚನ ಮಾಡಿದರು.
ಪರೇಡ ಕಮಾಂಡರ ಡಿ.ಎ.ಆರ್.ನ ಡಿ.ಎಸ್.ಪಿ.ಹರೀಶಚಂದ್ರ ನಾಯ್ಕ ಹಾಗೂ ಡಿ.ಎ.ಆರ್ನ ಆರ್.ಎಸ್.ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ಪ್ರಶಿಕ್ಷಣಾಥರ್ಿಗಳು ಪರೇಡ ಮೂಲಕ ಗೌರವ ವಂದನೆ ಸಲ್ಲಿಸಿದರು.
ಧಾರವಾಡ ಹಾಗೂ ಗದಗ ಪೊಲೀಸ್ ವಾದ್ಯ ಮೇಳದ ಕಮಾಂಡರ್ ಐ.ಸಿ.ಡಿ.ಸೋಜಾ ಹಾಗೂ ಜಿ.ಕೆ ಖಾಜಿ ನೇತೃತ್ವದಲ್ಲಿ ಪೊಲೀಸ್ ವಾದ್ಯ ಮೇಳ ತಂಡದ ಸದಸ್ಯರು ಸುಶ್ರಾವ್ಯವಾಗಿ ವಾದ್ಯ ನುಡಿಸಿದರು.
ತರಬೇತಿ ಅವಧಿಯಲ್ಲಿ ಸಂಘಟಿಸಿದ್ದ ಒಳಾಂಗಣ ಕ್ರೀಡೆಗಳಲ್ಲಿ ಗೀತಾ ದೇವರಮನಿ ಪ್ರಥಮ, ಶಾಂತಾ ಶಿರೂರ ದ್ವೀತಿಯ, ಮಹಾಲಕ್ಷ್ಮೀ.ಎ. ತೃತೀಯ ಸ್ಥಾನ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಶ್ವೇತಾ ಬಾಯಕೆ ಪ್ರಥಮ, ಧನಲಕ್ಷ್ಮಿ.ಕೆ ದ್ವಿತೀಯ, ನಿಧಿ.ಬಿಯು. ತೃತೀಯ ಸ್ಥಾನವನ್ನು ಮತ್ತು ಪೈರಿಂಗ್ ವಿಭಾಗದಲ್ಲಿ ಜಿ.ಲಾವಣ್ಯ ಪ್ರಥಮ, ರಂಜಿತಾ ಹಳ್ಳೆರಿ, ದ್ವೀತಿಯ, ವಿದ್ಯಾಶ್ರೀ ಮುಂಜೆ ತೃತೀಯ ಸ್ಥಾನದ ಬಹುಮಾನ ಪಡೆದರು.
ಓವರ್ ಆಲ್ ಬೆಸ್ಟ್ ಟ್ರೇನಿ ವಿಶೇಷ ಬಹುಮಾನವನ್ನು ಮಹಾಲಕ್ಷ್ಮಿ.ಎ.ಅವರಿಗೆ ಎನ್.ಎಸ್.ಮೇಘರಿಖ್ ನೀಡಿದರು.
ಬೆಳಗಾವಿ ಉತ್ತರವಲಯ ಪೊಲೀಸ್ ಮಹಾನೀರಿಕ್ಷಕ ರಾಘವೇಂದ್ರ ಸುಹಾಸ್ ಮತ್ತು ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ವೇದಿಕೆಯಲ್ಲಿದ್ದರು.
ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ. ಅನಿತಾ ಆರ್ ಅವರು ವಂದಿಸಿದರು. ಮಾಯಾರಾಮನ್ ಮತ್ತು ಡಾ.ಎ.ಸಿ.ಅಲ್ಲಯ್ಯನಮಠ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಿ.ಎಸ್.ಪಿ ರಾಮನಗೌಡ ಹಟ್ಟಿ, ಗುರು ಮತ್ತೂರ, ಡಿ.ಸಿ.ಪಿ ನಾಗೇಶ.ಡಿ.ಎಲ್, ಎಸಿಪಿ ಎಂ.ಎನ್.ರುದ್ರಪ್ಪ ಪೊಲೀಸ್ ಇನಸ್ಪೆಕ್ಟರ್ಗಳಾದ ಪಿ.ಬಿ.ನೀಲಗಾರ, ಆರ್.ಜಿ.ನಿಲಮ್ಮಣ್ಣವರ ವಿಜಯ ಬಿರಾದಾರ, ಸತೀಶ ಮಾಳಗೊಂಡ ಆನಂದ ಠಕ್ಕಣ್ಣವರ, ಆಯ್.ಎಂ.ಮಠಮತಿ ಸೇರಿದಂತೆ ವಿವಿಧ ಅಧೀಕಾರಿಗಳು, ಪ್ರಶಿಕ್ಷಣಾಥರ್ಿಗಳ ಪಾಲಕರು, ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿದ್ದರು.