ಪ್ರೀತ್ಸೆ.. ಪ್ರೀತ್ಸೆ.. ಯುವಕನ ಕಿರುಕುಳ: ಯುವತಿ ರಿಚೆಲ್ ಆತ್ಮಹತ್ಯೆಗೆ ಶರಣು
Preetha.. Preetha.. Harassment by a young man: Young woman Richelle commits suicide
ಕಾರವಾರ 11: ತಾಲೂಕು ಕದ್ರಾದಲ್ಲಿ ಯುವತಿ ರಿಚೆಲ್ (21) ನೇಣಿಗೆ ಶರಣಾಗಿದ್ದಾಳೆ. ಈಕೆ ಬೆಂಗಳೂರುನಲ್ಲಿ ಓದುತ್ತಿದ್ದು, ಈಕೆಗೆ ಪ್ರೀತಿಸು ಎಂದು ಕಾರವಾರದ ಯುವಕ ಸತಾಯಿಸುತ್ತಿದ್ದ ಎಂದು ರಿಚೇಲ್ ತಂದೆ ಕಿಸ್ತೋರ್ ಫ್ರಾನ್ಸಿಸ್ ಡಿಸೋಜಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ರಿಚೇಲ್ ಶುಕ್ರವಾರ ಮಧ್ಯಾಹ್ನ 2-30 ಕ್ಕೆ ಕದ್ರಾದಲ್ಲಿನ ತನ್ನ ಮನೆಯ ಬೆಡ್ ರೂಂನಲ್ಲಿ ಸೀರೆಯನ್ನು ಫ್ಯಾನ್ ಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯನ್ನು ಸತಾಯಿಸುತ್ತಿದ್ದ ಯುವಕ ಕಾರವಾರ ನಂದನಗದ್ದಾ ನಿವಾಸಿ. ಈತ ಬೆಂಗಳೂರಲ್ಲಿ ಓದುತ್ತಿದ್ದು, ರಿಚೆಲ್ ಳ ಪರಿಚಯ, ಸ್ನೇಹ ಇತ್ತು. ಚಿರಾಗ್ ಸಿ. ಕೋಠಾರಕರ್ ಎಂಬ ಯುವಕ ಮಗಳು ರಿಚೇಲ್ ಜೊತೆ ಪೋನ್ ಸಂಪರ್ಕದಲ್ಲಿ ಇದ್ದ. ಅವನ ಪ್ರೀತಿ ನಿರಾಕರಿಸಿದ್ದಕ್ಕೆ ನೀನು ಬದುಕಿದ್ದು ಪ್ರಯೋಜನ ಇಲ್ಲ, ಹೇಗಾದರೂ ಸತ್ತು ಹೋಗು, ಸತ್ತರೆ ಒಳ್ಳೆಯದು ಎಂದು ಅನ್ನುತ್ತಿದ್ದ ಎಂಬ ವಿಷಯವನ್ನು ಮಗಳು ನನಗೆ ಹೇಳಿದ್ದಳು. ಮಗಳ ಆತ್ಮಹತ್ಯೆ ಗೆ ಚಿರಾಗನ ಮಾತುಗಳ ಪ್ರೇರಣೆಯೇ ಕಾರಣ ಎಂದು ಕಿಸ್ತೋರ್ ಫ್ರಾನ್ಸಿಸ್ ಡಿಸೋಜಾ ದೂರಲ್ಲಿ ವಿವರಿಸಿದ್ದಾರೆ. ಕದ್ರಾ ಪೊಲೀಸರು ಸೆಕ್ಷನ್ 108 ಬಿಎಸ್ ಎನ್ ,-2023 ಅಡಿ ಪ್ರಕರಣ ದಾಖಲಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 