ಧಾರವಾಡ .2; ಏಡ್ಸ್ ಖಾಯಿಲೆಯು ಅತ್ಯಂತ ಮಾರಕ ರೋಗವಾಗಿದ್ದು, ಮುನ್ನೆಚ್ಚರಿಕೆಯ ಕ್ರಮಗಳ ಮುಖಾಂತರ ರೋಗವನ್ನು ಬರದಂತೆ ತಡೆಯಬಹುದಾಗಿದೆ. ರೋಗ ಬಂದ ನಂತರದ ಚಿಕಿತ್ಸೆಗಿಂತ ರೋಗಗಳು ಬಾರದಂತೆ ಮುನ್ನಚ್ಚರಿಕೆ ವಹಿಸುವುದು ಮಹತ್ವದ್ದಾಗಿದೆ. ಏಡ್ಸ್ ರೋಗದ ಮುನ್ನಚ್ಚರಿಕೆಗಳನ್ನು ಅರಿತು ಅದರಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿಮರ್ಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳ್ ಕರೆ ನೀಡಿದರು.
ಇಲ್ಲಿನ ಕೇಂದ್ರ ಕಾರಾಗೃಹದ ಪರಿವರ್ತನ ಸಾಂಸ್ಕೃತಿಕ ವೇದಿಕೆಯಲ್ಲಿ, ಸಾಥಿ ಸಂಸ್ಥೆ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ:01-12-2018 ಶನಿವಾರದಂದು ಏರ್ಪಡಿಸಲಾಗಿದ್ದ "ವಿಶ್ವ ಏಡ್ಸ್ ದಿನಾಚರಣೆ" ಅಂಗವಾಗಿ "ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರಾಗೃಹದ ಎಲ್ಲಾ ಬಂದಿಗಳು ಇಂದಿನ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯಯುತ ಜೀವನ ನಡೆಸಲು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಮುಖ್ಯಅತಿಥಿಗಳಾಗಿದ್ದ ಎಫ್.ಪಿ.ಎ.ಐ ನ ಶಾಖಾ ವ್ಯವಸ್ಥಾಪಕಿ ಸುಜಾತ, ಮಾತನಾಡುತ್ತಾ ಏಡ್ಸ್ ರೋಗವು ಏಡ್ಸ್ ಪೀಡಿತ ವ್ಯಕ್ತಿಯ ದೈಹಿಕ ಸಂಪರ್ಕ, ಸಿರಿಂಜ್ಗಳ ಮುಖಾಂತರ ಹಾಗೂ ಏಡ್ಸ್ ಪೀಡಿತರ ರಕ್ತ ಪಡೆಯುವುದರ ಮುಖಾಂತರ ಹರಡಬಹುದಾಗಿದೆ. ಮುನ್ನಚ್ಚರಿಕೆಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮುಖಾಂತರ ತಡೆಯಬಹುದಾಗಿದೆ. ಎಲ್ಲಾ ಬಂದಿಗಳು ಇಂದಿನ ತಪಾಸಣಾ ಶಿಬಿರದಲ್ಲಿ ಚಿಕಿತ್ಸೆಗೆ ಒಳಪಟ್ಟು ವೈದ್ಯರ ಸಲಹೆಗಳನುಸಾರ ಚಿಕಿತ್ಸೆ ಪಡೆಯಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಅನಿತಾ.ಆರ್ರವರು ಮಾತನಾಡಿ, ಇಂದು ವಿಶ್ವದೆಲ್ಲೆಡೆ ಏಡ್ಸ್ಕುರಿತಾಗಿ ಅರಿವು ಕಾರ್ಯಕ್ರಮಗಳು ನಡೆಯುತ್ತಿವೆ. ಕೇಂದ್ರ ಕಾರಾಗೃಹದಲ್ಲಿ ಸಾಥಿ ಸಂಸ್ಥೆ ಹಾಗೂ ಎಫ್.ಪಿ.ಎ.ಐ ಇವರ ಸಹಯೋಗದೊಂದಿಗೆ ಬಂದಿಗಳಿಗಾಗಿ ಏಡ್ಸ್ ಖಾಯಿಲೆಯ ಅರಿವು, ಆರೋಗ್ಯ ತಪಾಸಣಾ ಶಿಬಿರ ಹಾಗೂ ಸಾಂಸ್ಕೃತಿಕ ಕಾಯಕ್ರಮಗಳನ್ನು ಆಯೋಜಿಸಿ ಎಲ್ಲಾ ಬಂದಿಗಳು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೂಕ್ತ ಚಿಕಿತ್ಸೆಗಳನ್ನು ಪಡೆದು ಕಾರಾಗೃಹದ ಅವಧಿ ಹಾಗೂ ಬಿಡುಗಡೆಯ ನಂತರ ಆರೋಗ್ಯಯುತ ಜೀವನ ನಡೆಸಲು ತಿಳುವಳಿಕೆ ನೀಡಲಾಗುತ್ತಿದೆ ಎಂದರು.
ಡಾ. ಶ್ರೀನಿವಾಸ್ ಕೆ, ಡಾ. ಎಂ.ಎನ್ ತಾವರಗೇರಿ, ಡಾ. ಪಾರ್ವತಿ ಎಸ್ ಹಾಲಬಾವಿ, ಡಾ. ತನುಜಾ ಕೆ.ಎನ್, ಸಂಗೀತಾ ಮಾನೆ, ದೇವೇಂದ್ರಪ್ಪ ಹಾಗೂ ಡಾ. ಸಿದ್ದಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಮಹಿಳಾ ಬಂದಿಗಳಿಂದ ಹಾಗೂ ಯುವ ಸ್ಪಂದನ ಸದಸ್ಯರಿಂದ ಏಡ್ಸ್ ಕುರಿತಾಗಿ ಅರಿವು ಮೂಡಿಸುವ ನಾಟಕಗಳನ್ನು ಪ್ರದಶರ್ಿಸಲಾಯಿತು. ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರುಗಳು ಸಂಸ್ಥೆಯ ಎಲ್ಲಾ ಬಂದಿಗಳ ಆರೋಗ್ಯ ತಪಾಸಣೆಯನ್ನು ನಡೆಸಿ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.