ಜಂತುಹುಳು ಬಾಧೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಅವಶ್ಯ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ


ಗದಗ  10:   ಜಂತು ಹುಳು ಬಾಧೆ ತಡೆಗೆ ಮುನ್ನಚ್ಚರಿಕೆ ಕ್ರಮವಾಗಿ  ಸುರಕ್ಷಿತ ಹಾಗೂ ಪ್ರಯೋಜನಕಾರಿಯಾದ ಜಂತು ಹುಳು ನಾಶಕ ಮಾತ್ರೆಯನ್ನು  1-19 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಸೇವಿಸಬೇಕೆಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಕರೆ ನೀಡಿದರು.

        ಗದಗ   ಸಿದ್ಧಲಿಂಗ ನಗರದ   ಸರಕಾರಿ ಪ್ರೌಢಶಾಲೆಯಲ್ಲಿ ದಿ.10 ರಂದು  ಜರುಗಿದ ರಾಷ್ಟ್ರೀಯ  ಜಂತು ಹುಳು ನಿವಾರಣಾ  ದಿನವನ್ನು  ಉದ್ಘಾಟಿಸಿ   ಶಾಲಾ ಮಕ್ಕಳಿಗೆ ಅಲ್ಬಂಡಝೋಲ್ ಮಾತ್ರೆ ವಿತರಿಸಿ  ಮಾತನಾಡಿದರು.   

ಜಂತು ಹುಳುವಿನ ಬಾಧೆಯು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.    ಆದಕಾರಣ ಜಂತು ಹುಳು ನಾಶಕ ಮಾತ್ರೆಯನ್ನು ಸೇವಿಸಿ ಮಕ್ಕಳು  ಸ್ವಚ್ಛತೆ ಕಾಪಾಡಿ ಸದೃಢ ಆರೋಗ್ಯ ಹೊಂದುವುದು ಮುಖ್ಯವಾಗಿದೆ.  ಹಾಗೂ    ಶಾಲಾ ವಿದ್ಯಾಥರ್ಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯ  ಫಲಿತಾಂಶ   ಸುಧಾರಿಸಲು   ಸಾಧ್ಯ ಎಂದರು  ಜಿಲ್ಲಾಧಿಕಾರಿಗಳು  ನುಡಿದರು.    

        ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಮ್. ಹೊನಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ   ಜಂತು ಹುಳುವಿನ ನಿವಾರಣೆ ಮಾಡುವುದಕ್ಕೋಸ್ಕರ   ಜಿಲ್ಲೆಯಲ್ಲಿ  1 ರಿಂದ 19 ವರ್ಷದೊಳಗಿನ  ಸುಮಾರು 3,18,873  ಮಕ್ಕಳಿಗೆ ಮಾತ್ರೆ  ನೀಡಲಾಗುವುದು ಎಂದು ತಿಳಿಸಿದರು.   

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಎಸ್.ಜಿ. ಪಲ್ಲೇದ,  ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್. ನೀಲಗುಂದ,   ಡಿ ವೈ ಎಚ್.ಇ ಓ ಗೀತಾ ಕಾಂಬಳೆ,  ಪಿ.ಕೆ. ಚಿಲ್ಲಾಳ,   ಡಿ.ಎನ್.ಓ  ಕೆ.ಎಚ್. ಉಮಚಗಿ,   ಜಿಲ್ಲಾ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ,   ಎಚ್.ಎಸ್. ಮಹಾಜನ,    ಪ್ರಬಾರಿ ಮುಖ್ಯೋಪಾಧ್ಯಾಯರಾದ ಎಸ್.ಆರ್. ಹನುಮಗೌಡ್ರ,   ಸಾರ್ವಜನಿಕ ಶಿಕ್ಷಣ ಇಲಾಖೆಯ  ಎಚ್,ಬಿ.ರಡ್ಡೇರ, ಶಾಲಾ ಶಿಕ್ಷಕ ಶಿಕ್ಷಕಿಯರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. 

ಶಾಲಾ ವಿದ್ಯಾಥರ್ಿಗಳು ನಾಡಗೀತೆ ಪ್ರಸ್ತುತಪಡಿಸಿದರು.    ಶಿಕ್ಷಕ ಎಮ್. ಐ. ಶಿವನಗೌಡ್ರ ಸ್ವಾಗತಿಸಿದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿದರು. ಜಿ.ಬಿ. ಅಣ್ಣಿಗೇರಿ ವಂದಿಸಿದರು.