ವಿವಾಹ ಪೂರ್ವ ತಿಳುವಳಿಕೆ ಕಾರ್ಯಾಗಾರ

ಲೋಕದರ್ಶನ ವರದಿ

ಬೆಳಗಾವಿ:  ವಿವಾಹ ಸಂಸ್ಕಾರ ಕೇವಲ ಭೌತಿಕ ಸಂಬಂಧಕ್ಕೆ ಮಾತ್ರ ಸೀಮಿತವಾಗಿರದೆ  ಅದು ಮಾನಸಿಕತೆಯ ಮಹತ್ವವನ್ನು  ಒಳಗೊಂಡಿದ್ದು, ಜೀವನ ಸಂಗಾತಿಗಳು ಪರಸ್ಪರ ಪ್ರೇಮ, ಅನುಕಂಪ, ಸೇವೆ, ನಿಷ್ಠೆ, ತ್ಯಾಗ ಮುಂತಾದ ಮಾನಸಿಕ ಅಂಶಗಳು ಸ್ತ್ರೀ ಪುರುಷರ ನಡುವಿನ ಭಾವನಾತ್ಮಕ ಸಂಬಂಧವನ್ನು ಬೆಳೆಸುತ್ತದೆ ಎಂದು ಹಿರೇಬಾಗೇವಾಡಿ ಪೊಲೀಸ ಠಾಣೆ ಸಿ.ಪಿ.ಐ. ಎನ್. ಎನ್. ಅಂಬಿಗೇರ ಅಭಿಪ್ರಾಯಪಟ್ಟರು.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಸಕರ್ಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಅನುದಾನಿತ ಮಹಿಳಾ ಕಲ್ಯಾಣ ಸಂಸ್ಥೆಯ ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರ, ಬೆಳಗಾವಿ ಹಾಗೂ ಸಕರ್ಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿವಾಹ ಪೂರ್ವ ತಿಳುವಳಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಉಧ್ಘಾಟಕರಾಗಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಯ ಬಿಸಿ, ಮದುವೆಯ ಸಂಬಂಧಗಳಿಗೂ ತಟ್ಟಿ ಮದುವೆಯ ಸಂಬಂಧ ಕೆಲವೇ ದಿನಗಳಲ್ಲಿ ಮುರಿದು ಬೀಳುತ್ತಿದೆ. ಕಾರಣ ಈ ರೀತಿಯ ಸಲಹಾ ಕೇಂದ್ರಗಳು ಪ್ರಾರಂಭವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಸಲಹಾಗಾರರಾದ ಕವಿತಾ ಚೌಗಲಾ ಮಾತನಾಡಿ ವೈವಾಹಿಕ ಜೀವನದ ಸಂಬಂಧ ಸ್ಥಿರವಾಗಿದ್ದು ಅಚಲವಾಗಿ ಜೀವನ ಪರ್ಯಂತ ಹೆಣೆದುಕೊಂಡಿದೆ. ವಿವಾಹದ ಸ್ವರೂಪ, ವಯಸ್ಸು, ಜೀವನ ಸಂಗಾತಿಯ ಆಯ್ಕೆಕ್ರಮ, ವಿಚ್ಛೇದನೆ, ವಿವಾಹದ ಪ್ರಕಾರಗಳು, ಲೈಂಗಿಕ ಜೀವನಕ್ಕೆ ಸಂಬಂಧಿಸಿದ ನಿಯಮ. ವೈವಾಹಿಕ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ "ವಿವಾಹಪೂರ್ವ ತಿಳುವಳಿಕೆ" ಕಾಯರ್ಾಗಾರ ಸಹಾಯಕವಾಗಿದೆ. ಮದುವೆಯೆಂಬುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಒಂದು ಮೈಲಿಗಲ್ಲು ಇದ್ದ ಹಾಗೆ, ಗಂಡಾಗಲೀ  ಹೆಣ್ಣಾಗಲೀ ಮದುವೆಯ ಬಗ್ಗೆ  ತನ್ನದೇ ಆದಕಾಲ್ಪನಿಕ ಕಥೆ ಕಟ್ಟಿಕೊಂಡು ಬಾಳ ಸಂಗಾತಿಯ ಬಗ್ಗೆ ಸಾಕಷ್ಟು ಕನಸನ್ನು ಕಟ್ಟಿಕೊಂಡಿರುತ್ತಾರೆ. 

ಯುವಕ ಯುವತಿಯರು ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕರಾದ ಎಸ್. ಎಸ್. ಭಂಡಾರಿ ವಹಿಸಿದ್ದರು, ಉಪನ್ಯಾಸಕರಾದ ಜಿ.ಜಿ. ಅಬ್ಬಿಗೇರಿ ಉಪಸ್ಥಿತರಿದ್ದರು. ಸಲಹಾಗಾರ ಸಂತೋಷ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಅನ್ನಪೂರ್ಣ ಬುಚಡಿ ನಿರೂಪಿಸಿ ವಂದಿಸಿದರು.