ಉರುಸ್ ಸಂಭ್ರಮದಲ್ಲಿ ಹಿಂದೂ-ಮುಸ್ಲಿಮರಿಂದ ಪ್ರಾರ್ಥನೆ

Prayers by Hindus and Muslims during Urus celebrations

ಉರುಸ್ ಸಂಭ್ರಮದಲ್ಲಿ ಹಿಂದೂ-ಮುಸ್ಲಿಮರಿಂದ ಪ್ರಾರ್ಥನೆ

ಹೂವಿನಹಡಗಲಿ 20:  ಹೂವಿನಹಡಗಲಿಪಟ್ಟಣದ ಹಜರತ್ ರಾಜಾಬಾಗ್ ಸವಾರ್ (ಯಮನೂರು ಸ್ವಾಮಿ) ದರ್ಗಾದಲ್ಲಿ ಗುರುವಾರ ಬೆಳಿಗ್ಗೆ ವಿಜೃಂಭಣೆಯ ಉರುಸ್ ಕಾರ್ಯಕ್ರಮ ಜರುಗಿತು. ವಂಶಪಾರಂಪರ್ಯ ಮುಜಾವರರು ಬೆಳಗಿನಜಾವ ದರ್ಗಾ ಕಟ್ಟೆಯ ಮೇಲೆ ನೀರಿನಲ್ಲಿ ದೀಪ ಬೆಳಗಿಸಿದರು. ಪವಾಡ ರೀತಿಯಲ್ಲಿ ನಡೆದ ಗಂಧ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬಳಿಕ ಉರುಸು ಆಚರಣೆ ಪ್ರಾರಂಭವಾಯಿತು. ಬೆಳಿಗ್ಗೆಯಿಂದಲೇ ಹಿಂದೂ ಮುಸ್ಲಿಮರು ಏಕಕಾಲಕ್ಕೆ ದರ್ಗಾಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಭಾವೈಕ್ಯ ಮೆರೆದರು. ವಿಜಯನಗರ, ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ದಾಣಗೆರೆ, ಗದಗ, ಹಾವೇರಿ ಜಿಲ್ಲೆಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು. ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ಭಕ್ತರು ದೀಡು ನಮಸ್ಕಾರ, ಕೊಬ್ಬರಿ ಉಪ್ಪು ಸುಡುವುದು, ಸಕ್ಕರೆ ಅರ​‍್ಿಸುವ ಹರಕೆಗಳನ್ನು ತೀರಿಸಿದರು.