ಭಕ್ತರ ನೆಮ್ಮದಿಗಾಗಿ ಧರ್ಮಾಚರಣೆ ಅವಶ್ಯ: ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಜಿ

ಲೋಕದರ್ಶನ ವರದಿ

ಶಿರಹಟ್ಟಿ: ಸತತವಾಗಿ ಬರಗಾಲ ಮತ್ತು ಈ ವರ್ಷ ಅತೀವೃಷ್ಠಿಯಿಂದ ಸಾಕಷ್ಟು ಗ್ರಾಮೀಣ ಭಾಗದ ಜನರು ರೋಷಿಹೋಗಿದ್ದು, ಅವರೆಲ್ಲರ ನೆಮ್ಮದಿಗಾಗಿ ಹೋಮ ಹವನ ದಂತಹ ಧರ್ಮಾಚರಣೆ ಮಾಡುವ ಮೂಲಕ ನೆಮ್ಮದಿ, ಶಾಂತಿ ಮತ್ತು ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡುವುದು ಅವಶ್ಯ ಎಂದು ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಜಿಗಳು ಹೇಳಿದರು. 

ಅವರು ಶಿರಹಟ್ಟಿ ತಾಲೂಕಿನ ರಣತೂರ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಪ್ರಥಮ ವರ್ಷದ ಜಾತ್ರಾ ಮಹೋತ್ಸವದಲ್ಲಿ ಶ್ರೀವೀರಭದ್ರೇಶ್ವರನಿಗೆ ರುದ್ರಾಭಿಷಕ ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನಂತರ ಸ್ವಾಮಿಜಿಯವರಿಗೆ ತುಲಾಭಾರ ಸ್ವೀಕರಿಸಿ, ಧರ್ಮಸಭೆಯ ಸಾನಿದ್ಯವನ್ನು ವಹಿಸಿ ಮಾತನಾಡಿದರು. 

ಪ್ರತಿ ಗ್ರಾಮಗಳಲ್ಲಿ ದೇವರ ಆರಾಧನೆ ಮತ್ತು ದೇವರ ಚರಿತ್ರೆ ಸಾರುವ ಕೀರ್ತನೆಗಳು ಪುರಾಣ ಪುಣ್ಯ ಕಥೆಗಳನ್ನು ಏರ್ಪಡಿಸುವ ಮೂಲಕ ಯುವರಿಗೆ ಸನ್ಮಾರ್ಗ ಕರುಣಿಸುವ ಕಾರ್ಯಗಳು ಜರುಗಬೇಕು. ಇಂದಿನ ಯುವಕರೆಲ್ಲ ಮೊಬೈಲ್ಗಳ ದಾಸರಾಗಿ ದೇಶ ಸಂಸ್ಕೃತಿ, ಆಚಾರ ವಿಚಾರಗಳಿಂದ ದೂರವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಜೊತೆಗೆ ಯುವಕರ ದುಶ್ಚಟಗಳಿಂದ ದೂರ ವಿರಬೇಕು.ವಿದ್ಯಾರ್ಜನೆಯ ಸಮಯದಲ್ಲಿ ವಿನಾಕಾರಣ ಸಮಯ ಹಾಳು ಮಾಡಿಕೊಂಡು ಗೋಳಡುವುದಕ್ಕಿಂತ ಸಮಯವನ್ನು ಸದ್ಭಳಕೆಮಾಡಿಕೊಂಡು ಉತ್ತಮವಾದ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಹೊಳೆಇಟಗಿಯ ವಿರಕ್ತಮಠದ ಮಡಿವಾಳೇಶ್ವರ ಸ್ವಾಮಿಜಿಗಳು, ಮುಖಂಡರಾದ ಈರಣ್ಣ ಒಂಟಿ, ವಿ.ಪಿ.ಮನಸೂರ, ಬಸಪ್ಪ ಪ್ಯಾಟಿ, ಶಂಕ್ರಪ್ಪ ಬರದೂರ, ಬಸಪ್ಪ ಬಳ್ಳಾರಿ, ಫಕ್ಕಿರೇಶ ಗೋಪಾಳಿ, ಶಿವು ಪ್ಯಾಟಿ, ಐ.ಟಿ.ಶಲವಡಿ, ಜಿ.ಹೆಚ್. ಛಬ್ಬಿ, ಶರೀಪಸಾಬ ಛಬ್ಬಿ,ದೇವೇಂದ್ರ ಅಂಬಣ್ಣವರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.