ಲೋಕದರ್ಶನ ವರದಿ
ಗದಗ 29: ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ದೇವರಲ್ಲಿ ಸರ್ವರ ಲೇಸಿಗಾಗಿ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆ ನಮ್ಮ ಮನಸ್ಸಿನ ಕಲ್ಮಶವನ್ನು ತೊಡೆದು ಹಾಕಿ ಮನ ಶುದ್ಧಿಯನ್ನು ಮಾಡುತ್ತದೆ. ಇದರಿಂದ ನಾವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಪರಮ ಪೂಜ್ಯ ಶ್ರೀ ಕುಮಾರದೇವರು ಬೂದೀಸ್ವಾಮಿ ಹೀರೆಮಠ ಅಂತೂರ-ಬೆಂತೂರ ಹೇಳಿದರು.
ಅವರು ತಾಲೂಕಿನ ಕುರ್ತಕೋಟಿಯಲ್ಲಿ ಕಲಬುಗರ್ಿ ಶ್ರೀಶರಣಬಸವೇಶ್ವರರ 20ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಪ್ರಾರಂಭವಾದ ಶ್ರೀ ಶರಣಬಸವೇಶ್ವರರ ಜೀವನ ದರ್ಶನ ಪುರಾಣ ಪ್ರವಚನ ಸಾನಿಧ್ಯವನ್ನುವಹಿಸಿ ಪ್ರವಚನ ಮಾಡಿದರು.
ಸಕಲರ ರಕ್ಷಕನಾದ ದೇವರಲ್ಲಿ ನಿಷ್ಠೆ ಇಡಬೇಕು. ಸತ್ಯ, ದಾನ, ಧರ್ಮ, ಪರೋಪಕಾರದಂತಹ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಸದ್ಬುದ್ಧಿಯನ್ನು ಕರುಣಿಸು ಎಂದು ಪ್ರಾಥರ್ಿಸಿಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಪಿಎಂಸಿ ಸದಸ್ಯ ಅಪ್ಪಣ್ಣ ಇನಾಮತಿ, ನಮ್ಮ ಜೀವನದಲ್ಲಿ ಧರ್ಮ, ಸಂಸ್ಕೃತಿ, ಸಂಪ್ರದಾಯಗಳನ್ನು ಪಾಲಿಸಲು ಶ್ರೀ ಶರಣಬಸವೇಶ್ವರರ ಚರಿತ್ರೆಯನ್ನು ಆಲಿಸಬೇಕು ಎಂದು ಹೇಳಿದರು. ತಾಲೂಕ ಪಂಚಾಯತಿಯ ಸದಸ್ಯ ಶಿವಣ್ಣ ಹೊಸಮನಿ ಭಾಗವಹಿಸಿದ್ದರು. ಪುರಾಣ ಪಠಣವನ್ನು ವೇ ಮೂ ಶ್ರೀ ಚಂದ್ರಶೇಖರಯ್ಯ ನಾಗಾವಿಮಠ, ಸಂಗೀತ ಸೇವೆಯನ್ನು ಮಲ್ಲಕಾಜರ್ುನ ಗವಾಯಿಗಳು ಹೂಗಾರ, ವೀರಣ್ಣಸ್ವಾಮಿ ಮುಂಡರಗಿಮಠ ಮಾಡಿದರು.
ಕಾರ್ಯಕ್ರಮದಲ್ಲಿ ಕುಮಾರಪ್ಪ ಬೆಟಗೇರಿ, ಡಿ.ಪಿ ಪಾಟೀಲ, ಸಿದ್ದಯ್ಯ ವಿಭೂತಿ, ಎಸ್.ಎಫ್ ಹುಣಸಿಮರದ, ಪಾರಪ್ಪ ಪರಪ್ಪನವರ, ಪ್ರಭಣ್ಣ ಬೆಂತೂರ, ಚನ್ನವೀರಪ್ಪ ಜಕ್ಕಲಿ, ಪರಪ್ಪ ಇಸರಿ, ಯಲ್ಲಪ್ಪ ರವಳೋಜಿ, ವೀರಬಸಯ್ಯ ನಾಗಾವಿಮಠ, ತಿಮ್ಮಣ್ಣ ಹಳ್ಳಿಕೇರಿ ಮತ್ತು ಗ್ರಾಮದ ಸಕಲ ಭಕ್ತರು ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಜಕ್ಕಲಿ ಕಾರ್ಯಕ್ರಮ ನಿರೂಪಿಸಿದರು.