ಪ್ರಯಾಗ್ ರಾಜ್ ಮಾ, 18 : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಯಾಗ್ ರಾಜ್ ನಿಂದ ವಾರಾಣಾಸಿಯವರೆಗೆ ಮೂರು ದಿನಗಳ ಗಂಗಾ ಯಾತ್ರೆ, ಜೊತೆಗೆ ಮತ ಬೇಟೆ ಆರಂಭಿಸಿದ್ದಾರೆ.
ಸಂಭಾತ್ ಘಾಟ್ನಲ್ಲಿ ನೂರಾರು ಉತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ಜನರನ್ನು ಭೇಟಿಯಾದರು. ಹನುಮಾನ್ ದೇವಸ್ಥಾನದಲ್ಲಿ ಆರಾಧಿಸುವಾಗ ಅವರು ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬಯಸಿದ್ದೇನೆ ಹೊರತು ನಾನು ದೇವರಿಂದ ಬೇರೆ ಎನನ್ನೂ ಬಯಸಿಲ್ಲ ಎಂದು ನಂತರ ಮಾಧ್ಯಮಗಳಿಗೆ ಪ್ರಿಯಂಕಾ ಸ್ಪಷ್ಟಪಡಿಸಿದರು. ಯುಪಿ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಕೂಡ ಹಾಜರಿದ್ದರು.
ನಂತರ ಅವರು 140 ಕಿ.ಮೀ ಉದ್ದದ "ಗಂಗಾ-ಯಾತ್ರೆಯನ್ನು ಬೋಟಿನ ಮೂಲಕ ಇಂದು ಪ್ರಾರಂಭಿಸಿದರು. ಕಾರು, ವಿಮಾನ ಇಲ್ಲದೆ ವಾರಣಾಸಿ ತಲುಪಲು ಅವರು ದೋಣಿಯನ್ನೇ ಅವಲಂಬಿಸಿದ್ದಾರೆ.
ಪ್ರಯಾಗರಾಜ್, ಭಡೋಹಿ, ಮಿರ್ಜಾಪುರ್ ಮತ್ತು ವಾರಣಾಸಿ ಸೇರಿದಂತೆ ನಾಲ್ಕು ಜಿಲ್ಲೆಗಳಲಲ್ಲಿ ಪ್ರಿಯಾಂಕ ಮತ್ತು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರ ಪೋಸ್ಟರ್ ಗಳನ್ನು 140 ಕಿಲೋ ಮೀಟರ್ ಮಾರ್ಗದ ನಡುವೆಯೂ ಹಾಕಲಾಗಿದೆ.
ಲಖನೌದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಪ್ರಿಯಾಂಕಾ ಅವರು ಪ್ರಯಾಗರಾಜ್ ಗೆ ಆಗಮಿಸಿದರು. ತಮ್ಮ ಪ್ರವಾಸದ ಉದ್ದಕ್ಕೂ, ಅವರು ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಮತ್ತು ರಾಜ್ಯದ ಜನರ ನಾಡಿಮಿಡಿತವನ್ನು ತಿಳಿಯಲು ಅವರು ಪ್ರಯತ್ನಿಸಿದ್ದಾರೆ.
ಉತ್ತರ ಪ್ರದೇಶದ ಜನರಿಗೆ ಪತ್ರ ಪತ್ರ ಬರೆದಿರುವ ಅವರು, ರಾಜ್ಯದ ರಾಜಕಿಯ ಮುಖವನ್ನು ಬದಲಿಸುವ ಭರವಸೆ ನೀಡಿದರು. ಇದಕ್ಕಾಗಿ, ಅವರು ಜನರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಮತ್ತು ಕಳವಳಗಳನ್ನು ಕೇಳುತ್ತೇನೆ. ರಾಜ್ಯದಲ್ಲಿನ ರಾಜಕೀಯ ಜನರ ಧ್ವನಿಯನ್ನು ಕೇಳದೆ ಅವರ ನೋವು ಹಂಚಿಕೊಳ್ಳದೆಯೇ ರಾಜಕಿಯ ರೂಪಾಂತರ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ಆದ್ದರಿಂದ, ನಾನು ಸಚಾ ಸಮ್ವಾದ್ (ನಿಜವಾದ ಸಂಭಾಷಣೆ) ಗಾಗಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ, ನಿಮ್ಮೊಂದಿಗೆ ಸಂವಾದವನ್ನು ಆಧರಿಸಿ ನಾವು ರಾಜಕೀಯದಲ್ಲಿ ಹೊಸ ಬದಲಾವಣೆ ತರುತ್ತೆನೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಗಮನ ಕೊಡುತ್ತೇನೆ ಎಂದು ಹೇಳಿದರು.
ಗಂಗಾ ನದಿ ಸತ್ಯ ಮತ್ತು ಸಮಾನತೆಯ ಒಂದು ಚಿಹ್ನೆ.ಇದು ನಮ್ಮ ಗಂಗಾ-ಜಮುನಿ ತೆಹ್ಜಿಬ್ (ಸಂಸ್ಕೃತಿ) ನ ಸಂಕೇತವಾಗಿದೆ. ಇದು ಜನರಲ್ಲಿ ಭಿನ್ನವಾಗಿಲ್ಲ. ಗಂಗಾನದಿ ಉತ್ತರ ಪ್ರದೇಶದ ಜೀವಸೆಲೆಯಾಗಿದೆ. ಅದರ ಮೂಲಕವೇ ನಾನು ನಿಮ್ಮನ್ನು ತಲುಪುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.