ಲೋಕದರ್ಶನ ವರದಿ
ಕೊಪ್ಪಳ 13:
ಅಕ್ಟೋಬರ 11ರಂದು ಭಾಗ್ಯನಗರದ ಅಂಬಾಭವಾನಿ
ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ
ಎಸ್.ಎಸ್.ಕೆ ಸಮಾಜದ
ಭಾಗ್ಯನಗರ ವತಿಯಿಂದ ಸಮಾಜದ ಬಡ ಮಹಿಳೆಯರಿಗೆ ಸಿರಿ
ಹಂಚುವ ಹಾಗೂ ಸಮಾಜದ ಪ್ರಯಿಭಾವಂತ
ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ
ಮಾಜಿ ಶಾಸಕ ಕೆ. ಬಸವರಾಜ
ಹಿಟ್ನಾಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಉಳ್ಳವರು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅದೇ ರೀತಿ ಸಮಾಜದ
ಕಡು ಬಡವರು ಸಹಿತ ಹಬ್ಬವನ್ನು ಆನಂದದಿಂದ
ಆಚರಿಸಲಿ ಎನ್ನುವ ಉದ್ದೇಶ ಭಾಗ್ಯನಗರದ ಎಸ್.ಎಸ್.ಕೆ
ಸಮಾಜದ ಕಾರ್ಯಕ್ರಮ ಶ್ಲಾಘನಿಯ ಎಂದರು. ಅಲ್ಲದೆ ಇದೆ ಸಂದರ್ಭದಲ್ಲಿ ಶಾಸಕರ
ನಿಧಿಯಿಂದ ಗುಡಿಯ ಪಕ್ಕದಲ್ಲಿ ಐವತ್ತು ಲಕ್ಷ ರೂಗಳ ವೆಚ್ಚದಲ್ಲಿ
ನಿಮರ್ಿಸುತ್ತಿರುವ ಸಮುದಾಯದ ಭವನದ ಕಾರ್ಯ ಪ್ರಗತಿಯನ್ನು
ಸಹ ವಿಕ್ಷಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ
ಅಧ್ಯಕ್ಷ ಎನ್.ಯು. ಮೇಘರಾಜ,
ಉಪಾಧ್ಯಕ್ಷ ದೇವೇಂದ್ರಸಾ ಮಗಜಿ, ಉದ್ಯಮಿ ಶ್ರೀನಿವಾಸ್ ಗುಪ್ತಾ, ಮಾಜಿ ಜಿ.ಪಂ
ಸದಸ್ಯ ಯಮನಪ್ಪ ಕಬ್ಬೇರ, ಕಾಂಗ್ರೆಸ ಮುಖಂಡರಾದ ಕೃಷ್ಣಾ ಇಟ್ಟಂಗಿ, ಅರ್ಜನಸಾ ಕಾಟವಾ, ಸಮಾಜದ ಪ್ರಮುಖರಾದ ಉಮಾಕಾಂತಸಾ ಕಠಾರೆ, ನಾರಾಯಣ ಸಾ, ಕಠಾರೆ, ಕೃಷ್ಣಸಾ,
ವೈದಲಬಂಜನ್, ಶತಿಷ ಮೇಘರಾಜ, ಮಹಿಳಾ
ಸಮಾಜದ ಲಕ್ಷ್ಮೀಬಾಯಿ ಮೇಘರಾಜ್, ಸರೋಜಾ ಬಾಕಳೆ ಇತರರು ಇದ್ದರು.
ಪರಶುರಾಮ
ಪವರಾರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.