ಪ್ರತಿಭಾ ಪುರಸ್ಕಾರ ಮತ್ತು ಡಾ. ಅಂಬೇಡ್ಕರ್ ನಮನ - ಸಮಾಲೋಚನಾ ಸಭೆ
Pratibha Puraskar and Dr. Ambedkar Salute - Consultation Meeting
ಹಾರೂಗೇರಿ 31: ಅಲೆಮಾರಿಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಕಡೆಗಣಿಸಲ್ಪಟ್ಟ ನತದೃಷ್ಟ ಸಮುದಾಯ. ಸದ್ಯದ ಸ್ಥಿತಿಯಲ್ಲಿ ಅಂಬೇಡ್ಕರ್ ಚಿಂತನೆಯೊಂದೇ ಅಲೆಮಾರಿಗಳ ಆತ್ಮಬಲವಾಗಿದೆಯೆಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಅವರಿಂದು ಹಾರೂಗೇರಿ ಪಟ್ಟಣದ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಅಲೆಮಾರಿ ಚೆನ್ನದಾಸರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಅಂಬೇಡ್ಕರ್ ನಮನ ಕಾರ್ಯಕ್ರಮದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಸುಪ್ರೀಂ ಕೋರ್ಟ್ ತೀರ್ಿನಂತೆ ಒಳಮೀಸಲಾತಿಯನ್ನು ಪರಿಶಿಷ್ಟ ಜಾತಿಗಳ ಸಂಖ್ಯಾಬಲದ ಬದಲಿಗೆ ಆವಕಾಶ ವಂಚಿತ ಸಮುದಾಯಗಳ ಆದ್ಯತೆಯ ಆಧಾರದ ಮೇರೆಗೆ ಅವಕಾಶ ನೀಡುವುದಾಗಿದೆ. ಅಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮೊದಲ ಆದ್ಯತೆಯೆಂಬುದು ಡಾ. ಅಂಬೇಡ್ಕರ್ ಅವರ ಅಚಲ ನಿಲುವಾಗಿತ್ತು. ಆದರೆ ರಾಜ್ಯ ಸರಕಾರ ಪರಿಶಿಷ್ಟ ಜಾತಿಯ ಅಲೆಮಾರಿಗಳನ್ನು ಕಡೆಯ ಗುಂಪಿನಲ್ಲಿ ಸೇರಿಸ ಕಡೆಗಣಿಸಿದೆ.
ಆದುದರಿಂದ ಕಾನೂನು ಹೋರಾಟವೊಂದೇ ಅಲೆಮಾರಿಗಳ ಗುರಿಯಾಗಿದೆ. ಆದ್ದರಿಂದ ಶೋಷಿತರು ಒಂದಾಗಬೇಕೇ ಹೊರತು ವಿಭಜನೆಯಾಗಬಾರದು ಎಂದು ಡಾ. ಹಿಮ್ಮಡಿ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಹನುಮಂತ ಗಾಣಿಗೇರ ಸಾಂಸ್ಕೃತಿಕವಾಗಿ ತಳಸಮುದಾಯಗಳ ವಿದ್ಯಾರ್ಥಿಗಳಲ್ಲಿ ಅಪಾರವಾದ ಕಲೆಗಳಿವೆ, ಶೈಕ್ಷಣಿಕವಾಗಿ ಸಾಧನೆಮಾಡಿದ ಇಂತಹ ಪ್ರತಿಭಾವಂತರನ್ನು ಅಂಬೇಡ್ಕರ್ ಅವರ ಹೆಸರಿನಲ್ಲಿ ಪುರಸ್ಕರಿಸಿದರೆ, ಅವರಿಗೆ ಮತ್ತಷ್ಟು ಬಲ ಬರುತ್ತದೆ ಎಂದು ಸಮಾರಂಭದ ಆಶಯವನ್ನು ವಿವರಿಸಿದರು. ಮಾರುತಿ ಅಕ್ಕೆನ್ನವರ, ಶಿವಾಜಿ ಮಾಳಗೆನ್ನವರ, ಮಾಹನುಮಂತ ತುಳಸಿಗೇರಿ, ತಾನಾಜಿ ಗಾಣಿಗೇರ, ಸತ್ಯಪ್ಪ ಗೊಳಸಂಗಿ, ದುರ್ಗಪ್ಪ ತುಳಸಿಗೇರಿ, ಮಹೇಂದ್ರ ಗಾಣಿಗೇರ, ಸಮಾಲೋಚನೆಯಲ್ಲಿ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷ ರಾಮು ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ನಾಗೇಶ ಕಾಮಶೆಟ್ಟಿ, ಅಲೆಮಾರಿ ಅಭಿವೃದ್ಧಿ ಕೋಶದ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಹನುಮಂತ ಅಕ್ಕೆನ್ನವರ, ಕಾನೂನು ಸಲಹೆಗಾರರಾದ ನ್ಯಾಯವಾದಿ ವಸಂತ ಅಕ್ಕೆನ್ನವರ, ಉದಯ್ ಗಾಣಿಗೇರ ಅವರುಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಭೀಮಸೇನ ಹುಲ್ಲೆನ್ನವರ, ಮಯೂರ ಹುಲ್ಲೆನ್ನವರ, ಸವಿತಾ ಗಾಣಿಗೇರ, ತಮ್ಮಾಣಿ ತುಳಸಿಗೇರಿ, ಮಹಾದೇವ ಜಾಗನೂರ, ಮುತ್ತು ಹುಲ್ಲೆನ್ನವರ, ಶಂಕರ ಗಾಣಿಗೇರ, ಚಿಂತಾಮಣಿ ಸಣ್ಣಕ್ಕಿನವರ ಇತರರು ಉಪಸ್ಥಿತರಿದ್ದರು.
ನೌಕರರ ಒಕ್ಕೂಟದ ಕಾರ್ಯದರ್ಶಿ ಶಾನೂರಕುಮಾರ ಗಾಣಿಗೇರ ಸ್ವಾಗತಿಸಿದರು. ಉಪಾಧ್ಯಕ್ಷ ಲಕ್ಷ್ಮಣ್ ಅಕ್ಕೆನ್ನವರ ವಂದಿಸಿದರು. ಹನುಮಂತ ಸಣ್ಣಕ್ಕಿನವರ ನಿರೂಪಿಸಿದರು.*್ಖಫೋಟೋ ಕ್ಯಾಪ್ಶನ್ :*ಹಾರೂಗೇರಿಯ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆಯಲ್ಲಿ ಚೆನ್ನದಾಸರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಮತ್ತು ಸಮಾಲೋಚನಾ ಸಭೆಯನ್ನು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಡಾ. ಯಲ್ಲಪ್ಪ ಹಿಮ್ಮಡಿ ಮತ್ತು ಇತರರು ಪುಷ್ಪ ಅರ್ಿಸಿ ಉದ್ಘಾಟಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 