ಪ್ರತಿಭಾ ಕಾರಂಜಿಯು ಸೂಪ್ತ ಪ್ರತಿಭೆಗಳ ಅನಾವರಣ ವೇದಿಕೆ
Pratibha Karanji is a platform for unveiling hidden talents
ಬೈಲಹೊಂಗಲ 25: ಪ್ರತಿಭಾ ಕಾರಂಜಿಯು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳ ಅಣಾವರಣದ ಸೂಕ್ತ ವೇದಿಕೆಯಾಗಿದೆ ಎಂದು ನಯಾನಗರ ಸರ್ಕಾರಿ ಪ್ರೌಢ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ನಾರಾಯಣ ನಲವಡೆ ಹೇಳಿದರು.
ಅವರು ತಾಲೂಕಿನ ನಯಾನಗರ ಸರ್ಕಾರಿ ಪಿ.ಎಮ್.ಶ್ರೀ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಆನಿಗೋಳ ವಲಯ ಮಟ್ಟದ 29 ಶಾಲೆಗಳ ಸುಮಾರು 500 ಮಕ್ಕಳು ಭಾಗವಹಿಸಿದ್ದ ಪ್ರತಿಭಾ ಕಾರಂಜಿ ಕಲೋತ್ಸವಕ್ಕೆ ಚಾಲನೆ ಮಾತನಾಡಿ ನೀಡಿ ಭಾಗವಹಿಸಿದ ಮಕ್ಕಳು ನಿರ್ಣಾಯಕರಾಗಿ ಆಗಮಿಸಿದ ಗುರುಬಳಗಕ್ಕೆ ನಮ್ಮ ನಮ್ಮ ಶಾಲೆಗಳ ನಮ್ಮ ಮಕ್ಕಳು ಅಂತಾ ಬೇದಭಾವ ಮಾಡದೆ ನಮ್ಮ ವಲಯದ ನೈಜ ಹಾಗೂ ಅರ್ಹ ಪ್ರತಿಭೆಗಳನ್ನು ಮಾತ್ರ ಆಯ್ಕೆ ಮಾಡಿ ತಾಲೂಕು ಹಂತಕ್ಕೆ ಕಳುಹಿಸಬೇಕೆಂದರಲ್ಲದೆ ಮಕ್ಕಳು ಕೂಡಾ ಸರ್ವಾಂಗೀಣ ಪ್ರಗತಿ ಸಾಧಿಸಲು ಈ ರೀತಿ ಪಠ್ಯದೊಂದಿಗೆ ಕ್ರೀಡೆ, ಕಲೆ, ಸಂಗೀತ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಂಡು ಕೌಶಲ್ಯವಂತರಾಗಿ ದೇಶದ ಪ್ರಗತಿಗೆ ತಮ್ಮದೆ ಆದ ಕೊಡುಗೆ ನೀಡಬೇಕೆಂದರು ಅಲ್ಲದೆ ಮುಂದಿನ ಹಂತಗಳಿಗೆ ಮಕ್ಕಳನ್ನು ತರಭೇತುಗೊಳಿಸುವ ಮಹತ್ತರ ಜವಾಬ್ದಾರಿ ಗುರುಬಳಗದ ಮೇಲಿದೆ ಎಂದರು.
ಸಮಾರಂಭದ ಉದ್ಘಾಟಕರಾಗಿ ಕ್ಷೇತ್ರ ಸಮನ್ವಯಾಧಿಕಾರಿ ಆರಿ್ಡ.ಹಿರೇಮಠ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಠಿ ದೀಪ ಬೇಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಘನ ಸರ್ಕಾರವು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಮಹತ್ತರ ಯೋಜನೆ ತಂದಿದ್ದು ಅದರ ಪ್ರಯೋಜನ ಪಡೆಯಬೇಕೆಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಿ.ಆರಿ್ಪ ಮಹೇಶ ಹಿರೇಮಠ ಸಿ.ಆರಿ್ಪ ಸಿದ್ದು ನೇಸರಗಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ನಾಗೇಶ ಮಾಳನ್ನವರ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಎಮ್.ಎಮ್.ಸಂಗೊಳ್ಳಿ, ಪ್ರಾಥಮಿಕ ಶಾಲಾ ಎಸ್.ಡಿ.ಎಮ.ಸಿ ಅಧ್ಯಕ್ಷ ಯಲ್ಲಪ್ಪ ಏಣಗಿ, ಪ್ರೌಢ ಮತ್ತು ಪ್ರಾಥಮಿಕ ಶಾಲಾ ಎಸ್.ಡಿ.ಎಮ.ಸಿ ಉಪಾಧ್ಯೆಕ್ಷರಾದ ಗೀತಾ ಚಂದರಗಿ, ಪಾರ್ವತಿ ದೇವಲಾಪೂರ ಹಿರಿಯರಾದ ಕಲ್ಲಪ್ಪ ಏಣಗಿ, ಮಲ್ಲಪ್ಪ ಕಾಂಬಳೆ ಶ್ರೀಕಾಂತಗೌಡ ಪಾಟೀಲ ಎಸ್.ಡಿ.ಎಮ್.ಸಿ ಸದಸ್ಯರಾದ ನಿಂಗಪ್ಪ ಅಳಗೋಡಿ, ಸೋಮನಿಂಗ ಅಡಕಿ, ರವಿ ಬಡಿಗೇರ, ಬಾಬು ಮಾಳಗಿ, ಮಲ್ಲಪ್ಪ ಏಣಗಿ, ಬೀಮಪ್ಪ ಹಲ್ಕಿ, ಪಂಚಾಯತ ಸದಸ್ಯರಾದ ಉಮೇಶ ಹುಲಮನಿ, ರವಿ ಹುಡೇದ ಎಸ್.ಡಿಎಮ್.ಸಿ ಸದಸ್ಯರು, ಪಾಲಕರು ಪೋಷಕರು ಮುಂತಾದವರು ಉಪಸ್ಥಿತರಿದ್ದರು.
ಗುಂಪು ಆಟಗಳ ಫಲಿತಾಂಶ : ಜಾನಪದ ನೃತ್ಯ ಹಾಗೂ ರಸ ಪ್ರಶ್ನೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ನಯಾನಗರ ಪ್ರಥಮ. ಕವ್ಹಾಲಿಯಲ್ಲಿ ಎಮ್.ಡಿ.ಆರ್.ಎಸ್ ವಕ್ಕುಂದ ಪ್ರಥಮ ಸ್ಥಾನ ಗಳಿಸಿದರು. ಪ್ರಾಥಮಿಕ ಹಾಗೂ ಪ್ರೌಢ ವಿಭಾಗಗಳಲ್ಲಿ ವ್ಯಯಕ್ತಿಕ ಸ್ಪರ್ಧೆಗಳಲ್ಲಿ ಕೂಡ ಆಸಕ್ತಿಯಿಂದ ಭಾಗವಹಿಸಿ ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನು ಪಡೆದು ಮಿಂಚಿದರು.ಶಿಕ್ಷಕ ಆರಿ್ಬ.ಹಾದಿಮನಿ ನಿರೂಪಿಸಿದರು. ಶಿಕ್ಷಕ ಬಸವರಾಜ ಪತ್ತಾರ ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 