ಪ್ರತಾಪವರು ಖಿಳೇಗಾಂವ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಭೇಟಿ

Pratap visits the fair price shop in Khilegaon village

ಪ್ರತಾಪವರು ಖಿಳೇಗಾಂವ ಗ್ರಾಮದ ನ್ಯಾಯಬೆಲೆ ಅಂಗಡಿಗೆ  ಭೇಟಿ 

ಸಂಬರಗಿ 01: ಆಹಾರ ಇಲಾಖೆಯ ತಹಶಿಲ್ದಾರಾದ ಬಿ ವ್ಹಿ ಅಗ್ರಕೆಡ ಹಾಗೂ ಆಹಾರ ನೀರೀಕ್ಷಕರಾದ ಪ್ರತಾಪ ರಾಯಕರ ಗಡಿ ಭಾಗದ ಖಿಳೇಗಾಂವ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಆಕಸ್ಮಿಕವಾಗಿ ಬೆಟ್ಟಿ ನೀಡಿ ಪರೀಶೀಲನೆ ಮಾಡಿ ವಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದರು. ಮಾರ್ಚ ತಿಂಗಳದ ಕೊನೆ ದಿನದಲ್ಲಿ ಆಹಾರ ದಾನ್ಯ ಸರಿಯಾಗಿ ವಿತರಣೆ ಮಾಡಿರುವ ಬಗ್ಗೆ ಪರಿಶಿಲನೆ ಮಾಡಿದರು. ಉಳಿತಾಯ ಆಹಾರ ಮತ್ತು ಲೆಕ್ಕ ಪತ್ರ ಸರಿಯಾಗಿ ಇತ್ತು. ಸರ್ಕಾರದ ಆದೇಶದ ಪ್ರಕಾರ ಆಹಾರ ವಿತರಣೆಯನ್ನು ನಿಗದಿತ ಅವಧಿಯಲ್ಲಿ ವಿತರಿಸಬೇಕೆಂದು ಸೂಚಿಸಿದರು. ಯಾವದೇ ಗ್ರಾಹಕರಿಂದ ತಕರಾರು ಬರದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ಈ ವೇಳೆ ಸಂಬರಗಿ ಆಜೂರ ಶಿರೂರ ಅರಳಿಹಟ್ಟಿ ಮಧಬಾಂವಿ ಜಂಬಗಿ ಸೇರಿದಂತಹ ಹಲವಾರು ಗ್ರಾಮಗಳಿಗೆ ಭೆಟ್ಟಿ ನೀಡಿದರು. ಈ ವೇಳೆ ಖಿಳೇಗಾಂವ ಗ್ರಾಮದ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರು ಬಾಬು ಹೊನ್ನಾಗೋಳ ಸುನಿಲ ಉಮರೆ ಪ್ರವೀಣ ಹೊನ್ನಾಗೋಳ ಪ್ರಫುಲ್ ಪಾಟೀಲ ಬಸವರಾಜ ಗಬಾಳೆ ಗೀರೀಶ ತಗಲಿ ಬಸವರಾಜ ಚನಗೌಡರ ಉಪಸ್ಥಿತರಿದ್ದರು.