ಹುನಗುಂದ17: ಸಮೀಪದ ಹುಲಗಿನಾಳ ಗ್ರಾಮದ ಪ್ರಗತಿಪರ ಯುವ ರೈತ ಪ್ರಶಾಂತ ಅಮರಪ್ಪ ಮನ್ನೆರಾಳ ಅವರು ರಾಜ್ಯಮಟ್ಟದ ಜನಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹೂ ಅಲ್ ಶಿಫಾಹ ವನೌಷಧಿಕ ಆಯುವರ್ೇದ ವೈದ್ಯಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್ ವತಿಯಿಂದ ರಾಯಚೂರ ಜಿಲ್ಲೆಯ ಮುದಗಲ್ ಪಟ್ಟಣದಲ್ಲಿ ಫೆ.24 ರಂದು ನಡೆಯುವ ಮಾನವಧರ್ಮ ಮೂರನೇ ಮಾಧ್ಯಮ ಸಮಾವೇಶ ಹಾಗೂ ರಾಜ್ಯಮಟ್ಟದ ಜನಸೇವಾರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯುವರೈತ ಪ್ರಶಾಂತ ಅಮರಪ್ಪ ಮನ್ನೇರಾಳ ಅವರ ಸಾಧನೆ ಗುರುತಿಸಿ ರಾಜ್ಯಮಟ್ಟದ ಜನಸೇವಾರತ್ನ ಪ್ರಶಸ್ತಿ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ.ಜಲಾಲುದ್ಧೀನ ಅಕ್ಬರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಶಂಸೆ ಪ್ರಮಾಣ ಪತ್ರ: ಈ ಹಿಂದೆ ಕೂಡಾ ಯುವರೈತ ಪ್ರಶಾಂತ ಅಮರಪ್ಪ ಮನ್ನೆರಾಳ ಅವರು 2018-19ನೇ ಸಾಲಿನಲ್ಲಿ ಹನಿ ನೀರಾವರಿ ತಂತ್ರಜ್ಞಾನ ಬಳಸಿಕೊಂಡು ಹೆಚ್ಚು ಇಳುವರಿ ಪಡೆದ ಹಿನ್ನೆಲೆಯಲ್ಲಿ ಕೃಷ್ಣಾ ಜಲ ಭಾಗ್ಯ ನಿಗಮ ನಿಯಮಿತ ಹಾಗೂ ನೇಟಾಫೀಮ್ ಕಂಪನಿ ವತಿಯಿಂದ ಪ್ರಶಂಸೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.