ಪ್ರಕಾಶ ಹುಕ್ಕೇರಿ ಅವರಿಂದ ದೈಹಿಕ ಶಿಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಚಿಕ್ಕೋಡಿ, 08; ರಾಜ್ಯ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಮಕ್ಕಳು ಆಯ್ಕೆಯಾಗಲು ದೈಹಿಕ ಶಿಕ್ಷಕರ ಕೊಡುಗೆ ಅಪಾರವಾಗಿದೆ. ದೈಹಿಕ. ಮಾನಸಿಕ ಮತ್ತು ಶೈಕ್ಷಣಿಕವಾಗಿ ಮಕ್ಕಳನ್ನು ಸದೃಡವಾಗಿಸುವ ದೈಹಿಕ ಶಿಕ್ಷಕರು ಮಾನಸಿಕವಾಗಿ ಸದೃಡವಾಗಿರಲು ರಾಜ್ಯ ಸರಕಾರ ದೈಹಿಕ ಶಿಕ್ಷಕರಿಗೆ ಕ್ರೀಡಾಕೂಟ ಹಮ್ಮಿಕೊಂಡಿದೆ. ದೈಹಿಕ ಶಿಕ್ಷಕರಿಗೆ ಬೇಕಾದ ಅಗತ್ಯ ನೆರವು ನೀಡಲು ನಾನು ಬದ್ಧನಾಗಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. ಶನಿವಾರ ತಾಲೂಕಿನ ನವಲಿಹಾಳ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ದೈಹಿಕ ಶಿಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಮೇಲೆ ಚಿಕ್ಕೋಡಿ. ಬೆಳಗಾವಿ. ವಿಜಯಪೂರ ಮತ್ತು ಭಾಗಲಕೋಟ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಶಿಕ್ಷಕರ ಕೊರತೆ ಇರುವ ಶಾಲೆಯಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಯಾವ ಶಾಲೆಯಲ್ಲಿ ಕೊಠಡಿ ಇಲ್ಲವೋ ಅಂತಹ ಶಾಲೆಗಳಿಗೆ ಹೈಟಿಕ ಕೊಠಡಿ ನಿರ್ಮಿಸಿಕೊಡಲಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ ಮಾತನಾಡಿ ರಾಜ್ಯ ಸರ್ಕಾರ ಮೊದಲ ಬಾರಿಗೆ ದೈಹಿಕ ಶಿಕ್ಷಕರ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಶಾರೀರಿಕ ದೈಹಿಕ ಮತ್ತು ಮಾನಸಿಕವಾಗಿ ಸದೃಡವಾಗಲು ದೈಹಿಕ ಶಿಕ್ಷಕರಿಗೆ ಈ ಕ್ರೀಡೆ ಸಹಕಾರಿಯಾಗಲಿದೆ. ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಪಡಿಸಲು ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಹಗಲಿರುಳು ಶ್ರಮೀಸುತ್ತಿದ್ದಾರೆ. ಕೇಳಿದ್ದನ್ನು ತಕ್ಷಣಾ ನೀಡುತ್ತಿರುವ ಹುಕ್ಕೇರಿ ಅವರ ಶೈಕ್ಷಣಿಕ ಕಾಳಜಿಗೆ ನಾವೇಲ್ಲರೂ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶ್ರಮೀಸೋಣ ಎಂದರು.ವೇದಿಕೆ ಮೇಲೆ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ನಿರ್ದೇಶಕರಾದ ಸಂಜು ಹುಲ್ಲೋಳ್ಳಿ. ಅಲಗೌಡ ಸೊಲ್ಲಾಪೂರೆ. ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಲೋಕನ್ನವರ. ದೈಹಿಕ ಶಿಕ್ಷಣ ಸಂಯೋಜಕ ಬಸವರಾಜ ಅಮ್ಮಿನಬಾವಿ. ಮಹೇಶ ಕಟ್ಟಿಮನಿ. ವೈ.ಎಸ್.ಬುಡ್ಡಗೋಳ. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಎ.ನಿಲಜಗಿ. ಎಸ್.ಎ.ಖಡ್ಡ. ಜಯರಾಮ ಸರಕಾರ. ಗ್ರಾ.ಪಂ ಅಧ್ಯಕ್ಷ ಸಚೀನ ಸನದಿ. ಮಾರುತಿ ಕವಲಾಪೂರೆ. ಸಂಜು ಚನ್ನಪಟ್ಟಣ. ಎಲ್.ಆರ್.ಪೂಜೇರಿ. ಕೆ.ಎಸ್.ಪಾಟೀಲ ಮುಂತಾದವರು ಇದ್ದರು. ದೈಹಿಕ ಶಿಕ್ಷಕ ಎನ್.ಜಿ.ಪಾಟೀಲ ಸ್ವಾಗತಿಸಿದರು. ಎ.ಜೆ.ಧುಮಾಳ ವಂದಿಸಿದರು.