ಏಕಾಗ್ರತೆಗೆ ಅಭ್ಯಾಸ ಬಲವೇ ಪ್ರಧಾನ ಸಾಧನ: ಹೂಗಾರ

Practice is the main tool for concentration: Hugara

ಧಾರವಾಡ 09: ಏಕಾಗ್ರತೆಗೆ ಅಭ್ಯಾಸ ಬಲವೇ ಪ್ರಧಾನ ಸಾಧನ. ಪುನಃ ಪುನಃ ಓದುವುದು ಬರೆಯುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆಎಂದುಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಅಭಿಪ್ರಾಯಪಟ್ಟರು. 

ಧಾರವಾಡದಕರ್ನಾಟಕ ವಿದ್ಯಾವರ್ಧಕ ಸಂಘದ ‘ಮಕ್ಕಳ ಮಂಟಪ’ವು ನರಗುಂದದಬನಹಟ್ಟಿಯಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟ “ಅಧ್ಯಯನದಲ್ಲಿಏಕಾಗ್ರತೆ ಸಾಧಿಸುವುದು ಹೇಗೆ?’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡಿದಅವರು, ಶ್ರದ್ಧೆಯಿಂದ, ಉತ್ಸಾಹದಿಂದ ಬುದ್ಧಿಯನ್ನು ಉಪಯೋಗಿಸಿ ಅಭ್ಯಾಸ ಮಾಡಬೇಕು.ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಬೇಕು ಅದನ್ನೇಆತ್ಮವಿಶ್ವಾಸಎಂದುಕರೆಯುತ್ತಾರೆ. ಅಧ್ಯಯನ ನಿರತರಾದಾಗ ಸಮಯಕ್ಕೆಆದ್ಯತೆಯನ್ನುಕೊಡಬೇಕು. ವಿನಾಕಾರಣ ಸಮಯ ಹಾಳು ಮಾಡದೇ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ಈಗಾಗಲೇ ‘ಸಿ’ ಗ್ರೇಡ್ ವಿದ್ಯಾರ್ಥಿಗಳಿಗಾಗಿ ತಾಲೂಕಿನಲ್ಲಿ  ಪರಿಣಾಮ ಸುಧಾರಣೆಗಾಗಿ ಕೇಂದ್ರಗಳನ್ನು ಸ್ಥಾಪಿಸಿದ್ದು, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪಾಲಕರ ಸಭೆಯನ್ನುಕರೆದು ಮಕ್ಕಳ ಬಗ್ಗೆ ನಿರಂತರ ಕಾಳಜಿ ವಹಿಸುವಂತೆ ಮಾಡಲಾಗಿದೆಎಂದು ತಿಳಿಸಿದರು. 

ಕ.ವಿ.ವ. ಸಂಘದಕಾರ್ಯಕ್ರಮ ಸಂಯೋಜಕರಾದ ವೀರಣ್ಣಒಡ್ಡೀನ ಮಾತನಾಡಿ, ಅಧ್ಯಯನ ಒಂದು ವೃತಇದ್ದಂತೆ. ವಿದ್ಯಾರ್ಥಿಗಳು ವೃತಧಾರಕರಾಗಿ ಅಧ್ಯಯನ ಮಾಡಬೇಕು, ಚಂಚಲ ಚಿತ್ತವಾದ ಮನಸ್ಸನ್ನು ಒಮ್ಮುಖಗೊಳಿಸಿ ಅಧ್ಯಯನ ಮಾಡಬೇಕು, ಓದಿನ ಜೊತೆಗೆ ಬರವಣಿಗೆಗೂ ಮಹತ್ವವನ್ನು ನೀಡಬೇಕು, ಓದುವಾಗಅನ್ಯ ವಿಷಯಗಳು ಮನಸ್ಸನ್ನು ಪ್ರವೇಶಿಸದಂತೆ ನಿರ್ಬಂಧಿಸಬೇಕು, ಅಧ್ಯಯನ ನಿರತರಾದಾಗಅಲ್ಪ ವಿಶ್ರಾಂತಿಯು ಮುಖ್ಯ ಎಂದು ತಿಳಿಸಿದರು. 

ಡಿಮ್ಹಾನ್ಸ ಮನೋಆರೋಗ್ಯ ಸಮಾಜ ಕಾರ್ಯಕರ್ತರಾದ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ. ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ನಿಮ್ಮಜೀವನದ ಮಹತ್ವದ ತಿರುವು, ಆತ್ಮವಿಶ್ವಾಸ, ಛಲ, ಬದ್ಧತೆಯಿಂದ ಅಧ್ಯಯನ ಮಾಡಿದರೆ ಜೀವನದಲ್ಲಿ ಎಂಥಾ ಸಾಧನೆಯನ್ನಾದರೂ ಮಾಡಬಹುದು.ಮುಖ್ಯವಾಗಿಓದಲು ಹಸಿವು ಮತ್ತು ಆಸಕ್ತಿ ಮುಖ್ಯ.ಪರೀಕ್ಷೆ ಬಗ್ಗೆ ವಿನಾಕಾರಣ ಭಯ ಪಡದೆಅಧ್ಯಯನ ಮಾಡಬೇಕು.ಭಯವು ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ಕುಗ್ಗಿಸುತ್ತದೆ.ಯೋಜನಾಬದ್ಧವಾಗಿಓದಿದರೆಯಶಸ್ಸು ನಿಮ್ಮದಾಗುತ್ತದೆ.ಗುಂಪು ಚರ್ಚೆ, ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯ.ಪಠ್ಯಪುಸ್ತಕದ ಹೊರತುಗೈಡ್ ಹಾಗೂ ಡೈಜಿಸ್ಟ್‌ಗಳನ್ನು ಉಪಯೋಗಿಸಬಾರದುಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಬನಹಟ್ಟಿ ಕೆ.ಪಿ.ಎಸ್‌. ಪ್ರಾಚಾರ್ಯ ಕೆ.ಎಂ. ಹುದ್ದಾರ ಮಾತನಾಡಿದರು.   

ಉಪ ಪ್ರಾಚಾರ್ಯಎಸ್‌.ವಾಯ್‌.ಪಾಟೀಲ ಸ್ವಾಗತಿಸಿದರು, ಗೀತಾ ಪೂಜಾರ ನಿರೂಪಿಸಿದರು.ಸಿ.ಜಿ. ಖಾನಾಪೂರ ವಂದಿಸಿದರು. 

ಕಾರ್ಯಕ್ರಮದಲ್ಲಿ ಪರಮೇಶ, ಕವಿತಾ ಸಿರಿಯಣ್ಣವರ, ಅನ್ನಪೂರ್ಣಾ, ಸಂಗನಗೌಡ ಪಾಟೀಲ, ಎಸ್‌.ಎನ್‌. ಗಡೇಕಾರ, ಕೆ.ಪಿ.ಎಸ್‌. ಪ್ರೌಢ ಶಾಲೆಯ ಶಿಕ್ಷಕರು, ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.