ವೈದ್ಯರು ಆಧುನಿಕ ವಿಜ್ಞಾನ ಬಳಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ

ಬಾಗಲಕೋಟೆ29 : ಆಧುನಿಕ ವಿಜ್ಞಾನ ಎಂಬುವುದು ವಿಶಾಲವಾಗಿ ಬೆಳೆಯುತ್ತಿದ್ದು, ವೈದ್ಯರು ಅದನ್ನು ಉತ್ತಮ ಕೆಲಸಕ್ಕೆ ಬಳಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್. ಡಾ. ಕೆ. ರಾಜೇಂದ್ರ ಹೇಳಿದರು. 

ಜಿಲ್ಲಾ ಪಂಚಾಯತ  ಸಭಾಭವನದಲ್ಲಿ  ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ  ಪ್ರಧಾನ ಮಂತ್ರಿ ಸುರಕ್ಷಿತಾ ಮಾತೃತ್ವ ಅಭಿಯಾನ, ಸುರಕ್ಷಿತ ಮಾತೃತ್ವ ಉಪಕ್ರಮ ಹಾಗೂ ಪಿಸಿ-ಪಿಎನ್ಡಿಟಿ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿದ ಅವರು ವೈದ್ಯರ ಕರ್ತವ್ಯ ಎಂಬುವುದು ದೇವರ ಕೆಲಸವಿದ್ದಂತೆ ಪ್ರತಿಯೊಬ್ಬರು ಅದನ್ನು ಗೌರವಿಸುತ್ತಾರೆ. ಇಂತಹ ವೃತ್ತಿಯಲ್ಲಿರುವ ವೈದ್ಯರು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು ಮತ್ತು ಲಿಂಗಪತ್ತೆ, ಭ್ರೂಣಹತ್ಯೆಗಳಂತಹ ಕೆಟ್ಟ ಕಾರ್ಯ ಮಾಡಬಾರದು ಎಂದರು. 

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಕಾನೂನು ಎಷ್ಟೇ ಕಠಿಣ ಕ್ರಮವಿದ್ದರೂ  ಹೆಣ್ಣು ಭ್ರೂಣ ಪತ್ತೆ ಮಾಡಿ ಲಿಂಗ ತಾರತಮ್ಯತೆ ಮಾಡುತ್ತಿರುವುದು ಕಂಡು ಬರುತ್ತದೆ. ಕಾನೂನಿನ ಪ್ರಕಾರ ಸರ್ವರು ಸಮಾನರು ಎಂದು ಬಾಯಿ ಮಾತಿಗೆ ಹೇಳಿದರೂ, ಇನ್ನು ಕೆಲವೆಡೆ ಭ್ರೂಣ ಹತ್ತೆಗಳು ಆಗುತ್ತಿರುವುದು ಕಂಡು ಬಂದಿದೆ ಎಂದರು. 

ಸಮಾಜದಲ್ಲಿ ಸರ್ವರು ಸಮಾನರು ಎಂದು ಸಂವಿಧಾನದ ಪ್ರಕಾರ ಹೇಳಲಾಗುತ್ತದೆ. ಅದರಂತೆಯೇ ನಾವುಗಳು ಹೆಣ್ಣಿನ ಶೋಷಣೆಯನ್ನು ತಡೆಯಬೇಕು. ಅದಕ್ಕಾಗಿ ಸಕರ್ಾರ ಭೇಟಿ ಬಚ್ಚಾವೋ ಭೇಟಿ ಪಡಾವೋ ಎಂಬ ಕಾರ್ಯಕ್ರಮವನ್ನು ಜಾರಿಮಾಡಿ ಹೆಣ್ಣು ಮಕ್ಕಳಿಗೆ ಉತ್ತಮ ಸ್ಥಾನ ಕಲ್ಪಿಸಿಕೊಡಲು ಸಹಕಾರಿಯಾಗುತ್ತಿದೆ. ಅದರಂತೆ ಎಲ್ಲ ಜಿಲ್ಲೆಯಲ್ಲಿಯೂ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಇಲ್ಲದಂತಾಗುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಎಂದು ಕೀಳಾಗಿ ಕಾಣುವವರ ಮಧ್ಯ ತಾನು ಶ್ರೇಷ್ಠಳು ಎಂದು ಸಮಾಜಕ್ಕೆ ತೋರಿಸುತ್ತಿದ್ದಾಳೆ. ಭ್ರೂಣ ಹತ್ತೆ ತಡೆಯಲು ಎಲ್ಲರೂ ಕೈಜೋಡಿಸಬೇಕು. ಅದರಲ್ಲಿಯೂ ಪ್ರಮುಖವಾಗಿ ವೈದ್ಯರಾದವರು ದೇಶದ ಭವಿಷ್ಯವನ್ನು ಕಟ್ಟುವವರು ಅಂತಹ ವೈದ್ಯರು ತಮ್ಮ ವೃತಿಯಲ್ಲಿ ಲೋಪ ಬರದಂತೆ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಿಸಿ-ಪಿಎನ್ಡಿಟಿ ಸಮಿತಿ ಅಧ್ಯಕ್ಷರಾದ ಡಾ. ದಡ್ಡೇನ್ನವರ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಡಿಹೆಚ್ಒ ಎ. ಎನ್ ದೇಸಾಯಿ, ಡಾ. ಡಿ.ಬಿ ಪಟ್ಟಣಶೆಟ್ಟಿ, ಡಾ.ಬಿ.ಜಿ ಹುಬ್ಬಳ್ಳಿ, ಡಾ. ಜಯಶ್ರೀ ಎಮ್ಮಿ, ಡಾ. ಕುಸುಮಾ ಮಾಗಿ, ಡಾ. ಪಿ.ಎ ಹಿಟ್ಟನ್ನಳ್ಳಿ, ಜಿಲ್ಲೆಯ ಎಲ್ಲ ಡೈನಾಕಾಲೋಜಿಸ್ಟ್ ಮತ್ತು ಹೆರಿಗೆ ತಜ್ಞರು ಉಪಸ್ಥಿತರಿದ್ದರು.