ಪ್ರಾಚಾರ್ಯ ಜಿ.ಬಿ.ಬೆಳವಿಗಿ: ಗೌರವ ಡಾಕ್ಟರೇಟ್ ಪ್ರದಾನ.

ರಾಣೇಬೆನ್ನೂರು03: ಇಲ್ಲಿನ ಮಾರುತಿ ನಗರದ ಸಕರ್ಾರಿ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ, ಸಾಮಾಜಿಕ ಚಿಂತಕ ಪ್ರೋ. ಗಂಗಪ್ಪ ಬಸಪ್ಪ ಬೆಳವಿಗಿ ಅವರು ಗೌರವ ಡಾಕ್ಟರೇಟ್ಗೆ ಭಾಜನರಾಗಿದ್ದಾರೆ.  ಶಿಕ್ಷಣವೂ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಸೇವೆಯನ್ನು ಪರಿಗಣಿಸಿದ ಅಮೇರಿಕಾದ ಪ್ರತಿಷ್ಠಿತ ಭೊಲವಿಯಾ ವಿಶ್ವವಿದ್ಯಾಲಯದ ಡಾ. ಎಸ್.ರಾಧಾಕೃಷ್ಣನ್ ಟೀಚರ್ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಸಂಸ್ಥೆಯು ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಿದೆ.   ಈ ನಿಮಿತ್ತ ಪ್ರೋ. ಡಾ. ಗಂಗಪ್ಪ ಬೆಳವಿಗಿ ಅವರನ್ನು ಶನಿವಾರ ಸಂಜೆ ಕಾಲೇಜು ಆವರಣದಲ್ಲಿ ನಡೆದ ಕಾಲೇಜಿನ ಉಪನ್ಯಾಸಕರು, ವಿದ್ಯಾಥರ್ಿಗಳು, ಸನ್ಮಾನಿಸಿ ಅಭಿನಂದಿಸಿ ಗೌರವಿಸಿದರು.