ಸಂಭ್ರಮದಿಂದ ದತ್ತ ಜಯಂತಿ ಆಚರಣೆಗೆ ಸರ್ವ ಸಿದ್ಧತೆ

ಲೋಕದರ್ಶನ ವರದಿ

ಶಿಂಧೋಳ್ಳಿ  16:ಪ್ರತಿ ವರ್ಷದಂತೆ ದತ್ತ ಜಯಂತೋತ್ಸವವನ್ನು ಚರಿಸುತ್ತ ಬಂದಿರುವ ದತ್ತ ಉತ್ಸವ ಕಮೀಟಿ ಶಿಂಧೋಳ್ಳಿಯ ಸಾರಿಗೆ ನಗರ (ಕೆಎಸ್ಆರ್ಟಿಸಿ)ಈ ವರ್ಷ ವಿಭಿನ್ನ ರೀತಿಯಲ್ಲಿ ಮತ್ತು ಅತಿ ವಿಜ್ರಂಭನೆಯಿಂದ ಆಚರಿಸುವ ನಿರ್ಣಯವನ್ನು ಕಮೀಟಿಯರು ಕೈಗೊಂಡಿದ್ದು, ಹೊಸ ಕಟ್ಟಡದ ವಾಸ್ತು ಪೂಜೆ ಹಾಗು ವಿನೂತನವಾಗಿ ಬಾಗಲಕೋಟೆಯಿಂದ ನಿಮರ್ಿಸಿ ತರಲಾದ ಶಿಲೆಯ ದತ್ತ ಮೂತರ್ಿ ಪ್ರತಿಸ್ಥಾಪನೆಯನ್ನು ಶುಕ್ರವಾರ ದಿನಾಂಕ 14ರಂದು ಪ್ರತಿಸ್ಥಾಪಿಸಲಾಯಿತು. 

ಗುರುವಾರ ದಿನಾಂಕ 13ರಂದು ದತ್ತ ಶಾಲಾ ಮೂತರ್ಿಯನ್ನು ಕುಂಭ ಕಲಶ ಅನೇಕ  ಮುತ್ತೈದೆಯರು ಹಾಗೂ ಸಾರ್ವಜನಿಕರು ಭಜನೆಯೊಂದಿಗೆ ಇಂಡಾಲ ನಗರದ ಗಣಪತಿ ಮಂದಿರದಿಂದ ಕೆಎಸ್ಆರ್ಟಿಸಿ (ಸಾರಿಗೆ ನಗರ)ದ ವರೆಗೆ ಭವ್ಯ ಮೆರವಣಿಗೆಯೊಂದಿಗೆ ದತ್ತ ಮಂದಿರದಲ್ಲಿ ಪುಣ್ಯಾಹ ವಾಚನ, ಮಂತ್ರಿಕಾ ಪೂಜೆ, ನವಗ್ರಹ ಪ್ರಭಾದಿ ಮಂಡಲ, ವಾಸ್ತುಪೂಜೆ, ಮೂತರ್ಿ ಜಲಾದಿವಸ, ಅಷ್ಟತೀರ್ಥ ಸ್ನಾನ, ಶಯನ ,ಶಯಾದಿವಸ ನವಗ್ರಹ ಹೋಮ, ಕಲಶಸ್ನಾನ, ದತ್ತಿ ಮೂತರ್ಿ ಪ್ರತಿಸ್ಥಾಪನೆ ಹಾಗೂ ನಿಗರ್ುಲ ಪಾದುಕಾ ಪ್ರತಿಷ್ಠಾಪನೆ ಮುಂತಾದ ಕಾರ್ಯಕ್ರಮಗಳು ಜರುಗಿದವು. 

ಈ ಕಾರ್ಯಕ್ರಮಗಳು ದಿನಾಂಕ 13ರಿಂದ ಪ್ರಾರಂಭವಾಗಿ 23ರ ವರೆಗೆ ನಿರಂತರವಾಗಿ ಪ್ರತಿದಿನ ಹಮ್ಮಿಕೊಂಡ ದಿನಾಂಕದೊಂದಿಗೆ ಬೇರೆ ಬೇರೆ ವಿಶೇಷ ಪುಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಪ್ರತಿದಿನ ಸಂಜೆ ಅಭಿಷೇಕ, ಪೂಜಾ ಕಾರ್ಯಕ್ರಮ, ಗುರುಚರಿತ್ರೆ ಸಾಪ್ತಾಹ, ಮಂಗಳಾರತಿ, ನೈವೆದ್ಯ ಮತ್ತು ಸಂಜೆಗೆ ಭಜನೆ, ದೀಪೋತ್ಸವ ಮುಂತಾದ ಕಾರ್ಯಕ್ರಮ ಇರುತ್ತವೆ. 

ಅದೇ ರೀತಿ ಶುಕ್ರವಾರ ದಿನಾಂಕ 21ರಂದು ಮುಂಜಾನೆ 9 ಘಂಟೆಗೆ ಸಾಪ್ತಾಹ ಕಾರ್ಯಕ್ರಮ ಮುಕ್ತಾಯ. ಅದೆ ಸಂಜೆ ಸಂಧ್ಯಾ ಪೂಜೆ, ಭಜನೆ ಅಲ್ಪ ಪ್ರಸಾದ ವಿತರಣೆ ಇರುತ್ತದೆ. ಶನಿವಾರ ದಿನಾಂಕ 22ರಂದು ಮುಂಜಾನೆ 7 ಘಂಟೆಗೆ ಪಲ್ಲಕ್ಕಿ ಹೊತ್ತು ಶಿಂಧೊಳ್ಳಿ ಗ್ರಾಮ ಪ್ರದಕ್ಷಿಣೆಯನ್ನು ಎಲ್ಲ ಭಕ್ತರಿಂದ ಹಾಗು ಸಾರ್ವಜನಿಕರಿಂದ ಮಾಡಲಾಗುತ್ತದೆ. ಸಾಯಂಕಾಲ  6 ಘಂಟೆಗೆ ದತ್ತಾತ್ರೇಯ ನಾಮಕರಣ, ತೊಟ್ಟಿಲೋತ್ಸವ ಮತ್ತು ಮಹಾ ಮಂಗಳಾರತಿ, ಮಂತ್ರ ಪುಷ್ಟಿ ಪ್ರಸಾದ ಹಾಗು ಭಜನೆ ಕಾರ್ಯಕ್ರಮ. 

ದಿನಾಂಕ 23 ರವಿವಾರ ಮುಂಜಾನೆ 9ರಿಂದ ರುದ್ರಾಭಿಷೇಕ, ಪೊಡಕೋಪಚಾರ ಪೂಜೆ. 10.30ಕ್ಕೆ ಸತ್ಯೆ ದತ್ತ ಕಥಾ ಪಠಣ, ಪೂಜಾ ನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಮಧ್ಯಾಹ್ನ 1-30ಕ್ಕೆ ಮಹಾ ಪ್ರಸಾದ ಸಂಜೆ 7 ಘಂಟೆಗೆ ಮಂಗಳಾರತಿ, ಭಜನೆ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುವುದು. 

ಈ ಎಲ್ಲ ಸೇವಾ ಕಾರ್ಯಕ್ರಮಕ್ಕೆ ಭಕ್ತರು ಬಂದು ತಮ್ಮ ಅಳಿಲು ಸೇವೆಯನ್ನು ಕಾಯ, ವಾಚಾ, ಮನಸಾ, ಧನ, ಧಾನ್ಯದೊಂದಿಗೆ ಕೈ ಜೋಡಿಸಬೇಕೆಂದು ದತ್ತಾತ್ರೇಯ ಸರ್ವ ವಿಕಾಸ ಸಂಸ್ಥೆಯವರು ತಿಳಿಸಿದ್ದಾರೆ. 

ಭಕ್ತಾದಿಗಳಿಗೆ ವಿಶೇಷ ಸೂಚನೆ :ಶನಿವಾರ ದಿನಾಂಕ 22ರಂದು ಮುಂಜಾನೆ 7 ಘಂಟೆಗೆ ಎಲ್ಲ ಭಕ್ತರು ಅದರಲ್ಲಿಯೇ ಯುವಕರು ಪಲ್ಲಕ್ಕಿ ಸೇವೆಗೆ ಸಹಕರಿಸಲು ಮತ್ತು ಪ್ರತಿದಿನದ ಸೇವೆಗೆ ಸಹಾಯ ಮಾಡುವವರು ಮತ್ತು ದತ್ತ ಸಪ್ತಾಹಕ್ಕೆ ಕುಳಿತು ಕೊಳ್ಳುವವರು ಎಲ್.ಜಿ ಖೋತ 9686875419, ಮಿಲೀಂದ ಚಿಟ್ನಿಸ್ 9980583305 ಸಂಪಕರ್ಿಸಲು ಕೋರಿದ್ದಾರೆ. 

ಮೇಲಿನ ಎಲ್ಲ ದಿನಾಂಕದೊಂದಿಗೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ದತ್ತ ಕಮೀಟಿಯವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.