ಪ್ರಭಾಕರ್ ಕೋರೆ ಕೋ.ಆಪ್‌. ಕ್ರೆಡಿಟ್ ಸೊಸೈಟಿ ಶಾಖೆಯ ವಾರ್ಷಿಕೋತ್ಸವ

Prabhakar Kore Co.Op. Credit Society Branch Anniversary

ಲೋಕದರ್ಶನ ವರದಿ 

ಪ್ರಭಾಕರ್ ಕೋರೆ ಕೋ.ಆಪ್‌. ಕ್ರೆಡಿಟ್ ಸೊಸೈಟಿ ಶಾಖೆಯ ವಾರ್ಷಿಕೋತ್ಸವ  

ಮಾಂಜರಿ 07: ಸಮೀಪದ ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆ ಎಲ್ ಇ ಸಂಸ್ಥೆಯ  ಕಾರ್ಯಾಧ್ಯಕ್ಷ ಡಾ ಪ್ರಭಾಕರ್ ಕೋರೆ ಇವರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘದಲ್ಲಿ ಸಾಧನೆ ಮಾಡುತ್ತಿರುವ ಪ್ರಭಾಕರ್ ಕೋರೆ ಕೋ.ಆಪ್‌. ಕ್ರೆಡಿಟ್ ಸೊಸೈಟಿಯ ಶಿವ ಶಕ್ತಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿರುವ  ಶಾಖೆಯ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಮಹಾಲಕ್ಷ್ಮೀ ಪೂಜೆಯೊಂದಿಗೆ ಅದ್ದೂರಿಯಾಗಿ ಜರುಗಿತು. 

ನಂತರ  ಶಾಖಾಧ್ಯಕ್ಷ ಬಾಲಚಂದ್ರ ಗುರುಸಿದ್ದ ದತ್ತವಾಡೆ ಮಾತನಾಡಿ, ಸಮಾಜದಲ್ಲಿ ಸಹಕಾರಿ ಸಂಸ್ಥೆಗಳು ಜನರ ಕಲ್ಯಾಣಕ್ಕಾಗಿ ಸ್ಥಾಪಿತವಾಗಿದ್ದು ಜನೋಪಯೊಗಿ ಸೇವೆಗಳ ಮೂಲಕ ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಹಾಗೂ ಯಡ್ರಾವ ಶಾಖೆಯಿಂದ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸದಸ್ಯರಿಗೆ ಶಿವಶಕ್ತಿ ಫ್ಯಾಕ್ಟರಿ ಹಾಗೂ ಸಿಬಿಕೆಎಸ್‌ಎಸ್‌ಕೆ ಫ್ಯಾಕ್ಟರಿ ಕಬ್ಬಿನ ಬಿಲ್ಲ ಮತ್ತು  ಜೀವ ವಿಮೆ, ಸಾಮ್ಯಾನ ವಿಮೆ, ಆರೋಗ್ಯ ವಿಮೆ, ಕ್ಯಾನ್ಸರ್ ವಿಮೆ ಅನುಕೂಲವಾಗಿದೆ ಎಂದು ಹೇಳಿದರು.  

ಶಾಖಾ ವ್ಯವಸ್ಥಾಪಕ ಚಿದಾನಂದ ಸರಡೆ ಮಾತನಾಡಿ, ಯಡ್ರಾವ ಶಾಖೆ ರೂ 46  ಲಕ್ಷ 98 ಸಾವಿರ ಪ್ರಚಲಿತ ಆರ್ಥಿಕ ವರ್ಷದಲ್ಲಿ ಲಾಭ ಆಗಿರುತ್ತದೆ. ಮುಂಬರುವ ದಿನಗಳಲ್ಲಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರು ಹಾಗು ಸಂಚಾಲಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಎಸ್ ಕರೋಶಿ ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಹೆಚ್ಚಿನ ರೀತಿಯಲ್ಲಿ ಪ್ರಗತಿ ಪಥದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. 

ಸಂಚಾಲಕರುಗಳಾದ ಅಜೀತ ಬಸಪ್ಪಾ ಸಂಗಮೇಶ್ವರ, ಬಸಪ್ಪಾ ನರಸಪ್ಪಾ ಪಡಲಾಳೆ, ಬಾಬು ಅಪ್ಪಾಸಾಬ ಪಾಟೀಲ, ಅಣ್ಣಪ್ಪಾ ಕೃಷ್ಣಪ್ಪಾ ಖೋತ ಮತ್ತು ರಾಮು ಮಲ್ಲಪ್ಪಾ ಮಾಳಿ, ಸೇರಿದಂತೆ ಶಾಖಾ ವ್ಯವಸ್ಥಾಪಕ ಚಿದಾನಂದ ಸರಡೆ ಶಾಖೆಯ ಸಿಬ್ಬಂದಿ ವರ್ಗದವರು, ಶಿವಶಕ್ತಿ ಕಾರ್ಖಾನೆಯ ಮುಖ್ಯ ಲೆಕ್ಕಾಧಿಕಾರಿಗಳು, ಪ್ರಧಾನ ವ್ಯವಸ್ಥಾಪಕರು ಹಾಗೂ ಕಾರ್ಖಾನೆಯ ಸಿಬ್ಬಂದಿಗಳು ಹಾಗೂ ಸದಸ್ಯರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.