ಸಿಂದಗಿ 08: ಓದಿನೊಂದಿಗೆ ಸಾಧನೆ ಮಾಡಲು ಬಡತನ ಎಂಬುದು ಅಡ್ಡಿಯಾಗಲಾರದು. ನನ್ನ ಈ ಸಾಧನೆಗೆ ನನ್ನ ಕುಟುಂಬ ಪಾತ್ರ ಹಿರಿದಾದದ್ದು ಎಂದು ವೈದ್ಯಾಧಿಕಾರಿ ಪ್ರಾ.ಆ.ಕೇಂದ್ರ ಮಡಕೇಶ್ವರ ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ 482 ರಾ್ಯಂಕ್ ಪಡೆದ ಡಾ.ಮಹೇಶ ಆರ್.ಮಡಿವಾಳರ ಹೇಳಿದರು.
ಪಟ್ಟಣದ ಶ್ರೀ ಪದ್ಮಾರಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶ್ರೀಪದ್ಮರಾಜ ಮಹಿಳಾ ಪದವಿ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ದಿಕ್ಕು ಬದಲಾವಣೆ ಮಾಡುವುದೇ ಪದವಿ. ಮನೆಯ ಜವಾಬ್ದಾರಿಯಲ್ಲಿ ಪುರುಷನಷ್ಟೇ ಪಾತ್ರ ಮಹಿಳೆಯದ್ದು ಆಗಿರುತ್ತದೆ. ಮಹಿಳೆ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿಯಲ್ಲಿಯೇ ಸಾಧನೆ ಮಾಡಲೇಬೇಕು. ಅಸಮಾನತೆ, ಬಡತನ ಎವೆಲ್ಲವನ್ನು ಮೆಟ್ಟಿನಿಂತು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ನಿರಂತರವಾಗಿ ಓದಿನಲ್ಲಿ ತೊಡಗಿಕೊಳ್ಳಬೇಕು. ಶಿಕ್ಷಣ. ಶಾಂತಿ, ಸತ್ಯ, ಅಹಿಂಸೆ ಮಾರ್ಗದಿಂದ ಮೊದಲು ಎಲ್ಲವನ್ನು ಪಾಲಿಸೋಣ. ವಿದ್ಯಾರ್ಥಿಗಳು ಓದಿನಲ್ಲಿ ನಿರಂತರತೆ ಇದ್ದರೆ ಮಾತ್ರ ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾ ಮಹಾವಿದ್ಯಾಲಯದ ಆಯ್‌ಎಎಸ್/ಕೆಎಎಸ್ ಪರೀಕ್ಷೆಗೆ ಸಂಬಂಧಿಸಿ ಯಾವುದೇ ರೀತಿಯ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಅದರ ಕುರಿತಾಗಿ ನಾನು ನಿಮಗೆ ಹೇಳಲು ಸದಾ ಸಿದ್ದ ಎಂದು ಕಿವಿಮಾತು ಹೇಳಿದರು.
ಈ ವೇಳೆ ವಿಶೇಷ ಸನ್ಮಾನಿತರಾಗಿ ಆಗಮಿಸಿದ ಮಹಿಳಾ ಪಪೂ ಕಾಲೇಜ ನಿವೃತ್ತ ಪ್ರಾಚಾರ್ಯ ಎಂ.ಎಸ್.ಹೈಯಾಳಕರ ಮಾತನಾಡಿ, ಸಂಸ್ಥೆ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಕೀಳರಿಮೆ ಭಾವನೆ ಹೋಗಲಾಡಿಸಿಕೊಂಡು ಬೆಳೆಯಬೇಕು. ಮಹಿಳಾ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣವನ್ನು ಪಡೆದುಕೊಂಡು ಸಂಸ್ಥೆ ಮತ್ತು ಕಾಲೇಜಿನ ಕೀರ್ತಿ ಬೆಳಗಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ವೇಳೆ ಮಹಿಳಾ ವಿಶ್ವವಿದ್ಯಾಲಯಕ್ಕೆ ರಾ್ಯಂಕ್ ಬಂದ ಬಿಎಸ್‌ಡಬ್ಲ್ಯೂ ವಿಭಾಗದ ಐಶ್ವರ್ಯ ತಮದೊಡ್ಡಿ ಹಾಗೂ ವಿಶ್ವವಿದ್ಯಾಲಯದ ಖೋ-ಖೋ ತಂಡಕ್ಕೆ ಬ್ಲ್ಯೂ ಆಗಿ ಆಯ್ಕೆಯಾದ ನಮ್ಮ ಮಾವಿದ್ಯಾಲಯದ ವಿದ್ಯಾರ್ಥಿನಿ ಸಿದ್ದಮ್ಮ ಬಿರಾದಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಚೇರಮನ್ನರು ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪ್ರಾಚಾರ್ಯ ಎಸ್.ಎಂ. ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ವಿ.ಡಿ.ಪಾಟೀಲ, ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ.ನಂದಿಮಠ, ವಿ.ಪಿ.ನಂದಿಕೋಲ, ಜಿ.ಎಸ್.ಕುಲಕರ್ಣಿ, ಎ.ಆರ್.ರಜಪೂತ, ಯು.ಸಿಪೂಜೇರಿ, ಎಸ್.ಎನ್.ಕುಂದಗೋಳ, ಎನ್.ಬಿ.ಬಿರಾದಾರ, ಎಮ್.ಕೆ.ಬಿರಾದಾರ, ಬಿ.ಬಿ.ನಂದಿಮಠ, ಜಿ.ವಿ.ಪಾಟೀಲ, ಎಂ.ಎಂ.ಈಳಗೇರ, ಎಸ್.ಎಸ್.ದುದ್ದಗಿ, ಡಿ.ಎಂ.ಪಾಟೀಲ, ಸತೀಶ ಕಕ್ಕಸಗೇರಿ, ಹೇಮಾ ಕಾಸರ, ಶಂಕರ ಕುಂಬಾರ, ಮಮತಾ ಹರನಾಳ, ವಿಜಯಲಕ್ಷ್ಮೀ ಭಜಂತ್ರಿ ಸೇರಿದಂತೆ ಮಾಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಈ ವೇಳೆ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಎಸ್.ಸಿ.ದುದ್ದಗಿ ವರದಿ ವಾಚಿಸಿದರು. ಉಪನ್ಯಾಸಕಿ ಹೇಮಾ ಹಿರೇಮಠ ಸ್ವಾಗತಿಸಿದರು. ವಿದ್ಯಾರ್ಥಿ ವಿಶಾಲಾಕ್ಷಿ ಬಿರಾದಾರ ಪ್ರಾರ್ಥಿಸಿದರು. ಮಧುಶ್ರೀ ಮತ್ತು ಸೀಮಾ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾಜ ಗೋಲಗೇರಿ ವಂದಿಸಿದರು.