ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರ ಪ್ರತಿಭಟನೆPostal employees protest demanding fulfillment of various demands
Lokadrshan Daily
1/13/25, 5:49 AM ಪ್ರಕಟಿಸಲಾಗಿದೆ
ಲೋಕದರ್ಶನವರದಿ
ರಾಣಿಬೆನ್ನೂರ:8 ಕೇಂದ್ರ ಸಕರ್ಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹಾಗೂ ಕಾಮರ್ಿಕ ವಿರೋಧಿ ನೀತಿ ಖಂಡಿಸಿ, ಸ್ಥಳೀಯ ಅಂಚೆ ಇಲಾಖೆಯ ನೌಕರರು ಕರ್ತವ್ಯವನ್ನು ಸ್ಥಗಿತಗೊಳಿಸಿ ಬುಧವಾರದಂದು ಅಂಚೆ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ನಿವೃತ್ತ ಪೋಸ್ಟ್ ಮಾಸ್ತರ್ ವಿ.ಆರ್.ಜೋಷಿ ಮಾತನಾಡಿ, ಕೇಂದ್ರ ಸಕರ್ಾರದ ನೌಕರರ ಹಳೆ ಪಿಂಚಣೆ ಪದ್ಧತಿಯನ್ನು ತುತರ್ಾಗಿ ಜಾರಿಗೊಳಿಸಬೇಕು. ಎಲ್ಲಾ ನೌಕರರಿಗೆ ಕನಿಷ್ಟ ವೇತನ ಫಿಟ್ಮೆಂಟ್ ರೂಪದಲ್ಲಿ ನೀಡಬೇಕೆಂದು ಆಗ್ರಹಿಸಿದರು.
ಜಿಡಿಎಸ್ ಮತ್ತು ಕಾಂಟ್ರ್ಯಾಕ್ಟ್ ಸಾಂಧಭರ್ಿಕ ಕಾಮರ್ಿಕರುಗಳನ್ನು ಖಾಯಂಗೊಳಿಸಬೇಕು. ಅಂಚೆ ಇಲಾಖೆ ಉಧ್ಯೋಗಿಗಳಿಗೆ 5 ದಿನಗಳ ವಾರ ಭದ್ರತೆ, 10 ಪಾಯಿಂಟ್ ಕಾನ್ಪಿಡರೇಷನ್ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸಕರ್ಾರವು ಮುಂದಾಗಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಕರ್ಾರವು ಕೇಂದ್ರದ ವ್ಯಾಪ್ತಿಯಲ್ಲಿನ ಅನೇಕ ಇಲಾಖೆಗಳನ್ನು ಖಾಸಗೀಕರಣ ಮಾಡಿದರೆ, ನೌಕರರಿಗೆ ಸೂಕ್ತ ಭದ್ರತೆ ಇಲ್ಲದಂತಾಗುತ್ತದೆ. ಮತ್ತು ಉತ್ತಮವಾದ ಸೇವೆ ನೀಡಲು ನೌಕಕರಿಗೆ ಕಷ್ಟಕರವಾಗುತ್ತದೆ ಎಂದು ಜೋಷಿ ಆರೋಪಿಸಿದರು. ಪ್ರತಿಭಟನೆಯಲ್ಲಿ ವಿರೇಶ್ ಶಿಡಗನಾಳ, ಗೋಪಾಲ್ ಲಮಾಣಿ, ನರಸಿಂಹ ಮೂತರ್ಿ ಶಿರಹಟ್ಟಿ, ರಮೇಶ ಅಬ್ಬಿಗೇರಿ, ಶಾಂತಪ್ಪ ಮಡಿವಾಳರ, ಪುಟ್ಟರಾಜ್ ಗೊಡ್ಡೆಮ್ಮಿ, ಛಾಯಾ ಜಡೇಕರ, ರೇವಣೆಪ್ಪ ಕಮದೋಡ, ದೇವೆಂದ್ರಪ್ಪ ನಾಯಕ್, ವಿನೋದ ಮುತಾಲಿಕ್, ಹೆಚ್.ಡಿ.ಕಟ್ಟಿ, ಕೆ.ಎಸ್.ಮಳಿಮಠ, ಬಿ.ಯು. ಹಿತ್ತಲಮನಿ, ಶ್ರೀಧರ, ಪಿ.ವಿ.ಪೂಜಾರ, ಸಿ,ಎನ್.ಹೆಗಡಾಳ, ನಾಗರಾಜ್ ಗುರುಂ, ಎಸ್.ಎಸ್.ರಾಮಪ್ಪ, ಲೊಕೇಶ್ ನಾಯಕ್ ಸೇರಿದಂತೆ ಅಂಚೆ ಇಲಾಖೆ ಮತ್ತು ಬಿಎಸ್ಎನ್ಎಲ್ ನೌಕರರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.