ಲೋಕದರ್ಶನ ವರದಿ
ಶಿರಹಟ್ಟಿ: ತಾಲೂಕಿನ ಸುಗನಹಳ್ಳಿ ಗ್ರಾಮದ ಜನತಾ ಪ್ಲಾಟಿನಲ್ಲಿ ನಾಂದ್ರೇಪ್ಪ ಚನ್ನಪ್ಪ ವಾಲಿಕಾರ ಇವರ ವಾಸದ ಮನೆಯ ಹಿತ್ತಲಲ್ಲಿ ಅಕ್ರಮವಾಗಿ ಗಾಂಜಾಬೆಳೆಯನ್ನು ಜಿಲ್ಲಾ ಅಬಕಾರಿ ಉಪಆಯುಕ್ತ ಹಬೀದ ಹುಸೇನ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಜೆಂಟಿ ಕಾರ್ಯಾಚರಣೆ ನಡೆಸಿ ಸೋಮವಾರ 1 ಗಂಟೆಗೆ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಗಾಂಜಾದ ತೂಕ 2 ಕೆಜಿ ಇದರ ಮೌಲ್ಯ 20 ಸಾವಿರ ಆಗಿದ್ದು, ಆರೋಪಿ ನಾಗೇಂದ್ರಪ್ಪ ಚನ್ನಪ್ಪ ವಾಲಿಕಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ದಾಳಿಯಲ್ಲಿ ಪ್ರಭಾರಿ ಅಬಕಾರಿ ಉಪ ಅಧೀಕ್ಷಕರಾದ ಮಲ್ಲಿಕಾರ್ಜುನ ರೆಡ್ಡಿ ಇವರ ನೇತೃತ್ವದಲ್ಲಿ ಮತ್ತು ಅಬಕಾರಿ ಅಧೀಕ್ಷಕ ಶರಣಪ್ಪ ಕರಡಿ, ಉಪನಿರೀಕ್ಷಕ ಶಹನಾಜ ಬೇಗಮ್, ಆರ್,ಎಮ್.ಚಿಕ್ಕಣ್ಣವರ, ಅಬಕಾರಿ ರಕ್ಷಕ ಗುರುರಾಜ, ನಜೀರ, ಖುದಾವಂದ, ಸಿದ್ದು ಹಿರೇತನ, ರವಿ, ರೆಹಮಾನ, ಕಳಸದ ಭಾಗವಹಿಸಿದ್ದರು.