ಲೋಕದರ್ಶನವರದಿ
ಶಿಗ್ಗಾವಿ : ನಾನು ರಾಜ್ಯದಲ್ಲಿ ಅಭಿವೃದ್ಧಿಯ ಕೆಲಸವನ್ನು ಮಾಡುವುದಾದರೆ ಅದು ಶಿಗ್ಗಾವಿ- ಸವಣೂರ ಕ್ಷೇತ್ರದ ಮತದಾರರ ಆಶರ್ಿವಾದದಿಂದ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಸವಣೂರ ವೃತ್ತದಲ್ಲಿ ಹಿರೇಕೆರೂರ ಮತ್ತು ರಾಣೆಬೆನ್ನೂರ ಕ್ಷೇತ್ರದ ಶಾಸಕರನ್ನು ಐತಿಹಾಸಿಕ ಜಯಶಾಲಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಸ್ವಾಗತ ಕೋರಿ ಪಟಾಕೆ ಹಾರಿಸಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಮಾತನಾಡಿ ನನಗೆ ಈ ಎರಡು ಕ್ಷೇತ್ರಗಳ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಹಿಸಿ ಇವೆರಡು ಕ್ಷೇತ್ರಗಳಲ್ಲಿ ಜಯಶಾಲಿ ಆಗಬೇಕು ಅಲ್ಲದೇ ಹೆಚ್ಚಿನ ಅಂತರದ ಗೆಲುವುನ್ನು ಕಾಣಬೇಕು ಎಂದು ನನ್ನ ನಾಯಕರಾದ ಯಡಿಯೂರಪ್ಪನವರು ಹೇಳಿದ ಪರಿಣಾಮವಾಗಿ ಹಗಲಿರುಳು ಹದಿನೈದು ದಿನಗಳ ಕಾಲ ಎರಡು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ರಾಣೆಬೆನ್ನೂರ ಮತ್ತು ಹಿರೇಕೆರೂರ ಕ್ಷೇತ್ರದ ಮತದಾರರ ಮನವಲಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಣೆಬೆನ್ನೂರಿನ ಅರುಣಕುಮಾರ ಪೂಜಾರ ಮತ್ತು ಹಿರೇಕೆರೂರನ ಬಿ.ಸಿ.ಪಾಟೀಲ ಅವರವಿಜಯ ಪತಾಕೆ ಹಾರಿಸಿ ನಮ್ಮ ಬಿ.ಜೆ.ಪಿ ಸರಕಾರ ಸುಭದ್ರವಾಗಿರಲು ಕನಸ್ಸನ್ನು ಕಂಡಿದ್ದೆ ಎಂದರು.
ಶಿಗ್ಗಾವಿ ಮತ್ತು ಸವಣೂರ ವಿಧಾನಸಬಾ ಕ್ಷೇತ್ರದ ಜನತೆಗೆ ಮೂರು ತಿಂಗಳು ಕಾಲ ನಿಮಗೆ ನಾನು ಸಮಯವನ್ನು ನೀಡಲು ಆಗಲಿಲ್ಲ ಇನ್ನೂ ಮೇಲೆ ವಾರಕ್ಕೆ ಒಂದು ದಿನ ಕ್ಷೇತ್ರದ ಜನತೆಗೆ ಸಮಯವನ್ನು ಮೀಸಲಾಗಿಡುತ್ತೇನೆ ಅಲ್ಲದೇ 2020 ನೇ ವರ್ಷವನ್ನು ಶಿಗ್ಗಾವಿ ಸವಣೂರ ಕ್ಷೇತ್ರದ ಅಭಿವೃದ್ಧಿ ವರ್ಷವೆಂದು ಘೋಷಣೆ ಮಾಡಲು ಇಷ್ಟ ಪಡುತ್ತೇನೆ ಮತ್ತು ಕನರ್ಾಟಕದಲ್ಲಿ ಮಾದರಿ ತಾಲೂಕಗಳು ಹಾಗೂ ಮಾದರಿ ಕ್ಷೇತ್ರಗಳು ಎಂದು ಕನರ್ಾಟಕದ ಜನತೆ ಹೇಳಬೇಕು ಆತರಹದ ಕನಸ್ಸನ್ನು ಕಂಡಿದ್ದೇನೆ ಅದಕ್ಕೆ ನಿಮೆಲ್ಲರ ಸಹಾಯ ಸಹಕಾರ ಬೇಕು.
ಇನ್ನೂ ಮೂರುವರೇ ವರ್ಷ ಬಿ.ಎಸ್.ಯಡಿಯೂರಪ್ಪನವರ ಸರಕಾರ ರಾಜ್ಯದಲ್ಲಿರುತ್ತದೆ ಯಾವುದೇ ಆತಂಕ ಬೇಡ ಮಾನ್ಯ ಮುಖ್ಯ ಮಂತ್ರಿಗಳು ನಿನ್ನೆಯಿಂದಲೇ ರಾಜ್ಯದಲ್ಲಿ ಏನೇನೂ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲ್ಯಾಣ ಕನರ್ಾಟಕ ಮಾಡಬೇಕು ಎಂಬುದುರ ಬಗ್ಗೆ ಯಡಿಯೂರಪ್ಪನವರ ಕನಸ್ಸು ಅಲ್ಲದೆ ರೂಪ ರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದರು.
ವಿಜಯೋತ್ಸವ ಸಂದರ್ಭದಲ್ಲಿ ರಾಣೆಬೆನ್ನೂರಿನ ನೂತನ ಆಯ್ಕೆಯಾದ ಶಾಸಕ ಅರುಣಕುಮಾರ ಪೂಜಾರ, ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಅಜರ್ುನ ಹಂಚಿನಮನಿ, ಶ್ರೀಕಾಂತ ಬುಳ್ಳಕ್ಕನವರ, ಸುಭಾಷ ಚವ್ಹಾಣ, ದಯಾನಂದ ಅಕ್ಕಿ, ಸಿದ್ದಾರ್ಥಗೌಡ ಪಾಟೀಲ, ರಮೇಶ ವನಹಳ್ಳಿ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಪ್ರತೀಕ ಕೊಳೆಕರ, ಗುರು ಅಣ್ಣಿಗೇರಿ, ಸಂಜನಾ ರಾಯ್ಕರ್, ಭಾರತಿ ಪುರಾಣಿಕಮಠ ಮುಂತಾದ ಭಾ.ಜ.ಪ ಕಾರ್ಯಕರ್ತರು ಉಪಸ್ಥಿತರಿದ್ದರು.