ವಿಜಯಪುರ, 4 : ವೈದ್ಯಕೀಯ ಲೋಕದಲ್ಲಿ ಹಲವಾರು ರೋಗಗಳಿಗೆ ಔಷಧಿಗಳನ್ನು ಸಂಶೋಧನೆ ಮೂಲಕ ಕಂಡು ಹಿಡಿದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಸಂರಕ್ಷಣೆ ಮಾಡಲಾಗುತ್ತದೆ. ಆದರೆ ಇಂದಿಗೂ ಕ್ಯಾನ್ಸರ್ ಪೀಡಿತ ರೋಗಿಯನ್ನು ರಕ್ಷಿಸುವುದು ವೈದ್ಯಲೋಕಕ್ಕೆ ಸವಾಲಾಗಿದೆ ಎಂದು ಡಾ|| ಎಚ್.ವಿ. ಕರಿಗೌಡರ ಹೇಳಿದರು.
ಅವರು ವಿಜಯಪುರ ನಗರದ ಕರಿಗೌಡರ ಲ್ಯಾಬರೋಟರಿ ಕಿಡ್ನಿಕೇರ್ ಆಸ್ಪತ್ರೆ ಹಾಗೂ ವಿಜಯಪುರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ನಿಯಂತ್ರಣಕ್ಕೆ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಪ್ರಯತ್ನ ಮಾಡಲಾಗುತ್ತದೆ. ಈ ರೋಗವು ಗುಟಕಾ, ಸ್ಟಾರ್, ತಂಬಾಕು ಸೇವನೆ, ಮಧ್ಯಪಾನ ಹಾಗೂ ಮಾದಕ ಸೇವನೆಗಳಿಂದ ಬರುತ್ತದೆ. ಮನುಷ್ಯ ಒಳ್ಳೆ ಆಹಾರ ಸೇವಿಸುವುದರ ಮೂಲಕ ಇಂತಹ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಈ ಬಗ್ಗೆ ಜನರಲ್ಲಿ ಜಾಋತಿ ಮೂಡಿಸುವುದು ಅವಶ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಎನ್.ಬಿ. ದೇಸಾಯಿ ಮಾತನಾಡಿ, ಹಿಂದಿನಿಂದಲು ಕ್ಯಾನ್ಸರ್ ರೋಗಕ್ಕೆ ಮಾನವ ಭಯಾನಕದಿಂದ ಪ್ರಾಣ ಕಳೆದುಕೊಂಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ವಿಶ್ವಸಂಸ್ಥೆಯು ಸಂಶೋಧನೆಗಳ ಮೂಲಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಕ್ಯಾನ್ಸರ್ ರೋಗಕ್ಕೆ ಭಯಪಡುವ ಅಗತ್ಯವಿಲ್ಲ. ಪ್ರಾಥಮಿಕ ಹಂತದಲ್ಲೇ ಔಷಧೋಪಚಾರ ಮಾಡಿದಲ್ಲಿ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಮನುಷ್ಯ ಒಳ್ಳೆಯ ಆಹಾರ ಸೇವನೆ ಮಾಡುವುದರ ಮೂಲಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕೆಂದರು.
ಕಿಡ್ನಿ ಕೇರ್ ಆಸ್ಪತ್ರೆಯ ಡಾ|| ಸುರೇಶ ಕಾಗಲಕರೆಡ್ಡಿ ಮಾತನಾಡಿ, ಇಂದಿನ ಯುವಜನರು ತಂಬಾಕು ಸಿಗರೆಟ್ ಸೇವನೆಗಳಿಂದ ಮತ್ತು ಇನ್ನಿತರ ದುಶ್ಚಟಗಳಿಂದ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಮಾದಕ ಸೇವನೆಯಂತಹ ವಸ್ತುಗಳು ಮಾನವನ ಜೀವಕ್ಕೆ ಮಾರಕವಾಗಿವೆ. ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ರೋಗಗಳಿಂದ ದೂರವಿರಬೇಕು. ಕ್ಯಾನ್ಸರ್ ರೋಗದಿಂದ ಗುಣಮುಖರಾಗಲು ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಸಂತೋಷ ನಿಗಡಿ, ಡಾ. ಮಹೇಶ ಕರಿಗೌಡರ,ಡಾ|| ಪಹಿಮ ಹಾಗೂ ಪ್ಯಾರಾಮೆಡಿಕಲ್ ವಿದ್ಯಾಥರ್ಿ ವಿದ್ಯಾಥರ್ಿನಿಯರು ಭಾಗವಹಿಸಿದ್ದರು. ದಿನೇಶ ಭಾವಿ ಸ್ವಾಗತಿಸಿದರು. ವಿಜಯಕುಮಾರ ಗಣಿ ನಿರೂಪಿಸಿದರು. ಮಲ್ಲಿಕಾಜರ್ುನ ಪೂಜಾರಿ ವಂದಿಸಿದರು.