ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಜನಜಾಗೃತಿ

ಲೋಕದರ್ಶನವರದಿ

ಮುಧೋಳ೨೮:  ತಾಲ್ಲೂಕಿನ ಮುದ್ದಾಪುರ ಗ್ರಾಮದ ಜೆ.ಕೆ.ಸಿಮೆಂಟ್ ಕಂಪೆನಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿಮರ್ಾಕ್ಕೆ ಮುಂದಾಗಿದ್ದು ಇದಕ್ಕಾಗಿ ಈ ಭಾಗದಲ್ಲಿ ಜನಜಾಗ್ರತಿ ಮೂಡಿಸುವ ಕಾರ್ಯವನ್ನು 15 ದಿನದಿಂದ ಮಾಡುತ್ತಿದೆ. ಇದು ಅ.2 ರ ವರೆಗೆ ನಡೆಯುತ್ತದೆ. ಪ್ಲಾಸ್ಟಿಕ್ ತ್ಯೇಜಿಸಿ ಪೃಥ್ವಿ ಉಳಿಸಿ ಎನ್ನುವ ಕಲ್ಪನೆಯನ್ನು ಜನಜಾಗೃತಿ ಮಾಡಲಾಗುತ್ತಿದೆ ಎಂದು ಕಾಖರ್ಾನೆಯ ಮುಖ್ಯಸ್ಥ ಆರ್.ಬಿ.ಎಂ. ತ್ರೀಪಾಠಿ ಹಾಗೂ ತಾಂತ್ರಿಕ ವಿಭಾಗದ ಮುಖ್ಯಸ್ಥ ಉಮಾಶಂಕರ ಚೌಧರಿ ತಿಳಿಸಿದ್ದಾರೆ.

      ಪ್ಲಾಸ್ಟಿಕ್ ವಿಷಕಾರಿಯಾಗಿದ್ದು ಅದು ಕೊಳೆಯಲು ಸಾವಿರಾರು ವರ್ಷಗಳು ಹಿಡಿಯುತ್ತದೆ. ಇದೇ ಪ್ರವೃತ್ತಿ ಮುಂದುರೆದರೆ ನಮ್ಮ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ ಎಂಬುದನ್ನು ಟ.ವಿ, ವಿಡಿಯೋ ಮೂಲಕ, ಕರಪತ್ರದ ಮೂಲಕ, ಬೀದಿ ನಾಟಕ, ಭಾಷಣದ ಮೂಲಕ ಜಾಗೃತಿ ಮಾಡಲಾಗುತ್ತಿದೆ. 

       ಈಗಾಗಲೇ ಕಾಖರ್ಾನೆ ವಲಯ ಹಾಗೂ ಪದಮಪತ್ ಕಾಲೋನಿ ಶೇ.100 ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಲೋಕಾಪುರ ಬಸ್ ನಿಲ್ದಾಣವನ್ನು ಪ್ಲಾಸ್ಟಿಕನ್ನು ತೆರವುಗೊಳಿಸಿ ಜಾಗ್ರತಿ ಮೂಡಿಸಲಾಗಿದೆ. 

      ತಾಲೂಕಿನ ಬೊಮ್ಮನಬುದ್ನಿ, ನಿಂಗಾಪುರ, ಹಲಕಿ, ಮೆಟಗುಡ್ಡ, ಪೆಟ್ಲೂರ, ಮುದ್ದಾಪುರ ಗ್ರಾಮಗಳಲ್ಲಿ ಶಾಲೆ, ಕಾಲೇಜುಗಳಲ್ಲಿ, ಸಂತೆ ಹಾಗೂ ಜನಬೀಡು ರಸ್ತೆಗಳಲ್ಲಿ  ಜಾಗ್ರತಿ ಮೂಡಿಸಿದ್ದು ಸೋಮವಾರ ಮುಧೋಳದ ಬಸ್ ನಿಲ್ದಾಣದಲ್ಲಿ ಜಾಗ್ರತಿ ಮೂಡಿಸಲಾಗುವುದು ಎಂದು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶಿವಯ್ಯಸ್ವಾಮಿ ಹೇಳುತ್ತಾರೆ.

       ಜನರಿಗೆ ಪ್ಲಾಸ್ಟಿಕ್ ಕುರಿತು ಮನವರಿಕೆಯಾಗುತ್ತಿದ್ದು ಇದರಿಂದ ಆಗುವ ಹಾನಿಯ ಬಗ್ಗೆ ಜಾಗ್ರತರಾಗಿದ್ದಾರೆ. 

        ಯುವಕರು ಹಾಗೂ ಮಹಿಳೆಯರು ಹೆಚ್ಚಿಗೆ ಸ್ಪಂಧಿಸುತ್ತಿದ್ದಾರೆ ಎಂದು ಹಣಕಾಸು ವಿಭಾಗದ ಮುಖ್ಯಸ್ಥ ಕಪಿಲ ಅಗರವಾಲ ಹೇಳುತ್ತಾರೆ.

         ಕಾಖರ್ಾನೆಯ ಹಿರಿಯ ಅಧಿಕಾರಿಗಳಾದ ಕೆ.ಸಿ.ಖಂಡೇಲವಾಲ, ಡಾ.ಸೌರಭ ಯಾದವ, ರೇಜಿ.ಕೆ, ಶಂಕರ ಬಾಡಗಿ ಮುಂತಾದವರ ನೇತೃತ್ವದಲ್ಲಿ ನಡೆಯುತ್ತಿದೆ.