ಹೂವಿನಮರಡಿ ಗ್ರಾಮ: ಚಿರತೆ ಹಾವಳಿ, ಕುರಿಗಳ ಸಾವು

ಲೋಕದರ್ಶನವರದಿ

ರಾಣೇಬೆನ್ನೂರು09:  ತಾಲೂಕಿನ ಹುಲಿಕಟ್ಟಿ ಗ್ರಾಮವೂ ಸೇರಿದಂತೆ ಬಹುತೇಕ ಗ್ರಾಮಾಂತರ ಪ್ರದೇಶಗಳ ಜಮೀನುಗಳಲ್ಲಿ ಚಿರತೆಗಳು ಸಾಗಿ ಹೋಗುತ್ತಿರುವ ಪ್ರಕರಣಗಳು ವರದಿಯಾಗುತ್ತಲಿವೆ. 

  ಮೊನ್ನೆಯಷ್ಟೇ ಹುಲಿಕಟ್ಟಿ ಬಳಿಯ ಹೂವಿನಮರಡಿ ಗ್ರಾಮದ ಮನೆಯೊಂದರಲ್ಲಿ ಚಿರತೆಗಳು ಕುರಿಗಳ ಮೇಲೆ ದಾಳಿ ನಡೆಸಿ ರಕ್ತ ಕುಡಿದಿವೆ. 

      ಕಳೆದ 6ರಂದು ರವಿವಾರ ರಾತ್ರಿ 12ರಿಂದ 1 ರ ಅವಧಿಯಲ್ಲ ಈ ದಾಳಿ ನಡೆದಿದ್ದು, ಇದರಿಂದ ಹಾಲಪ್ಪ ಮಲ್ಲಪ್ಪ ಅರಳಿಕಟ್ಟಿ ಇವರಿಗೆ ಸಂಬಂಧಿಸಿದ ಟಗರುಗಳಾಗಿವೆ.  ಚಿರತೆ ದಾಳಿಯಿಂದ ಸುಮಾರು 70 ಸಾವಿರ ರೂ.ಗಳ ಹಾನಿ ಸಂಭವಿಸಿದೆ. 

  ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯಕೀಯ ಅಧಿಕಾರಿಗಳು ತಪಾಸಣೆ ನಡೆಸಿ ಚಿರತೆಯಿಂದಾದ ದಾಳಿಯೆಂದು ಖಚಿತಪಡಿಸಿದ್ದಾರೆ.  

       ಪದೇ ಪದೇ ಈ ಭಾಗದಲ್ಲಿ ಚಿರತೆ ಹಾವಳಿ ಸಂಭವಿಸುತ್ತಿದ್ದು, ಇಲಾಖೆ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ, ರೈತರ ಮತ್ತು ಕುರಿಗಾಯಿಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.