ಕಳಪೆ ಕಾಮಗಾರಿ ಸಹಿಸೋದಿಲ್ಲ: ಚರಂತಿಮಠ

ಲೋಕದರ್ಶನವರದಿ

ಬಾಗಲಕೋಟ: ತಾಲೂಕಿನ ಮುಗಳೊಳ್ಳಿ ಗ್ರಾಮದಲ್ಲಿ ಶನಿವಾರ ಶಾಸಕ ಡಾ.ವೀರಣ್ಣ ಚರಂತಿಮಠ ಶಾಲಾ ಕೊಠಡಿ ಹಾಗೂ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

  ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 809 ಲಕ್ಷ.ರೂ.ಗಳ ವೆಚ್ಚದ ಕಿರಸೂರ, ಮುಗಳೊಳ್ಳಿ, ಕಡ್ಲಿಮಟ್ಟಿ ರೇಲ್ವೆ ನಿಲ್ದಾಣ, ಬೆಣ್ಣೂರ ಮುಖ್ಯ ರಸ್ತೆಯ ಕಿ.ಮೀ 4.65ರಿಂದ ಕಿ.ಮೀ 8.23 ಮತ್ತು ಕಿ.ಮೀ 10.03 ರಿಂದ ಕಿ.ಮೀ 17.30 ರವರೆಗಿನ ರಸ್ತೆ ಹಾಗೂ 66.47 ಲಕ್ಷ ರೂ.ಗಳ ವೆಚ್ಚದ ಮುಗಳೊಳ್ಳಿ ಪು.ಕೇದಿಂದ ಸಂಗೊಂದಿ ರಸ್ತೆಯ 2.20ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು.

  ಕಳಪೆ ಕಾಮಗಾರಿ ಮಾಡದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ ಶಾಸಕರು, ಕಾಮಗಾರಿ ಪರಿಶೀಲಿಸಿ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. 

  ಇದೇ ಸಂದರ್ಭದಲ್ಲಿ ಮುಗಳೊಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಒಂದು ಕೊಠಡಿ ನಿಮರ್ಾಣದ 13.75 ಲಕ್ಷ ರೂ.ಗಳ ಕಾಮಗಾರಿಗೂ ಶಾಸಕ ಡಾ.ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು. 

       ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜಶೇಖರ ಮುದೇನೂರ, ಕಾರ್ಯದಶರ್ಿ ಸುರೇಶ ಕೊಣ್ಣೂರ, ಬಿ.ಎಸ್.ಭಜನ್ನವರ, ಬಿ.ಜಿ.ತಳವಾರ, ಜಿಪಂ ಸಹಾಯಕ ಕಾರ್ಯನಿವರ್ಾಹಕ ಇಂಜನೀಯರ್ ವ್ಹಿ.ಎಸ್.ಕೊಟಗಿ, ಕಿರಿಯ ಅಭಿಯಂತರ ಜಿ.ಎಂ.ಪಾಟೀಲ, ಲೋಕೋಪಯೋಗಿ ಇಲಾಖೆಯ ಇಂಜನೀಯರುಗಳು,  ಗುತ್ತಿಗೆದಾರರು ಮತ್ತಿತರರು ಇದ್ದರು.