ಗುಳೇದಗುಡ್ಡ08: ಸಮೀಪದ ಕೋಟೆಕಲ್ ಗ್ರಾಮದ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ರಥೋತ್ಸವದ ಕಳಸದ ಮೆರವಣಿಗೆ ಶುಕ್ರವಾರ ಜರುಗಿತು. ಕೊಟೆಕಲ್- ಕಮತಗಿ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದರು.
ಮಧ್ಯಾಹ್ನ 12 ಗಂಟೆಗೆ ನಗರದ ಹೆಗಡಿ ಅವರ ಮನೆಯಿಂದ ಶ್ರೀ ಹುಚ್ಚೇಶ್ವರ ರಥದ ಕಳಸದ ಮೆರವಣಿಗೆ ಆರಂಭಗೊಂಡಿತು. ಕಳಸದ ಮೆರವಣಿಗೆ ಸಾಗುವ ದಾರಿಗಳಲ್ಲಿ ಭಕ್ತರು ಕಳಸಕ್ಕೆ ಪೂಜೆ ಸಲ್ಲಿಸಿ, ನೈವೈದ್ಯ ಸಮಪರ್ಿಸಿದರು.
ಮೆರವಣಿಗೆಯು ಪವಾರ್ ಕ್ರಾಸ್, ಅರಳಿಕಟ್ಟಿ, ಚೌಬಜಾರ, ಗಚ್ಚನಕಟ್ಟಿ, ಕಂಠಿಪೇಟೆ, ಬದಾಮಿ ನಾಕಾ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಕೊಟೆಕಲ್ ಗ್ರಾಮಕ್ಕೆ ತೆರಳಿತು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಸಂಜಯ ಬರಗುಂಡಿ, ಬಸವರಾಜ ಬರಗುಂಡಿ, ಸಂಗಣ್ಣ ಹುಳಿಪಲ್ಲೇದ, ಮಹಾಂತೇಶ ಚಿಕ್ಕನರಗುಂದ, ಎಸ್.ಬಿ.ಬರಗುಂಡಿ, ಗೋಪಾಲ ಭಟ್ಟಡ, ಇಲಾಳ ಶೆಟ್ಟರ, ಕಡಪಟ್ಟಿ, ಕೋಟಿ ಸೇರಿದಂತೆ ಇತರರು ಇದ್ದರು.