ಲೋಕದರ್ಶನ ವರದಿ
ಮಹಾಲಿಂಗಪುರ : ಶಾಂತಿನಿಕೇತನ ಬಡಾವಣೆಯಲ್ಲಿ ಶ್ರೀ ವಡ್ಡಿನ ಮಹಾಲಕ್ಷ್ಮೀ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿ ಸುತ್ತಮುತ್ತಲಿನ ಸಾಕಷ್ಟು ಜನರಿಗೆ ಉಪಯೋಗವಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ 16 ನೇ ವಾಡರ್ಿನ ಶಾಂತಿನಿಕೇತನ ಬಡಾವಣೆಯಲ್ಲಿ ನೂತನ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿ ಮಾತನಾಡಿದ ಅವರು ಈ ವಾಡರ್ಿನ ಕ್ರಿಯಾಶೀಲ ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ ಮತ್ತು ರಾಜು ಚಮಕೇರಿ, ಪ್ರಕಾಶ ಮರೆಗುದ್ದಿ, ಪ್ರಶಾಂತ ನಡುವಿನಮನಿ ಅವರ ಶ್ರಮದ ಫಲವಾಗಿ ಇಂದು ನ್ಯಾಯಬೆಲೆ ಅಂಗಡಿ ಉದ್ಘಾಟನೆಯಾಗಿದೆ.
ಇದರಿಂದ ಈ ಭಾಗದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ, ಇದು ಯಶಸ್ವಿ ನ್ಯಾಯಬೆಲೆ ಅಂಗಡಿಯಾಗಲಿ ಎಂದು ಶುಭ ಹಾರೈಸಿದರು.
ಗಣೇಶನಗರ, ಶಾಂತಿನಿಕೇತನ ಬಡಾವಣೆ, ಅಯೋಧ್ಯ ನಗರ, ಡಚ್ ಕಾಲನಿ ಜನರ ಮನವಿ ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು ಹಾಗೂ ಕ್ರೀಡಾಪಟುಗಳಿಗಾಗಿ ನಗರದಲ್ಲಿ ಹೈಟೆಕ್ ಕ್ರೀಡಾಂಗಣ ಹಾಗೂ ಹೈಟೆಕ್ ಬಸ್ ನಿಲ್ದಾಣ ಮತ್ತು ಕೆರೆಯ ಪೂರ್ಣ ಪ್ರಮಾಣದ ಕಾಮಗಾರಿಗೆ ಟೆಂಡರ್ ಕರೆದು 30 ರಿಂದ 40 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಸೌಂದರ್ಯ ಹೆಚ್ಚಿಸಿ ಆವರಣ, ವಾಕಿಂಗ್ ಟ್ರ್ಯಾಕ್ ನಿಮರ್ಿಸುವ ಬಗ್ಗೆ ಹಾಗೂ ಹಳೆಯ ಸರಕಾರಿ ಆಸ್ಪತ್ರೆಯನ್ನು ಸುಂದರ ಕಟ್ಟಡವಾಗಿ ನಿಮರ್ಿಸುವ ಭರವಸೆ ನೀಡಿದರು.
ಇದಕ್ಕೂ ಮುನ್ನ ಕೌಜಲಗಿ ನಿಂಗಮ್ಮ ಸಾಂಸ್ಕೃತಿಕ ಭವನದ 2.50 ಕೋಟಿ ರೂ. ಗಳ ಕಾಮಗಾರಿಗೆ ಪೂಜೆ ನೆರೆವೇರಿಸದರು. ಹಾಗೂ ಸ್ಥಳೀಯ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನ್ಯಾಯಬೆಲೆ ಅಂಗಡಿ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು.
ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೊಳ್ಳಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಪುರಸಭಾ ಸದಸ್ಯರಾದ ಶೇಖರ ಅಂಗಡಿ, ರಾಜು ಚಮಕೇರಿ, ಚನ್ನಬಸು ಹುರಕಡ್ಲಿ, ಚನ್ನಪ್ಪ ರಾಮೋಜಿ, ಭೀಮಶಿ ಗೌಂಡಿ, ಮಹಾಲಿಂಗ ಶಿರೋಳ, ಸಂಜು ಅಂಬಿ, ಸಂಜು ರಾಠೋಡ, ಶಿವಲಿಂಗ ಘಂಟಿ, ಜಿ.ಎಸ್. ಗೊಂಬಿ, ವಿಕ್ರಮ ಕುಳ್ಳೂರ, ಶಂಕರ ಮುಂಡಗನೂರ, ಬಸಯ್ಯ ಮಠದ ಇತರರು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಅಶೋಕ ದಿನ್ನಿಮನಿ ವಹಿಸಿದ್ದರು. ಜ್ಞಾನಗುರುಕುಲದ ವಿದ್ಯಾಥರ್ಿಗಳಾದ ಕು. ಸುಜಾತಾ ಹಳ್ಳೂರ, ಸುಹಾಸಿನಿ ಮಾಲದಿನ್ನಿ ಮತ್ತು ಸಂಗಡಿಗರು ಪ್ರಾಥರ್ಿಸಿ, ಭಾಜಪ ಮಹಿಳಾ ಮೋಚರ್ಾ ಅಧ್ಯಕ್ಷೆ ಸುವಣರ್ಾ ಆಸಂಗಿ ಮತ್ತು ಗುರುಪಾದ ಅಂಬಿ ನಿರೂಪಿಸಿದರು.