ಜಮಖಂಡಿ 17: ಶಿಕ್ಷಣ ಕಲಿತ ಬಡ ಮಕ್ಕಳು ಉನ್ನತ ಅಧಿಕಾರಿಗಳಾಗಿ ಸಮಾಜವನ್ನು ತಿದ್ದುವ ವ್ಯಕ್ತಿಗಳು ಆಗಬೇಕೆಂದು ಚಲವಾದಿ ಮಹಾಸಭಾ ಅಧ್ಯಕ್ಷ ಶಶಿಕಾಂತ ತೇರದಾಳ ಹೇಳಿದರು.
ನಗರದ ಎಪಿಎಂಸಿ ಯಾರ್ಡನಲ್ಲಿ ನಡೆದ ಸು ಸಂಸ್ಕೃತಿ ಸಂಸ್ಕಾರ ಸೇವಾ ಮಂಚ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ಅನಾಥ, ಪ್ರತಿಭಾವಂತ, ಬಡ ಮಕ್ಕಳನ್ನು ಗುರುತಿಸಿ ಶಾಲೆಯ ಕಲಿಕೆಯ ಪಠ್ಯ ಪುಸ್ತಕಗಳಾದ 2 ಪೆನ್ನುಗಳ ಬಾಕ್ಸ್, 12 ನೋಟಬುಕ್ಸ್‌ಗಳು, 2 ಪೇಪರ್ ಪ್ಯಾಡ್‌ಗಳ ಸಲರಕಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಎಂಬುವದು ಹುಲಿಯ ಹಾಲು ಇದಂತೆ. ಶಿಕ್ಷಣ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನವನ್ನು ರೂಪಿಸಿಕೊಳ್ಳಬಹುದು. ಹಣ, ಆಸ್ತಿ, ಅಂತಸ್ತುಗಳನ್ನು ಯಾರಾದರು ಕಸಿದ್ದುಕೊಳ್ಳಬಹುದು. ಆದರೆ ವಿದ್ಯೆಯನ್ನು ಯಾರು ಕಸಿದ್ದುಕೊಳ್ಳಲು ಸಾಧ್ಯವಿಲ್ಲ. ಈ ಸಂಸ್ಥೆಯ ಸಹಾಯ, ಸಹಕಾರದಿಂದ ಬಡಮಕ್ಕಳಿಗೆ ಶಿಕ್ಷಣ ಕಲಿಯಲು ಬಹಳ ಅನುಕೂಲತೆ ಆಗುತ್ತದೆ. ಇಂತಹ ಕಾರ್ಯವನ್ನು ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.
ಸಂಸ್ಥ ಅಧ್ಯಕ್ಷ ಪಾರ್ಶ್ವನಾಥ ಉಪಾಧ್ಯೆ ಮಾತನಾಡಿ, ನಮ್ಮ ಸಂಸ್ಥೆಯು ಸುಮಾರು ವರ್ಷಗಳ ಕಾಲದಿಂದ ಬಡ, ಅನಾಥ, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಬೇಕಾಗಿರುವ ಪುಸ್ತಕಗಳು, ಪೆನ್ನು, ನೋಟಬುಕ್ಸ್‌ಗಳು, ಪೇಪರ ಪ್ಯಾಡ್‌ಗಳನ್ನು ನೀಡುವ ಜೊತೆಗೆ ಸಹಾಯ ಧನವನ್ನು ನೀಡಲಾಗುತ್ತದೆ. ಇಂದಿನ ಮಕ್ಕಳು ಮುಂದಿನ ದೇಶವನ್ನು ಆಳುವ ಉತ್ತಮ ಪ್ರಜೆಗಳಾಗಬೇಕೆಂದು ಎಂದರು.
ಅಂಬೇಡ್ಕರ್ ಸಂಘಟನೆ ಅಧ್ಯಕ್ಷ ರವಿ ದೊಡಮನಿ ಮಾತನಾಡಿದರು, ಗಣಿ ಗ್ರಾಮದ ತಾಯಿಯನ್ನು ಕಳೆದಕೊಂಡ 8ನೇ ತರಗತಿ ವಿದ್ಯಾರ್ಥಿ ಸಮರ್ಥ ಸದಾಶಿವ ಮೇತ್ರಿ, ಹಾಗೂ 6ನೇ ತರಗತಿ ವಿದ್ಯಾರ್ಥಿ ಶ್ರಾವಣ ಸದಾಶಿವ ಮೇತ್ರಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಮಂಜು ಬಿ,ಕೆ, ಸದಾಶಿವ ಮೇತ್ರಿ, ಗಜಾನಂದ ಕಾಂಬಳೆ, ಅಶೋಕ ಕಾಂಬಳೆ ಸೇರಿದಂತೆ ಸಂಸ್ಥೆಯವರು ಇದ್ದರು.