ಐನಾಪುರದಲ್ಲಿ ಜಾತ್ರೆಯ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಕೆ
ಕಾಗವಾಡ 02: ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಗಡಿಯಂಚಿನ ಸುಕ್ಷೇತ್ರ ಐನಾಪುರದ ಶ್ರೀ ಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೆ ಕ್ಷಣ ಗನಗಣನೆ ಪ್ರಾರಂಭವಾಗಿದ್ದು, ಜನೇವರಿ 14 ಮಕರ ಸಂಕ್ರಮಣ ದಿನದಿಂದ ಸತತ 5 ದಿನಗಳವರೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಾತ್ರೆ ಜರುಗಲಿದೆ. ಈ 5 ದಿನಗಳವರೆಗೆ ಜಾತ್ರೆಯಲ್ಲಿ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆೆ ಎಂದು ಜಾತ್ರಾ ಕಮೀಟಿಯ ಕಾರ್ಯಾದ್ಯಕ್ಷ ರಾಜುಗೌಡ ಪಾಟೀಲ ಹೇಳಿದರು.
ಅವರು ಬುಧವಾರ ರಂದು ಜಾತ್ರೆ ಹಾಗೂ ಕೃಷಿ ಮೇಳದ ಆಮಂತ್ರಣ ಪತ್ರಿಕೆಗಳನ್ನು ಸಿದ್ದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಐನಾಪುರ ಸಿದ್ದೇಶ್ವರ ದೇವರ ಜಾತ್ರೆಯು ಉತ್ತರ ಕರ್ನಾಟಕ ಹಾಗೂ ಪಶ್ವಿಮ ಮಹಾರಾಷ್ಟ್ರದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಸನ್ 1970 ರಲ್ಲಿ ಹಿರಿಯರೆಲ್ಲರೂ ಕೂಡಿಕೊಂಡು ಪ್ರಾರಂಭಿಸಿ ಜಾತ್ರೆ ಈ ವರ್ಷ ಯಶಸ್ವಿಯಾಗಿ 55 ನೇ ವರ್ಷಕ್ಕೆ ಧಾಪುಗಾಲು ಇಟ್ಟು ಸುವರ್ಣ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡಿದೆ ಎಂದರು.
ಸಿದ್ದೇಶ್ವರ ದೇವರ ಜಾತ್ರೆಯೂ ಪ್ರಮುಖ ಆಕರ್ಷಣೆಯನ್ನು ಹೊಂದಿದ್ದು, ಸಾವಿರಾರು ಭಕ್ತರ ಕ್ವಿಂಟಲ್‌ಗಟ್ಟಲೇ ಭಂಡಾರ ಹಾರಿಸಿ ಭಕ್ತರು ತಮ್ಮ ಹರಕೆಯನ್ನು ತೀರಿಸಿಕೊಳ್ಳುವುದು ಆಕರ್ಷಣಿಯವಾಗಿರುತ್ತದೆ. ಈ ಭಂಡಾರದೊಡೆಯನ ಜಾತ್ರೆಗೆ ರಾಜ್ಯ ಹಾಗೂ ಬೇರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಲ್ಲಕ್ಕಿಗಳ ಭೇಟ್ಟಿಯ ದೃಷ್ಯಗಳನ್ನು ನೋಡಲು ಜಮಾಯಿಸುತ್ತಾರೆ.
ಐದು ದಿನಗಳವರೆಗೆ ಜರುಗಲಿರುವ ಈ ಜಾತ್ರೆಯಲ್ಲಿ ಬೃಹತ್ ಕೃಷಿಮೇಳವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಶ್ವಾನ ಪ್ರದರ್ಶನ, ಸಂಗ್ರಾಮ ಕಲ್ಲು ಎತ್ತುವ ಸ್ಪರ್ದೆ, ಗುಂಡು ಎತ್ತುವ ಸ್ಪರ್ದೆ,ಜೋಡು ಕುದುರೆ ಗಾಡಿ ಸ್ಪರ್ಧೆ ಒಂದು ಕುದುರೆ, ಒಂದು ಎತ್ತಿನ ಗಾಡಿ ಶರ್ಯತ್ತು, ಹಾಗೂ ಬ್ರಹತ್ ದನಗಳ ಪ್ರದರ್ಶನವನ್ನು ಏರಿ್ಡಸಲಾಗಿದೆ ಎಂದರು.
ಜ.14 ರಂದು ಮುಂಜಾನೆ 6 ಗಂಟೆಗೆ ಜಾತ್ರಾ ಮಹೋತ್ಸವ ವಿದ್ಯೂಕ್ತವಾಗಿ ಆರಂಭವಾಗಲಿದೆ. 9 ಗಂಟೆಗೆ ಸಿದ್ದೇಶ್ವರ ದೇವರ ಮಹಾಪೂಜೆ, ನೈವೇಧ್ಯ, ಹಾಗೂ ಸಂಜೆ 5 ಗಂಟೆಗೆ 11 ಗ್ರಾಮಗಳ ಪಲ್ಲಕ್ಕಿಗಳು ಕೂಡುತ್ತವೆ. ಹಾಗೂ ವೈಭವದಿಂದ ಭೇಟ್ಟಿಯಾಗುತ್ತವೆ. ಇಲ್ಲಿ ಸಾವಿರಾರು ಭಕ್ತರು ಭಂಡಾರ ಎರಚುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ಈ ದೇವರುಗಳ ಭೇಟ್ಟಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಇಂಥ ಅಪರೂಪದ ಭೇಟ್ಟಿ ನಡೆಯಲಿದೆ ಎಂದರು. ನಂತರ ಪಟ್ಟಣದ ಪ್ರಮುಖ ಬೀದಿಗಳಿಂದ ಸಂಚರಿಸಲಿದೆ ಎಂದರು.
ಜಾತ್ರಾ ಆಮಂತ್ರಣ ಪತ್ರಿಕೆ ಹಾಗೂ ಜಾಹೀರಾತುಗಳ ಪೂಜಾ ಸಮಾರಂಭದಲ್ಲಿ ಪಟ್ಟಣದ ಹಿರಿಯರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಗಾಣಿಗೇರ ಜಾತ್ರಾ ಕಮೀಟಿಯ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ಹರ್ಷವರ್ದನ ಪಾಟೀಲ, ಕಾರ್ಯದರ್ಶಿ ಅಮಗೊಂಡ ವಡೆಯರ, ಖಜಾಂಚಿ ಸುರೇಶ ಅಡಿಸೇರಿ, ಮುಖಂಡರಾದ ಅರುಣ ಗಾಣಿಗೇರ, ಸುರೇಶ ಗಾಣಿಗೇರ, ಪ್ರಕಾಶ ಗಾಣಿಗೇರ, ಡಾ.ಅರವಿಂದರಾವ್ ಕಾರ್ಚಿ,ದಾದಾ ಜಂತೆನ್ನವರ, ಸುನೀಲ ಅವಟಿ, ಸಂಜು ಕುಸನಾಳೆ, ಮಂಜುನಾಥ ಕುಚನೂರೆ, ಮಲ್ಲು ಕೋಲಾರ, ವಿಕಾಸ ಜಾಧವ, ಪೋಪಟ ಪಾಟೀಲ, ಸತೀಶ ಕುಸನಾಳೆ, ಸೇರಿದಂತೆ ಅನೇಕರು ಇದ್ದರು.