ಬೆಳಗಾವಿ 01: ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಇಚ್ಚೆ ನಮಗಿಲ್ಲ. ಉತ್ತರ ಕನರ್ಾಟಕವು ಎತ್ತರದ ಕನರ್ಾಟಕ ಆಗಬೇಕು. ಇಡಿ ಕನರ್ಾಟಕ ಎತ್ತರಕ್ಕೆ ಬೆಳೆಯಬೇಕು. ಕನರ್ಾಟಕವು ಅಸಮಾನತೆಯ ಕನರ್ಾಟಕ ಆಗದೆ, ಸಮಾನತೆಯ ಕನರ್ಾಟಕ ಆಗಬೇಕು. ದೇಹದ ಎಲ್ಲ ಅಂಗಾಂಗಗಳು ಸದೃಢವಾಗಿದ್ದರೆ ಮಾತ್ರ ದೇಹ ಸದೃಢವಾಗುತ್ತದೆ. ಅದರಂತೆ ಎಲ್ಲಾ ಜಿಲ್ಲೆಗಳು ಸಮಾನಾಂತರವಾಗಿ ಬೆಳೆಯಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.
ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನವು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಉತ್ತರ ಕನರ್ಾಟಕ ಜ್ವಲಂತ ಸಮಸ್ಯೆಗಳು ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅಖಂಡ ಕನರ್ಾಟಕ ಪುಕ್ಕಟೆಯಾಗಿ ಬಂದಿಲ್ಲ. ಅನೇಕ ಚಳುವಳಿಗಾರರ ತ್ಯಾಗ ಬಲಿದಾನಗಳಿಂದ ಸಮಗ್ರ ಕನರ್ಾಟಕ ರಚನೆಯಾಗಿದೆ. ಇಡಿ ರಾಜ್ಯವನ್ನು ಸಮಾನಾಂತರವಾಗಿ ಅಭಿವೃದ್ಧಿ ಪಡಿಸುವ ಮೂಲಕ ರಾಜ್ಯದ ರಾಜಕಾರಣಿಗಳು ಸಮಗ್ರತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.
ಈಗ ನಡೆಯುತ್ತಿರುವ ಚಳುವಳಿಯು ಪ್ರತ್ಯೇಕತೆಗಾಗಿ ಅಲ್ಲ. ನಮಗೆ ಸಿಗಬೇಕಾಗಿರುವ ಪಾಲಿಗಾಗಿ ನಡೆಯುತ್ತಿದೆ. ನಂಜುಂಡಪ್ಪ ವರದಿಯ ಅನುಷ್ಠಾನ ಸೇರಿದಂತೆ ಇಡಿ ಉತ್ತರ ಕನರ್ಾಟಕ ಭಾಗದ ಅಭಿವೃದ್ಧಿಗಾಗಿ ನಡೆಯುತ್ತಿದೆ ಎಂದರು.
ನಿವೃತ್ತ ನ್ಯಾಯಮೂತರ್ಿ ಶಿವರಾಜ ಪಾಟೀಲ ಮಾತನಾಡಿ, ಕನರ್ಾಟಕದ ಏಕೀಕರಣವು ಸಮಗ್ರ ಕನರ್ಾಟಕ ಹಾಗೂ ಸಮೃದ್ಧಿ ಕನರ್ಾಟಕದ ಗುರಿ ಇಟ್ಟುಕೊಂಡು ನಿಮರ್ಾಣ ಆಗಿದೆ. ಆದರೆ, ಈಗ ಉತ್ತರ ಕನರ್ಾಟಕವು ಅಭಿವೃದ್ಧಿಯಿಂದ ವಂಚಿತವಾಗಿದೆ. ಆಗಿರುವ ಅನ್ಯಾಯವನ್ನು ಈಗ ಸರಿಪಡಿಸಬೇಕಾಗಿದೆ. ಪ್ರತ್ಯೇಕತೆಯ ಕೂಗು ತಗ್ಗಿಸಲು ರಾಜ್ಯ ಸರಕಾರ ಉತ್ತರ ಕನರ್ಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಮೂಲಕ ಎಲ್ಲಾ ಅನುಕೂಲತೆಗಳನ್ನು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಸಾನಿಧ್ಯವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಎಸ್.ಎಚ್.ಮಿಟ್ಟಲಕೊಡ, ಚಲನ ಚಿತ್ರ ನಟಿ ಪ್ರಿಯಾಂಕ ಇನಾಂದಾರ, ಜಗದೀಶ ಹೊಸಮನಿ, ರವೀಂದ್ರ ತೋಟಿಗೇರ ಭಾಗವಹಿಸಿದ್ದರು. ಮಾಜಿ ಸಚಿವ ಶಶಿಕಾಂತ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಣ್ಣ ಚಂದರಗಿ ವಂದಿಸಿದರು.