ಎಎಪಿ ಚುನಾವಣಾ ಪ್ರಚಾರಗಳಿಗೆ ಪೊಲೀಸರ ಅಡ್ಡಿ: ಬಿಜೆಪಿ ದೂರಿದ ಕೇಜ್ರಿವಾಲ್‌

Police obstructing AAP election campaigns: BJP complains Kejriwal

ನವದೆಹಲಿ 22: ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಪಕ್ಷ ಕೈಗೊಳ್ಳುವ ಪ್ರಚಾರ ಕಾರ್ಯಕ್ರಮಗಳನ್ನು ಅಡ್ಡಿಪಡಿಸಲು ಬಿಜೆಪಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಆರೋಪಿಸಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಪೊಲೀಸರು ಬಿಜೆಪಿ ಜತೆಗಿದ್ದಾರೆ. ಜನರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿಲ್ಲ. ಎಎಪಿ ನಡೆಸುವ ರ‍್ಯಾಲಿಗಳಿಗೆ ಅಡ್ಡಿಪಡಿಸುವಂತೆ ಗೃಹ ಸಚಿವಾಲಯದಿಂದ ನೇರ ಸೂಚನೆಗಳು ಬರುತ್ತಿವೆ ಎಂದು ದೂರಿದ್ದಾರೆ.

ಬಿಜೆಪಿ ನಡೆಸುವ ಚುನಾವಣಾ ಪ್ರಚಾರಗಳಿಗೆ ಪೊಲೀಸರು ಅನುವು ಮಾಡಿಕೊಡುತ್ತಾರೆ. ಆದರೆ ಎಎಪಿ ಕೈಗೊಳ್ಳುವ ಪ್ರಚಾರ ಕಾರ್ಯಕ್ರಮಗಳಿಗೆ ಪೊಲೀಸರು ಅಡ್ಡಿಪಡಿಸುತ್ತಾರೆ. ದೆಹಲಿಯಲ್ಲಿ ಬಿಜೆಪಿ ಐತಿಹಾಸಿಕ ಸೋಲು ಅನುಭವಿಸುತ್ತದೆ. ಇದೇ ಕಾರಣದಿಂದಾಗಿ ಪೊಲೀಸರ ಬೆಂಬಲದೊಂದಿಗೆ ಗೂಂಡಾಗಿರಿ ಪ್ರದರ್ಶಿಸುತ್ತಿದೆ. ಆದರೆ ಈ ಬಾರಿ ಮತದಾರರು ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.