ಮಕ್ಕಳ ಭವಿಷ್ಯ ಉಜ್ವಲ ಗೊಳ್ಳಲು ಗುಣಮಟ್ಟದ ಶಿಕ್ಷಣಅಗತ್ಯ-ತಂಬ್ರಳ್ಳಿ

Quality education is necessary for the future of children to be bright - Tambralli

ಮಕ್ಕಳ ಭವಿಷ್ಯ ಉಜ್ವಲ ಗೊಳ್ಳಲು ಗುಣಮಟ್ಟದ ಶಿಕ್ಷಣಅಗತ್ಯ-ತಂಬ್ರಳ್ಳಿ 

ಕೊಪ್ಪಳ 22: ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಅವರ ಭವಿಷ್ಯ ಉಜ್ವಲ ಗೊಳ್ಳಲು ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಅದುವೇ ಇಂದಿನ ಅಗತ್ಯವಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು,ಅವರು ಬುಧವಾರ ನಗರದ ನಿರ್ಮಿತಿ ಕೇಂದ್ರದ ಬಡಾವಣೆ ಬಹದ್ದೂರ್ ಬಂಡಿ ರಸ್ತೆಯಲ್ಲಿರುವ ಮಿಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಏರಿ​‍್ಡಸಿದ ಸಂತೆ ಮೇಳ, ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

 ಮುಂದುವರೆದು ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಹಾಗೂ ಸಾಮಾನ್ಯ ಜ್ಞಾನ ಮಾಹಿತಿ ನೀಡಬೇಕು ಸಂತೆ ಮೇಳ ದ ಪರಿಕಲ್ಪನೆ ವಿದ್ಯಾರ್ಥಿಗಳಿಗೆ ಗೊತ್ತಾಗಬೇಕು ಸಾಮಾನ್ಯ ಜ್ಞಾನ ವ್ಯಾಪಾರ ಜ್ಞಾನ ಗೃಹ ಬಳಕೆ ಅಗತ್ಯ ವಸ್ತುಗಳ ಖರೀದಿ ಇತರ ವಿಷಯದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಮೂಡಿ ಬರಲು ಸಂತೆ ಮೇಳ ಅತ್ಯಂತ ಸಹಕಾರಿಯಾಗಿದೆ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ವಿದ್ಯಾರ್ಥಿ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತದೆ ಇಂತಹ ಒಳ್ಳೆ ಕಾರ್ಯಕ್ರಮಗಳನ್ನು ಇಲ್ಲಿನ ಮಿಲ್ಲತ್ ಶಾಲೆಯವರು ಏರಿ​‍್ಡಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು. 

ಸಂತೆ ಮೇಳದ ಉದ್ಘಾಟನೆಯನ್ನು ಹಿರಿಯ ವೈದ್ಯರಾದ ಡಾ, ರಾಧಾ ಕುಲಕರಣಿ ನೆರವೇರಿಸಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಲು ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ ಎಂದರು, ಸಮಾಜದ ಯುವ ನಾಯಕ ಲ್ಯಾಂಡ್ ಡೆವಲೋಪರ್ ಸೈಯದ್ ನಾಸೀರ್ ಹುಸೇನ್ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಿಲ್ಲತ್ ಶಾಲೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.  

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಮಾತನಾಡಿ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು, ಕೊಪ್ಪಳ ಇನ್ನರ್ ವ್ಹೀಲ್ ಕ್ಲಬನ ಎಡಿಟರ್ ನಾಗವೇಣಿ ಗರುರ್ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮುಖ್ಯ ಸಲಹೆ ಗಾರ ಎಂ ಸಾಧಿಕ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆ ಮತ್ತು ಶಾಲೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು, ವೇದಿಕೆ ಮೇಲೆ ಪದಾಧಿಕಾರಿಗಳಾದ ಅಬ್ದುಲ್ ಅಜೀಜ್ ಮಾನ್ವಿ ಕರ್, ಎಂ ಡಿ ಜಹೀರ್ ಅಲಿ, ಸೈಯದ್ ಇಮಾಮ್ ಹುಸೇನ್ ಸಿಂದೋಗಿ, ಮತ್ತು ದಾವೂದ್ ಹುನಗುಂದ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರೆವಡಿ ಸೇರಿದಂತೆ ಪಾಲಕರ ಪ್ರತಿನಿಧಿ ಪತೇಹಸಾಬ್ ಚುಟ್ಟ ಅಲ್ಲದೆ ಸಹಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.