ಪ್ರೇಬ್ರುವರಿ 8ಮತ್ತು9ರಂದು ರಾಜನಹಳ್ಳಿಯಲ್ಲಿ ಶ್ರೀವಾಲ್ಮೀಕಿ ಜಾತ್ರೆ
ಯರಗಟ್ಟಿ 22: ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೋಳಿಸಿ ಗಳಾದ ಗಣಪತಿ ಮಹಾರಾಜರು ಮಾತನಾಡಿ ಗುರುವಿನ ಸೇವೆ ಮಾಡುವುದರೊಂದಿಗೆ ನಮ್ಮ ಜೀವನವನ್ನು ಸುಂದರ ವಾಗಿಟ್ಟುಕೊಳ್ಳಬಹುದು. ಮಠ ಮಂದಿರಗಳಲ್ಲಿ ಪೂಜ್ಯರು ಇರುತ್ತಾರೆ ಅವರು ಹಾಕಿಕೊಟ್ಟಂತಾ ಮಾರ್ಗದಲ್ಲಿ ನಾವು ನಡೆದುಕೊಂಡರೆ ಎಲ್ಲ ಕಾರ್ಯದಲ್ಲಿ ಯಶಸ್ಸು ಕಂಡುಕೊಳ್ಳಬಹುದು ಗುರಿವಿನ ಗುಲಾಮರಾಗಿ ಎಷ್ಟೂ ನಾವು ನಡೆದುಕೊಳ್ಳುತ್ತೆವೆ ಅದಂತೆ ಜೀವನದಲ್ಲಿ ಬದುಕಲು ಒಂದು ಹಾದಿಯನ್ನು ಗುರು ಮಾಡಿಕೊಡುತ್ತಾನೆ ಎಂದು ತಿಳಿಸಿದರು.
ಅವರು ಯರಗಟ್ಟಿ ಪಟ್ಟಣದ ರಾಜರಾಜೇಶ್ವರಿ ಆಶ್ರಮದ ಸಭಾ ಭವನದಲ್ಲಿ ದಿ.21ರಂದು ಹರಿಹರ ತಾಲೂಕಿನ ರಾಜನಹಳ್ಳಿ ಯಲ್ಲಿ ಬರುವ ಪೇಬ್ರುವರಿ ದಿ.8 ಮತ್ತು 9 ರಂದು ನಡೆಯಿವ ಮಹರ್ಷಿ ವಾಲ್ಮೀಕಿ ಪಿಠದ 7ನೇ ವರ್ಷದ ಜಾತ್ರೆಯ ಪೂರ್ವ ಭಾಂವಿ ಸಭೆ ಉದ್ದೇಶಸಿ ಮಾತನಾಡಿದರು.
ರಾಜನಹಳ್ಳಿ ಪೀಠದ ಪ್ರಸಾನಂದ ಪುರಿ ಸ್ವಾಮಿಗಳು ಸನ್ಮಾನ ಸ್ವಿಕರಿಸಿ ಮಾತನಾಡಿ ವಾಲ್ಮೀಕಿ ಪೀಠದ ಜಾತ್ರೆ ಪ್ರತಿವರ್ಷ ವಿಜ್ರಂಭನೆಯಿಂದ ನಡೆಯಿತ್ತದೆ ಅಂದರೆ ಅದಕ್ಕೆಲ್ಲಾ ನಿಮ್ಮೆಲ್ಲರ ಸಹಕಾರ ಮತ್ತು ವಾಲ್ಮೀಕಿ ಜಾತ್ರೆಯಲ್ಲ ಇದೂಂದು ಜನಜಾಗೃತಿ ಜಾತ್ರೆಗೆ ಎಲ್ಲರು ಬಂದು ಬಾಗವಹಿಸಿ ನಮ್ಮ ಸಮುದಾಯದಲ್ಲಿ ಸಾಕಷ್ಟು ಬೇಡಿಕೆಗಳು ಇವೆ ಅವುಗಳನ್ನು ಸರಕಾರ ಮಾಡಿಕೊಡಬೇಕು ಅಲ್ಲಿಯವರೆಗೆ ನಮ್ಮ ಹೋರಾಟಗಳು ಕೋಡಾ ನೀರಂತರ ಇವೆ ಎಂದು ಸಭೆಯಲ್ಲಿ ತಿಳಿಸಿದರು.
ಯರಗಟ್ಟಿಯ ಎಸ್ ಎಚ್ ನಾಯ್ಕರ, ಜಾತ್ರಾ ಕಮೀಟಿ ಅಧ್ಯಕ್ಷ ಸಿದ್ದಪ್ಪ ಮಾಳಗಿ, ಶಂಕರ ಕುರಬಗಟ್ಟಿ, ಸವದತ್ತಿ ರಾಘವೇಂದ್ರ ಪೂಜೆರ, ಹೊನ್ನಪ್ಪ ಖಂಡ್ರಿ, ರಾಜೇಂದ್ರ ಶಟ್ಟಿ, ಕಾಳಪ್ಪ ಬಡಗೇರ, ಮಾರುತಿ ಗೋರಗುದ್ದಿ, ಎಮ್ ಬಿ ಪಾಟೀಲ, ಸಿದ್ದಾರೋಢ ಮಾದನ್ನವರ, ಚಿದಾನಂದ ಮಾಳೈನವರ ಮುಂತಾದವರು ಇದ್ದರು.
ಲೋಕದರ್ಶನ ವರದಿ