ಕಾಯಕ ತತ್ವದ ಅಡಿಯಲ್ಲಿ ಸಮಾಜ ಹೊಂದಾಗಲಿ-ಒಪ್ಪತ್ತೇಶ್ವರ

Let the society be under Kayaka Tattva-Oppateshwara

ಕಾಯಕ ತತ್ವದ ಅಡಿಯಲ್ಲಿ ಸಮಾಜ ಹೊಂದಾಗಲಿ-ಒಪ್ಪತ್ತೇಶ್ವರ   

ಕುಕನೂರ 20 : ಬಸವಾದಿ ಶರಣರ ಕಾಯಕವೇ ಕೈಲಾಸ ಎಂಬ ಸಂದೇಶವನ್ನ ಸಮಾಜ ಆಚರಣೆ ತರಬೇಕು ಕಾಯಕ ತತ್ವ ಅಳವಡಿಸಿಕೊಂಡರೆ ಬಡತನ ನಿರ್ಮೂಲನೆ ಸಾಧ್ಯ ಎಂದು ಗುಳೇದಗುಡ್ಡದ ಪೂಜ್ಯ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು. 

      ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಮಠದ ಪೂಜ್ಯರ 2ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಶರಣ ಸಂಸ್ಕೃತಿ ಉತ್ಸವದ ಕಾರ್ಯಕ್ರಮದ ಪ್ರವಚನ ಮಾಡುತ್ತಾ ಬಸವಣ್ಣನವರು ಎಲ್ಲಾ ವರ್ಗದ ಜನರ ದ್ವನಿಯಾಗಿ ಸಮಾಜಕ್ಕೆ ಕಾಯಕ ತತ್ವ ನೀಡಿದರು, ಜಾತಿ ಮತಕ್ಕಿಂತ ಮಾನವೀಯತೆ ದೊಡ್ಡದು, ಬಿದ್ದವರನ್ನ ಮೇಲಕ್ಕೆ ತರುವುದೆ ನಿಜವಾದ ಧರ್ಮ ಎಂದು ಸಾರಿದರು ಅವರ ವಚನಗಳ ಚಿಂತನೆ ಸಮಾಜ ಮಾಡಬೇಕು ಅಂದಾಗ ಸಮಾನತೆ ಬರಲು ಸಾಧ್ಯ, ಶರಣರನ್ನ ಜಾತಿಯಿಂದ ವಿಂಗಡನೆ ಮಾಡದೆ ಎಲ್ಲಾ ಶರಣರು ನಮ್ಮವರೇ ಎಂಬ ಭಾವ ನಮ್ಮಲ್ಲಿ ಮೂಡಬೇಕು ಎಂದರು. 

    ನಂತರ ಮಾತನಾಡಿದ ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯದರ್ಶಿ ರಶೀದಸಾಬ್ ಹಣಜಿಗೇರಿ ಸಮಾಜದಲ್ಲಿ ಎಲ್ಲಾರು ಹೊಂದಾಗಿ ಬದುಕಬೇಕು ಇಲ್ಲಿ ಮೇಲು ಕೀಲು ಎಂಬ ಭಾವನೆ ಇಲ್ಲ, ಸಂಸ್ಕಾರವಂತರಾಗಿ ಬದುಕ ನಡೆಸಬೇಕು, ಹಣ ಆಸ್ತಿ ಶಾಶ್ವತವಲ್ಲ ನಾವು ಮಾಡುವ ಧರ್ಮಪರ ಕಾರ್ಯಗಳೇ ಶಾಶ್ವತ, 12 ನೇ ಶತಮಾನದಲ್ಲಿ ಇದ್ದ ಶರಣರು ಇದ್ದಿಗೂ ಪ್ರಸ್ತುತ ಎಂದರೆ ಅವರಲ್ಲಿ ಇದ್ದ ಮಾನವೀಯತೆ, ಕಾಯಕವೇ ತತ್ವವೇ ಕಾರಣ  ಎಂದರು. 

    ನಂತರ ವೀರಯ್ಯ ತೋಂಟದಾರ್ಯಮಠ ಮಾತನಾಡಿ ಶ್ರೀಮಠದ ಪೂಜ್ಯರ ಕಾರ್ಯ ಶ್ಲಾಘನೀಯ ಅಲ್ಪ ಸಮಯದಲ್ಲಿ ಈ ಭಾಗದಲ್ಲಿ ಕ್ರೀಯಾಶೀಲರಾಗಿ ಸೇವೆ ಸಲ್ಲಿಸಿದ್ದಾರೆ, ಭಕ್ತರಿಂದ ಭಕ್ತರಿಗಾಗಿ ಭಕ್ತರಿಗೋಸ್ಕರವೇ ಈ ಕಾರ್ಯಕ್ರಮ ಭಕ್ತರೇ ಶ್ರೀ ಮಠದ ಆಸ್ತಿ, ಭಕ್ತ ಎಂಬ ಪದವಿಗಿಂತ ದೊಡ್ಡ ಪದವಿ ಇಲ್ಲ ನಾವೇಲ್ಲ ಅನ್ನದಾನೀಶ್ವರ ಸೇವೆ ಮಾಡಿ ಪುಣ್ಯ ಪಡೆದು ಕೊಳ್ಳಬೇಕು ಎಂದರು. 

      ಈರಣ್ಣ ಶಿವಶಕ್ತಿ, ಬಸವರಾಜ ಈಬೇರಿ, ಈಶಪ್ಪ ಮಡಿವಾರಳ ಅವರನ್ನ ಮಾಡಲಾಗಿದೆ.  

 ಸಂಧರ್ಭದಲ್ಲಿ ಪೂಜ್ಯ ಮಹಾದೇವ ಸ್ವಾಮೀಜೀ, ಗದಿಗೆಪ್ಪ ಪವಾಡಶೆಟ್ಟಿ, ವೀರಣ್ಣ ಅಣ್ಣೀಗೇರಿ, ಸಂಗಮೆಶ ಕಲ್ಮಠ, ರಾಮನಗೌಡ ಹುಚನೂರ, ಕಾಳಿ ಲಕ್ಷ್ಮಣ, ಪ್ರಭು ಶಿವಸಿಂಪರ, ವೀರಯ್ಯ ಗೊರ್ಲೆಕೊಪ್ಪ, ಮಲ್ಲಿಕಾರ್ಜುನಾ ತಳಕಲ್, ವೀರಭದ್ರ​‍್ಪ ಬೆದವಟ್ಟಿ, ಆನಂದ ಮಡಿವಾಳರ ಸೇರಿದಂತೆ ಹಲವಾರು ಜನ ಇದ್ದರು. 

ಪೋಟೋ ಪೈಲ್ : ಕುಕನೂರ ಅನ್ನದಾನೀಶ್ವರ ಶಾಖಾಮಠದಲ್ಲಿ ದ್ವೀತಿಯ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿದ ಗಣ್ಯರು ಮತ್ತು ಪೂಜ್ಯರು.