ಪೊಲೀಸರಿಗೆ ನೈತಿಕ ಬೆಂಬಲ ಅಗತ್ಯ: ಶಾಸಕ ಯಾಸಿರ ಅಹ್ಮದಖಾನ ಪಠಾಣ

ಪೊಲೀಸರಿಗೆ ನೈತಿಕ ಬೆಂಬಲ ಅಗತ್ಯ: ಶಾಸಕ ಯಾಸಿರ ಅಹ್ಮದಖಾನ ಪಠಾಣ  Police need moral support: MLA Yasir Ahmad Khan's chant

ಶಿಗ್ಗಾವಿ 10:  ಪೊಲೀಸ್ ಇಲಾಖೆ ಸಾರ್ವಜನಿಕ ಸೇವೆಗೆ ಮಾಡಲು ವಾಹನಗಳು ಪೊಲೀಸರಿಗೆ ನರನಾಡಿಗಳಿದ್ದಂತೆ, ಎಂದು ಹಾವೇರಿ ಪೊಲೀಸ್ ವರೀಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗುಜರಾತ ಅಂಬುಜಾ ಎಕ್ಸ್‌ಪೊರ್ಟ್ಸ ಲಿಮಿಟೆಡ್ ರವರ ಪ್ರಾಯೋಜಕತ್ವದಲ್ಲಿ ಎರಡು ಸುಸಜ್ಜಿತ ಮಹಿಂದ್ರಾ ಬೋಲೋರೊ ವಾಹನಗಳನ್ನು ತಾಲೂಕಿನ ತಡಸ್ ಮತ್ತು ಹುಲಗೂರ ಠಾಣೆಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ  ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ವಾಹನಗಳು ಅವಶ್ಯ, ಇದನ್ನರಿತು ಎರಡು ವಾಹನಗಳನ್ನು ಒದಗಿಸಿದ ಅಂಬುಜಾ ಕಂಪನಿಗೆ ಧನ್ಯವಾದಗಳನ್ನು ಅರ​‍್ಿಸುತ್ತೆವೆ, ಮತ್ತು ಈ ಹಿಂದೆ ಅವರು ಕಾಗದ ಮುಕ್ತ ಸೇವೆ ನೀಡಲು ಸಹಕರಿಸಿ ಹತ್ತು ಕಂಪ್ಯೂಟಗಳನ್ನು ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಶಿಗ್ಗಾವಿ ಠಾಣೆಗೂ ನೂತನ ವಾಹನ ನೀಡಲಾಗುವದು ಎಂದರು. 

ಶಾಸಕ ಯಾಸಿರ ಅಹ್ಮದಖಾನ ಪಠಾಣ ನೂತನ ವಾಹನಗಳನ್ನು ಹಸ್ತಾಂತರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಆಪಾಧನೆಗಳನ್ನು ಎದಿರಿಸಲು ಗಟ್ಟಿ ಮನಸ್ಸು ಬೇಕು ಅದು ನಮ್ಮ ಪೊಲೀಸರಲ್ಲಿ ಇದೆ, ಅವರಿಗೆ ನೈತಿಕ ಬೆಂಬಲ ನೀಡಬೇಕು, ನೆಮ್ಮದಿಯಿಂದ ನಾವು ನಿದ್ರಿಸಲು ಪೊಲೀಸರು ಕಾರಣ, ಅವರು ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೆ, ಕ್ರೈಂಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಬೆಂಬಲ ನೀಡಬೇಕು ಎಲ್ಲರೂ ಸಹಕಾರ ನೀಡಬೇಕು ಕ್ಷೇತ್ರದಲ್ಲಿನ ಎಲ್ಲ ಕೈಗಾರಿಕಾ ಕಂಪನಿಗಳಿಂದ ಶಿಕ್ಷಣಕ್ಕೆ ಅನುದಾನ ನೀಡಬೇಕು, ಅಂಬುಜಾ ಕಂಪನಿಯವರು ವಾಹನಗಳನ್ನು ನೀಡಿದ್ದಾರೆ ಅವರಿಗೆ ಧನ್ಯವಾಗಳನ್ನು ಸಲ್ಲಿಸುತ್ತೆನೆ, ಅವರು ಸಿಎಸ್‌ಆರ್ ಫಂಡ್‌ನ್ನು ನಮ್ಮ ಕ್ಷೇತ್ರಕ್ಕೆ ಖರ್ಚು ಮಾಡಿ ಶಿಕ್ಷಣಕ್ಕೆ ಹೆಚ್ವಿನ ಆದ್ಯತೆ ನೀಡಬೇಕು, ಸ್ಥಳೀಯರಿಗೆ  ಉದ್ಯೊಗ ನೀಡಬೇಕು ಎಂದ ಅವರು ಈ ವಾಹನಗಳು ನಮ್ಮ ಕ್ಷೇತ್ರದಲ್ಲಿಯೇ ತಿರಬೇಕು ಎಂದು ಎಸ್‌ಪಿರವರಲ್ಲಿ ಮನವಿ ಮಾಡಿದರು.  

ಅಂಬುಜಾ ಕಂಪನಿಯ ಉಪಾಧ್ಯಕ್ಷ ರಾಜೇಂದ್ರ ಹೊಸಮಠ ಮಾತನಾಡಿ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಕರ್ನಾಟಕ ಪೊಲೀಸರು ಶ್ರೇಷ್ಟ, ಅಂಬುಜಾ ಕಂಪನಿಯಲ್ಲಿ ಸ್ಥಳಿಯರಿಗೆ ಆದ್ಯತೆ ನೀಡಿ ಉದ್ಯೋಗ ವದಗಿಸುತ್ತೇವೆ ಎಂದರು ಡಿವೈಎಸ್ ಪಿ ಗುರುಶಾಂತಪ್ಪ ಕೆ ವಿ, ಪಿಐ ವಿ ಎಸ್ ಹಿರೇಮಠ, ಪಿಎಸ್‌ಐ ಪಿ ಎಫ್ ನಿರೊಳ್ಳಿ, ಎಮ್ ಎಸ್ ದೊಡ್ಡಮನಿ ಸೇರಿದಂತೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್ ಎಫ್ ಮಣಕಟ್ಟಿ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಮಹಿಳಾ ಅಧ್ಯಕ್ಷೆ ಮಲ್ಲಮ್ಮ ಸೋಮನಕಟ್ಟಿ, ಮುಖಂಡರಾದ  ಗೌಸಖಾನ ಮುನಶಿ, ಮಾಂತೇಶ ಸಾಲಿ, ಸುಧೀರ ಲಮಾಣಿ, ಅಣ್ಣಪ್ಪ ಲಮಾಣಿ, ಗುರುನಗೌಡ ಪಾಟೀಲ್, ವಸಂತಾ ಬಾಗೂರ, ಚಂದ್ರು ಕೊಡ್ಲಿವಾಡ, ಫಯಾಜ್ ಸವಣೂರ, ಬಾಬರ ಬಾವೊಜಿ, ಶಂಭು ಆಜೂರ ಸೇರಿದಂತೆ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು, ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.