ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಿ : ಡಿವೈಎಸ್ಪಿ ಎಸ್. ರೋಷನ್ ಜಮೀರ್
Police implement innovative door-to-door program: Awareness in Nandagava village
ಮನೆ ಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮ ಜಾರಿ: ನಂದಗಾವ ಗ್ರಾಮದಲ್ಲಿ ಜಾಗೃತಿ
ಮಹಾಲಿಂಗಪುರ 16: ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ಹೆಚ್ಚಿನ ರೀತಿಯಲ್ಲಿ ಅನೈತಿಕ ಚಟುವಟಿಕೆಗಳು ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಅದರಲ್ಲೂ ಕಳ್ಳತನ, ಬಾಲ್ಯ ವಿವಾಹ, ಸೈಬರ್ ಕ್ರೈಂ, ರಸ್ತೆ ಅಪಘಾತ ಗಾಂಜಾ ಮತ್ತು ಡ್ರಗ್ಸ್ ಮಾರಾಟ ಇಂತಹ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಕೈಗೊಂಡು ಜಾಗೃತಿಯ ಕಾರ್ಯ ನಡೆಯುತ್ತಿದೆ. ಇಂತಹ ಚಟುವಟಿಕೆಗಳು ಮತ್ತು ಯಾವುದೇ ಸಮಸ್ಯೆ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ಎಂದು ಜಮಖಂಡಿ ಡಿವೈಎಸ್ಪಿ ಎಸ್ ರೋಷನ್ ಜಮೀರ್ ಹೇಳಿದರು.
ಸಮೀಪದ ನಂದಗಾವ ಗ್ರಾಮದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಬಾಂಧವ್ಯ ಬೆಸೆದು ಕಾನೂನು ರಕ್ಷಣೆ ಸರಳೀಕರಣಗೊಳಿಸಲು ಪೊಲೀಸರು ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಎಂಬ ವಿನೂತನ ಕಾರ್ಯಕ್ರಮ ಹಾಕಿಕೊಂಡು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಠಾಣಾಧಿಕಾರಿಗಳಾದ ಕಿರಣ ಸತ್ತಿಗೇರಿ, ಮಧು ಎಲ್, ವೈದ್ಯ ಅಜೀತ ಕನಕರಡ್ಡಿ, ವೀರ್ಪ ತೇಲಿ, ರಾಜು ಬಾರಕೋಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಂತರ ಗ್ರಾಮದ ಜನತೆಗೆ ಭೇಟಿಯಾಗಿ ಸಮಸ್ಯೆಗಳನ್ನು ಕೇಳಿದರು. ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಇಲಾಖೆಯ ಕರಪತ್ರ ಹಂಚಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಎಚ್ಚರಿಕೆ ವಹಿಸಿದರು.
ಗ್ರಾಪಂ ಅಧ್ಯಕ್ಷ ರಂಗಪ್ಪ ಹೊಸೂರ, ಮಾಜಿ ಅಧ್ಯಕ್ಷೆ ಯಮನವ್ವ ಬಾರಕೋಲ, ಗೋಪಾಲ ಪೂಜೇರಿ, ಬಿ ಜಿ ಹೊಸೂರ, ಎಂ ಕೆ ಮಣ್ಣನ್ನವರ, ಪಿಡಿಒ ಪ್ರಹ್ಲಾದ ರಾವಳ, ನಾಗೇಶ್ ಗಸ್ತಿ, ಪುಟ್ಟಪ್ಪ ಪೂಜೇರಿ,ಯಲ್ಲಪ್ಪ ಉಪ್ಪಾರ, ಮಾಬುಸಿ ಕೌಜಲಗಿ, ಕೆ ಕೆ ಕುಲಕರ್ಣಿ, ಕೆ ಕೆ ಬಿ ಪಾಟೀಲ್, ಮಾರುತಿ ಇಟ್ನಾಳ್, ವೆಂಕಣ್ಣ ಗೊಬ್ಬರದ, ಮುಕಬುಲಸಾಬ್ ಮುಲ್ಲಾ, ರಾಮಚಂದ್ರ ಜಾದವ್ ಸೇರಿದಂತೆ ನಾಗರಿಕರು, ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಾದ ಎಸ್ ಬಿ ಜೈನರ,ಯಮನಪ್ಪ ಗೋಸರವಾಡ,ಮುತ್ತಣ್ಣ ಕೊಲ್ಲೂರು, ಎಂ ಎಂ ಮಠ, ಸುರೇಖಾ ನಾವಿ, ಅಬೂಬಕರ್ ಕೊಲ್ಲೂರು, ಎಂ ಎಂ ಬೆಳಕೊಡ, ಬಸವರಾಜ ದೇಸಾಯಿ, ವಾಯ್ ವಾಯ್ ಗಚನ್ನವರ, ಶ್ರೀಶೈಲ ಓರಸಂಗ, ಸಿದ್ದು ತಳವಾರ, ವಿಠ್ಠಲ ಅಜ್ಜನಗೌಡರ, ಶರಣು ನಾಗನಗೌಡ, ಇಮ್ರಾನ್ ಫನಿಬಂದ, ಆಶಾ ಪಾಟೀಲ, ಜಯಶ್ರೀ ಬಿರಾದರ, ರೂಪಾ ರಾಚನ್ನವರ ಇದ್ದರು. ವಿಶ್ವನಾಥ ಕೋಲಾರ ನಿರೂಪಿಸಿ, ಮಂಜುನಾಥ ಶೆಟ್ಟೆಪ್ಪನವರ ಸನ್ಮಾನಿಸಿ, ಅಮಿತ್ ಜಾಧವ ವಂದಿಸಿದರು.
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮವು ನಂದಗಾವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾನೂನು ಬಾಹಿರ ನಡೆಯುವ ಯಾವುದೇ ಅನೈತಿಕ ಚಟುವಟಿಕೆಗಳು, ಸೈಬರ್ ಕ್ರೈಂ, ಬಾಲ್ಯ ವಿವಾಹ, ಕಳ್ಳತನ ಯಾವುದೇ ಸಮಸ್ಯೆಗಳು ಇದ್ದರು ಗಮನಕ್ಕೆ ತರಲು ಗ್ರಾಮಸ್ಥರಿಗೆ ಹೇಳಿದ್ದೇವೆ.
-ಕಿರಣ ಸತ್ತಿಗೇರಿ, ಠಾಣಾಧಿಕಾರಿ ಮಹಾಲಿಂಗಪುರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 