ವಿಜಯಪುರ 18: ನಗರದ ವಿವಿಧೆಡೆ ನಡೆದ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಓರ್ವ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಕೀತರ್ಿನಗರ ನಿವಾಸಿ ಅಜೀತ ಭೀಮಪ್ಪ ಚಲವಾದಿ (20) ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ ಒಟ್ಟು 280 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಬಜಾಜ್ ಪಲ್ಸರ್ ಬೈಕ್ ಸೇರಿದಂತೆ ಒಟ್ಟು 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಮಂಗಳವಾರ ರಾತ್ರಿ ನಗರದ ಸರಾಫ್ ಬಜಾರ್ನಲ್ಲಿ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ, ಅವರು, ವಿಜಯಪುರ ನಗರದಲ್ಲಿ ಇತ್ತೀಚಿಗೆ ನಡೆದಿದ್ದ ವಿವಿಧ ಸರಗಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ಪೊಲೀಸರು ಬಂಧೀಸಿರುವ ಆರೋಪಿಯು ಒಂಬತ್ತು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸೊಲ್ಲಾಪೂರ ರಾಮವಾಡಿ ದೋಂಡಿಬಾ ವಸ್ತಿಯ ನಿವಾಸಿಯಾದ ವಿಶಾಲ ಉಫರ್್ ಸೋನ್ಯಾ ಐಹೊಳೆ ಎಂಬ ಆರೋಪಿಯ ಜೊತೆಗೆ ಸೇರಿ ತಾನು ಈ ಕಳ್ಳತನ ಮಾಡಿದ್ದೇನೆ ಎಂದು ಬಂಧಿತ ಆರೋಪಿ ತಿಳಿಸಿದ್ದಾನೆ ಎಂದು ಅವರು ಹೇಳಿದರು.
ಜಲನಗರ ಪೊಲೀಸ್ ಠಾಣೆಯಲ್ಲಿ ಎರಡು, ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಎರಡು, ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದರು.
ಡಿಎಸ್ಪಿ ಡಿ.ಅಶೋಕ, ಸಿಪಿಐ ಸುನೀಲ ಕಾಂಬಳೆ, ಚಂದ್ರಕಾಂತ ಎಲ್.ಟಿ., ಸಿಬ್ಬಂದಿಗಳಾದ ಬಿ.ಎಂ. ಪವಾರ, ಎಸ್.ಎಸ್. ಮಾಳೇಗಾಂವ, ಟಿ.ಎಂ. ಶೇಲಾರ, ಶಿವು ಅಳ್ಳಿಗಿಡದ, ವೈ.ಪಿ. ಕಬಾಡೆ, ಸಿದ್ದು ದಾನಪ್ಪಗೋಳ, ಪುಂಡಲೀಕ ಬಿರಾದಾರ, ಎಸ್.ಜಿ. ಗಾಯಣ್ಣವರ, ಎಸ್.ಎಸ್. ಕಾಗವಾಡ, ವಿಜಯ ಅವಟಿ ಮೊದಲಾದವರ ತಂಡ ಆರೋಪಿಯನ್ನು ಬಂಧಿಸಿ ಉತ್ತಮ ಕಾರ್ಯ ಮಾಡಿದೆ ಎಂದು ಐಜಿಪಿ ಶ್ಲಾಘಿಸಿ 25 ಸಾವಿರ ಬಹುಮಾನವನ್ನು ಘೋಷಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನವಾಗಿಲ್ಲ. ಈ ಬಗ್ಗೆ ಯಾವುದೇ ಪ್ರಕರಣವೂ ದಾಖಲಾಗಿಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ಗಳಲ್ಲಿ ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಎಎಸ್ಪಿ ಆರ್.ಶಿವಕುಮಾರ, ಡಿವೈಎಸ್ಪಿ ಡಿ.ಅಶೋಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.