ಲೋಕದರ್ಶನ ವರದಿ
ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ಪೊಲೀಸ್ ಧ್ವಜ ದಿನಾಚರಣೆ ಆಚರಣೆ
ಧಾರವಾಡ 03: ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ ನಿನ್ನೆ (ಏ.2) ರಂದು ಪ್ರಥಮವಾಗಿ ಪೊಲೀಸ್ ಧ್ವಜ್ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡ ನಿವೃತ್ತ ಪೊಲೀಸ್ ಉಪಾಧೀಕ್ಷಕರು ವೈ.ಡಿ.ಅಗಸಿಮನಿ ಅವರು ಭಾಗವಹಿಸಿ, ನಿವೃತ್ತರಿಗೆ ಆರೋಗ್ಯಭಾಗ್ಯ ಯೋಜನೆಯಲ್ಲಿ ಇನ್ನು ಹೆಚ್ಚಿನ ಸೌಲಭ್ಯ ನೀಡಬೇಕೆಂದು ಎಂದು ಹೇಳಿದರು.
ಧಾರವಾಡ ನಗರದಲ್ಲಿ ವಾಸವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಪೊಲೀಸ್ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಬುನಾಧಿ ತರಬೇತಿಯಲ್ಲಿರುವ 394 ಜನ ಪ್ರಶಿಕ್ಷಣಾರ್ಥಿಯವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ತರಬೇತಿ ಶಾಲೆ, ಧಾರವಾಡದ ಪೊಲೀಸ್ ಅಧೀಕ್ಷಕರು ಮತ್ತು ಕೆ.ಎಸ್.ಪಿ.ಎಸ್ ಪ್ರಾಂಶುಪಾಲ ಎಂ.ಎಂ.ಯಾದವಾಡ ಅವರು ಸ್ವಾಗತಿದರು.
ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಉಪಾಧೀಕ್ಷ ಹರೀಶ್ಚಂದ್ರ ನಾಯಕ ಅವರು ವಂದಿಸಿದರು.