ಕವಿಗಳು ಜನಗಳ ಧ್ವನಿಯಾಗಬೇಕು: ಸನದಿ

ಬೆಳಗಾವಿ: ಕವಿತೆಗೆ ವ್ಯಾಖ್ಯೆಗಳಿರು ವುದಿಲ್ಲ,  ಮೊದಲು ಭಾವನೆಗಳ ಅಭಿವ್ಯಕ್ತಿಯಾಗಬೇಕು. ತುಳಿತಕ್ಕೊ ಳಗಾದವರ ನಿರ್ಗತಿಕರ ಬದುಕನ್ನು ತಾವು ಕಂಡುಂಡ ರೀತಿಯಲ್ಲಿ ಬರೆದು ಅರಿವು  ಮೂಡಿಸಿ ಕವಿಗಳು  ಜನಗಳ ಧ್ವನಿಯಾಗಬೇಕು ಎಂದು ಯುವಕವಿ ನದೀಮ್ ಸನದಿ ಹೇಳಿದರು.

ಇಲ್ಲಿನ ಅಂಬೇಡ್ಕರ್ ಉದ್ಯಾನವನದಲ್ಲಿ ಸೋಮವಾರ 03 ರಂದು ಬಂಡಾಯ ಸಾಹಿತ್ಯ ಸಂಘಟನೆಯಿಂದ ಆಯೋಜಿಸಿದ ಡಾ. 'ನಾವು ನಮ್ಮತನ' ಕವಿಗೋಷ್ಠಿಯಲ್ಲಿ  ಆಶಯ ನುಡಿಗಳನ್ನು ಉದ್ದೇಶಿಸಿ ಅವರು ಮಾತಾನಾಡಿ,ಆಳುವ ಸರಕಾರಗಳು ಹದತಪ್ಪುತ್ತಿದ್ದಾಗ ಕವಿ ಕಲಾವಿದರು ಪ್ರತಿರೋಧಿಸಬೇಕಾಗುತ್ತದೆ. ವಿರೋಧ ಪಕ್ಷವಾಗದೆ ಸಮತೂಕದಲ್ಲಿ ವಿಮಶರ್ಿಸಿ ಅವರು ಜನಗಳ ಕಣ್ಣು ತೆರೆಸಿ ಜಾಗೃತಗೊಳಿಸಬೇಕು ಎಂದರು. 

ಅಧ್ಯಕ್ಷತೆ ವಹಿಸಿ ಕವಯತ್ರಿ  ಡಾ. ಅನಸೂಯ ಕಾಂಬಳೆ ಮಾತನಾಡಿ, ಸಮಾಜಕ್ಕೆ ಕಂಟಕವಾಗಿರುವ ಜನವಿರೋಧಿ ವ್ಯವಸ್ಥೆಯನ್ನು ನಾಶ ಮಾಡಲು ಕವಿಗಳಾದವರು ಖಡ್ಗ ಹಿಡಿಯಬೇಕಾಗಿಲ್ಲ, ಕಾವ್ಯವನ್ನೇ ಖಡ್ಗವಾಗಿಸಿ ಜನರ ನೋವಿಗೆ ಮಿಡಿವ ಪ್ರಾಣಮಿತ್ರರಾಗಬೇಕು. ಬಹು ಜನರ ಬಿಡುಗಡೆಗಾಗಿ ಸಂಘಟಿತರಾಗಿ ಹೋರಾಡುತ್ತ ನಿರಂತರ ಬರೆಯಬೇಕು ಎಂದು ಹೇಳಿದರು.

ಉದ್ಯಾನವನದಲ್ಲಿ ಹೂವಿನ ಸಸಿ ನೆಡುವುದರ ಮೂಲಕ ಕವಿಗೋಷ್ಠಿ ಉದ್ಘಾಟಿಸಿ  ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಡಿವೆಪ್ಪ ಇಟಗಿ, ಅಪೂವರ್ಾ ಕಾಂಬಳೆ, ಕುಮಾರ ತಳವಾರ, ಗೌತಮ ಮಾಳಗೆ,ತೇಜಸ್ವಿನಿ ಲೋಕುರೆ, ದೇಮಣ್ಣಾ ಸೊಗಲದ, ಮನೋಹರ ಕಾಂಬಳೆ, ಲಲಿತಾ ಹಿರೇಮಠ, ವಿಠ್ಠಲ ದಳವಾಯಿ, ಸಂತೋಷ ನಾಯಕ, ಸರಿತಾ ಪಾಟೀಲ, ಸಿದ್ದರಾಮ ತಳವಾರ, ಸುನಂದಾ ಭರಮನಾಯ್ಕರ್, ಪಲ್ಲವಿ ಕಾಂಬಳೆ ಸೇರಿದಂತೆ ಇಪ್ಪತ್ತೆರಡು ಜನ ವೈವಿಧ್ಯಮಯ ಕವನ ವಾಚನ ಮಾಡಿದರು. ಕಾರ್ಯಕ್ರಮ ಸಂಯೋಜಕರಾದ ಗಜಾನನ ಸಂಗೋಟೆ, ಮಂಜುನಾಥ ಪಾಟೀಲ,  ಬಾಲಕೃಷ್ಣ ನಾಯಕ, ಅನಿಲ ನಡುವಿನಕೇರಿ, ಸೈದು ಹಿರೇಮನಿ, ಹನುಮಂತ ಯರಗಟ್ಟಿ ವಿದ್ಯಾಥರ್ಿ ಮುಖಂಡರಾದ ರಮೇಶ್ ದಾಸನಟ್ಟಿ, ವಿಠ್ಠಲ ಜೈನಾಪೂರ, ರೋಹಿತ ರಾಠೋಡ,  ವಿಶಾಲ ಮೇತ್ರೆ, ನಾಗರಾಜ ದೊಡಮನಿ, ಶ್ರೀದೇವಿ ಕಳಸಪ್ಪಗೋಳ, ಅನುರಾಧಾ ಕನಸಗೇರಿ, ಸಾಂವಕ್ಕಾ ಸೊಗಲದ ಬಂಡಾಯ ಸಂಘಟನೆಯ ಸದಸ್ಯರಾದ  ಶಂಕರ ಬಾಗೇವಾಡಿ, ನೀಲಕಂಠ ಭೂಮಣ್ಣವರ, ಸುಭಾಷ್ ಶಿರಗಾಂವ್ಕರ್, ಶಂಕರ ಕೊಡತೆ, ಮಂಜುನಾಥ್ ಮಟಕರಿ, ಗೋಪಾಲ ಕಟ್ಟೆಪ್ಪಗೋಳ, ಮಹಾಲಿಂಗಪ್ಪ ಅಲಬಾಳ, ಸರಸ್ವತಿ ಪತ್ತಾರ, ಪ್ರಮೋದ ತಳವಾರ, ಸುನಿತಾ ಮಿರಾಸಿ ಮುಂತಾದವರು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಕಾವೇರಿ ಬುಕ್ಯಾಳಕರ, ರಾಘವೇಂದ್ರ ಬಂಕಪ್ಪಗೋಳ ಅನಿಕೇತನ ಗೀತೆ ಹಾಡಿದರು. ಸಚೀನ್ ಮಾಳಗೆ ಸ್ವಾಗತಿಸಿದರು ಹಾಗೂ ಇತರರು ಇದ್ದರು. ಸುಧಾ ಕೊಟಬಾಗಿ ಕಾರ್ಯಕ್ರಮ ನಿರೂಪಿಸಿದರು ದಿವ್ಯಾ ಕಾಂಬಳೆ ವಂದಿಸಿದರು.