ಲೋಕದರ್ಶನ ವರದಿ
ಸಿದ್ದಾಪುರ, 27; ಕವನ ಎನ್ನುವುದು ಸಮಾಜದಲ್ಲಿಯ ನಡೆಯುವ ಕ್ರೀಯೆಯ ಪ್ರತಿಕ್ರೀಯೆ. ಅದು ಹಲವು ಬಗೆಯಲ್ಲಿ ಇರುತ್ತದೆ. ಕಾವ್ಯವನ್ನು ಭಿನ್ನವಾಗಿ ಕಟ್ಟಬೇಕು. ವೈಜ್ಞಾನಿಕ ವಿವರವನ್ನು ನೀಡುವುದು ಇಂದಿನ ಕಾವ್ಯದ ಅಗತ್ಯ .ಕಾವ್ಯ ಬರೆಯುವ ಕ್ರೀಯೆ ಮನೋವೈಜ್ಞಾನಿಕ ಪ್ರಕ್ರೀಯೆ ಎಂದು ಚಿತ್ರಸಿರಿ ಶಿರವಂತೆಯ ಮುಖ್ಯಸ್ಥರಾದ ಚಂದ್ರಶೇಖರ ಶಿರವಂತೆ ಹೇಳಿದರು.
ಅವರು ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ 'ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ' ಉದ್ಘಾಟಿಸಿ ಮಾತನಾಡಿದರು. ನಮ್ಮ ನಡುವಿನ ನೋವು. ನಲಿವು, ಪ್ರೀತಿ ಇವುಗಳನ್ನು ಕಾವ್ಯದಲ್ಲಿ ನೊಡುತ್ತೇವೆ. ಇವುಗಳು ಮೊದಲಿನಿಂದಲೂ ಇದೆ.ಮನುಕುಲಕ್ಕೆ ಹೊರತಾದ ಪುರಾಣವು ಯಾವುದು ಇಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಾಜಮುಖಿ ಪತ್ರಿಕೆ ಸಂಪಾದಕ ಕನ್ನೇಶ್ ಕೋಲಶಿಸರ್ಿ ಮಾತನಾಡಿ ಒಂದು ಚೌಕಟ್ಟನ್ನು ಮುರಿದು ಕಟ್ಟುವ ಕೆಲಸ ಕಾವ್ಯದಲ್ಲಿ ಇರಬೇಕು. ಬದುಕಿನ ಪ್ರತಿಯೊಂದು ಕಾವ್ಯಕ್ಕೆ ಪ್ರೇರಣೆಯಾಗಬೇಕು ಎಂದರು. ಸಾಹಿತಿ ಕೆ.ಬಿ.ವೀರಲಿಂಗನ ಗೌಡ್ರ ಮಾತನಾಡಿ ಮೊದಲು ನಾವು ಜಾತಿಯನ್ನು ಕಳಚಿಕೊಳ್ಳಬೇಕು. ಜಾತಿ, ಧರ್ಮ, ಲಿಂಗವನ್ನು ಮೀರಿ ಬರೆಯಬೇಕು. ನನ್ನೊಳಗಿನ ಅರಿವು,ಹೃದಯದ ಭಾಷೆಯಿಂದ ಕವಿತೆ ಬರಬೇಕು ಎಂದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗರಾಜ ನಾಯ್ಕ ,ಮಾಳ್ಕೋಡ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾವ್ಯ ಬದುಕು ಎನ್ನುತ್ತೇವೆ, ಆದರೆ ಬದುಕೆ ಕಾವ್ಯವಾಗಿರುತ್ತದೆ. ಅನೇಕರು ತಮ್ಮ ಬದುಕನ್ನೆ ಕಾವ್ಯವಾಗಿಸಿಕೊಂಡಿದ್ದಾರೆ. ತಾಲೂಕಾ ಮಟ್ಟದ ಕಾವ್ಯ ಕಮ್ಮಟ ನಡೆಸುವ ಬಗ್ಗೆ ಪರಿಷತ್ ಚಿಂತೆನೆ ನಡೆಸಿದೆ ಎಂದರು.ಕ.ಸಾ.ಪ ತಾಲೂಕು ಗೌರವ ಕಾರ್ಯದಶರ್ಿ ಎಂ.ವಿಠ್ಠಲ ಅವರಗುಪ್ಪ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಶಿವಾನಂದ ಹೊನ್ನೆಗುಂಡಿ,ವೆಂಕಟೇಶ ಮಡಿವಾಳ, ಟಿ.ಕೆ.ಎಂ.ಆಜಾದ್. ವಿನೋದಾ ಭಟ್, ನೂತನ ನಾಯ್ಕ, ಬಸವರಾಜ ಬಿಸ್ನಾಳ, ಪ್ರಕಾಶ ಬಿ.ಜಿ, ಶೋಭಾ ಹಿರೇಕೈ, ಸುಧಾ .ಎಂ, ಲಕ್ಷ್ಮಣ ಬಡಿಗೇರ, ಎಂ.ವಿಠ್ಠಲ ಅವರಗುಪ್ಪ, ಮಾರುತಿ ಆಚಾರಿ, ನಾಗರಾಜ ಅಂಬಿಗ, ಅಸ್ಲಾಂ ಯು ಶೇಕ್, ಅಪರ್ಿತಾ ಭಂಡಾರಿ, ಸಹನಾ ಹೆಗಡೆ, ಜಿ.ಎಂ.ಕುಮಟಾಕರ, ಸುಧಾರಾಣಿ ನಾಯ್ಕ ಇವರುಗಳು ತಮ್ಮ ಕವನ ವಾಚಿಸಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸುಮಿತ್ರಾ ಶೇಟ್ ಭಾವಗೀತೆ ಹಾಡಿದರು. ಗೌರವ ಕಾರ್ಯದಶರ್ಿ ಎಂ.ವಿಠ್ಠಲ ಅವರಗುಪ್ಪ ಸ್ವಾಗತಿಸಿದರು. ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಟಿ.ಕೆ.ಎಂ ಆಜಾದ್ ವಂದಿಸಿದರು.